ನುಡಿ ಜಾತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಹರಟೆ ಕಟ್ಟೆ
Team Udayavani, Feb 4, 2020, 11:51 AM IST
ಕಲಬುರಗಿ: ಸೂರ್ಯನಗರಿ ಕಲಬುರಗಿಯಲ್ಲಿ 32 ವರ್ಷಗಳ ಬಳಿಕ ನಡೆಯುತ್ತಿರುವ ಅಕ್ಷರ ಜಾತ್ರೆ ಕನ್ನಡಾಭಿಮಾನಿಗಳು, ಸಾಹಿತ್ಯಾಸ್ತಕರಿಗೆ ಹೊಸ ಅನುಭವ ನೀಡಲಿದೆ. ಸಾಹಿತಿಗಳು, ಲೇಖಕರು, ಬರಹಗಾರರನ್ನು ಹತ್ತಿರದಿಂದ ನೋಡುವುದಲ್ಲದೇ ಅವರೊಂದಿಗೆ ಓದುಗರು ಮುಕ್ತವಾಗಿ ಚರ್ಚಿಸಲು ವೇದಿಕೆ ಬಿಸಿಲೂರಿನ ಸಾಹಿತ್ಯ ಸಮ್ಮೇಳನ ಒದಗಿಸಿದೆ.
ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿನ ದೊಡ್ಡ ಸಾಹಿತ್ಯ ಜಾತ್ರೆ. ದೊಡ್ಡ-ದೊಡ್ಡ ಸಾಹಿತಿಗಳು, ಕವಿಗಳು, ಬರಹಗಾರರ ಸಂಗಮ ಈ ಜಾತ್ರೆಯಲ್ಲಿ ಆಗುತ್ತದೆ. ಅಕ್ಷರ ಲೋಕದ ಅನುಭಾವಿಗಳ ಕುರಿತು ಯುವ ಬರಹಗಾರರು, ಸಾಹಿತ್ಯಾಸ್ತಕರಲ್ಲಿ ಸಹಜವಾದ ಕುತೂಹಲ ಇದ್ದೇ ಇರುತ್ತದೆ. ಇಂತಹ ಕುತೂಲಹ ತಣಿಸಲೆಂದೇ “ರೈಟರ್ ಲಾಂಜ್’ ಸ್ಥಾಪಿಸಲಾಗುತ್ತಿದೆ. ಈ “ರೈಟರ್ ಲಾಂಜ್’ನಲ್ಲಿ ಲೇಖಕರು, ಓದುಗರ ನೇರ ಮುಖಾಮುಖೀ ಆಗಬಹುದು. ಜತೆಗೆ ಸಾಹಿತಿಗಳು, ಲೇಖಕರೊಂದಿಗೆ ಬೆರತು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.
ಹೆಚ್ಚಾಗಿ ಕಾರ್ಪೋರೇಟ್ ಶೈಲಿಯಲ್ಲಿ ಪುಸ್ತಕ ಮಾರಾಟ ಮತ್ತು ಪ್ರದರ್ಶನದಲ್ಲಿ “ರೈಟರ್ ಲಾಂಜ್’ ಇರುತ್ತದೆ. ಅಲ್ಲಿ ಕೃತಿಕಾರರು, ಓದುಗರು ಸಾಹಿತ್ಯದ ಬಗ್ಗೆ ಚರ್ಚೆ, ಅವಲೋಕನ ನಡೆಸುತ್ತಾರೆ. ಇದಕ್ಕೆ ಹರಟೆ ಕಟ್ಟೆ ಕೂಡ ಎನ್ನುತ್ತಾರೆ. ಇಂತಹದೊಂದು ವಿನೂತನ ಪ್ರಯತ್ನ ಕನ್ನಡ ಸಾಹಿತ್ಯ ಸಮ್ಮೇಳನದ ಮಟ್ಟಿಗೆ ಪ್ರಪ್ರಥಮ ಹಾಗೂ ಹೊಸತು.
ಒಂದಲ್ಲ, ಎರಡು ಲಾಂಜ್: ಗುಲಬರ್ಗಾ ವಿವಿ ಆವರಣದಲ್ಲಿ ಸಮ್ಮೇಳನಕ್ಕೆ ಅಂತಿಮ ಸಿದ್ಧತೆಗಳು ನಡೆದಿದ್ದು, ಸಮ್ಮೇಳನದ ಕೇಂದ್ರ ಬಿಂದುವಾಗಿ 405 ಪುಸ್ತಕ ಮಳಿಗೆಗಳು ತೆರೆಯಲಿವೆ. ಪುಸ್ತಕ ಪ್ರೇಮಿಗಳು ಪುಸ್ತಕ ಖರೀದಿಸುವ ಸ್ಥಳದಲ್ಲೇ “ರೈಟರ್ ಲಾಂಜ್’ ನಿರ್ಮಿಸಲಾಗುತ್ತಿದೆ. ಅದು ಒಂದಲ್ಲ, ಎರಡು ಲಾಂಜ್‌ಗಳು ಸಾಹಿತ್ಯಾಸಕ್ತರಿಗಾಗಿ ಸ್ಥಾಪಿಸಲಾಗುತ್ತಿದೆ. ನಾಲ್ಕು ಮಳಿಗೆಗಳ ವೀಸ್ತಿರ್ಣ ಪ್ರದೇಶದಲ್ಲಿ ಒಂದು ಕಟ್ಟೆಯಂತೆ ಒಟ್ಟು ಮಳಿಗೆ ಪ್ರದೇಶದಲ್ಲಿ ಇವುಗಳನ್ನು ನಿರ್ಮಿಸಲಾಗುತ್ತದೆ ಎಂದು ಮಳಿಗೆ ಸಮಿತಿ ಅಧ್ಯಕ್ಷರಾದ ಶಾಸಕ ಡಾ| ಅಜಯ್ ಸಿಂಗ್ ತಿಳಿಸಿದರು.
ಗುಂಪು ಚರ್ಚೆಗೆ ದುಂಡು ಮೇಜಿನ ರೀತಿಯಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಸಮ್ಮೇಳನಕ್ಕೆ ಬರುವ ಖ್ಯಾತ ಲೇಖಕರಿಗೆ, ಸಾಹಿತಿಗಳಿಗೆ ರೈಟರ್ ಲಾಂಜ್‌ಗೆ ಆಗಮಿಸುವಂತೆ ಪ್ರಮುಖ ವೇದಿಕೆಯಲ್ಲೇ ಆಹ್ವಾನ ನೀಡಲಾಗುತ್ತದೆ. ನಿರಂತರವಾಗಿ ಅಲ್ಲಿ ಸಾಹಿತಿಗಳು ಇರುವಂತಹ ವ್ಯವಸ್ಥೆ ಮಾಡಲಾಗುತ್ತದೆ.
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.