ಸಿದ್ದಾಂತ ಶಿಖಾಮಣಿಯಿಂದ ಬದುಕು ಹಸನು
Team Udayavani, Aug 31, 2022, 5:53 PM IST
ಅಫಜಲಪುರ: ಮನುಷ್ಯ ಜೀವನದಲ್ಲಿ ಸಂಸಾರದ ಜಂಜಾಟ, ತೊಳಲಾಟಗಳಲ್ಲಿ ಬಿದ್ದು ಮನಃಶಾಂತಿ ಕಳೆದುಕೊಳ್ಳದೇ ಇರಲು ಸಿದ್ಧಾಂಥ ಶಿಖಾಮಣಿ ಓದಿದರೇ ಬದುಕು ಹಸನಾಗುತ್ತದೆ ಎಂದು ಸೊಲ್ಲಾಪುರ ಸಂಸದ ಹಾಗೂ ಗೌಡಗಾಂವ ಮಠದ ಪೂಜ್ಯ ಡಾ| ಜಯಸಿದ್ದೇಶ್ವರ ಸ್ವಾಮೀಜಿ ನುಡಿದರು.
ಪಟ್ಟಣದ ಮಳೇಂದ್ರ ಮಠದ ಆವರಣದಲ್ಲಿ ಶ್ರಾವಣ ಮಾಸ ಮುಕ್ತಾಯದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಹಬ್ಬ, ಹರಿದಿನಗಳನ್ನು ಆಚರಣೆ ಮಾಡಲು ಒಂದೊಂದು ಕಾಲ, ದಿನ, ಮೂಹೂರ್ತ ನಿಗದಿ ಮಾಡಿದ್ದಾರೆ. ಇದನ್ನೆಲ್ಲ ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಎಲ್ಲರೂ ಸಿದ್ದಾಂತ ಶಿಖಾಮಣಿ ಓದಿ ಎಂದು ಸಲಹೆ ನೀಡಿದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಮಳೇಂದ್ರ ಮಠ ಭಕ್ತಿ, ಭಾವೈಕ್ಯತೆ ಸಾರಿದ ಮಠವಾಗಿದೆ. ಅದರಲ್ಲೂ ಈಗಿನ ಶ್ರೀಗಳಾದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಎಲ್ಲ ಜಾತಿ, ಜನಾಂಗದವರನ್ನು ಸಮಾನವಾಗಿ ಕಾಣುತ್ತ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಮಾದನಹಿಪ್ಪರಗಾ, ಚಿನ್ಮಯಗಿರಿ, ಆಲಮೇಲ, ಯಂಕಂಚಿ, ಶ್ರೀನಿವಾಸ ಸರಡಗಿ ಶ್ರೀಗಳು ಆಶಿರ್ವಚನ ನೀಡಿದರು. ಗಂಗಾಧರ ಶ್ರೀಗಿರಿ, ಶಿವಪುತ್ರ ಸಂಗೋಳಗಿ, ಸಿದ್ಧಯ್ಯ ಸ್ವಾಮಿ ಕರ್ಜಗಿ, ಶಿವಶರಣಪ್ಪ ಸಿರಿ, ರವೂಫ್ ಪಟೇಲ್, ಪುರಸಭೆ ಮುಖ್ಯಾಧಿಕಾರಿ ಸುರೇಶ ಬಬಲಾದ, ಧರ್ಮಸ್ಥಳ ಸಂಸ್ಥೆ ತಾಲೂಕು ಅಧಿಕಾರಿ ಶಿವರಾಜ ಆಚಾರ್ಯ ಇನ್ನಿತರರು ಇದ್ದರು. ಚಂದ್ರಶೇಖರ ಕರ್ಜಗಿ ಸ್ವಾಗತಿಸಿದರು, ಶಿವಕುಮಾರ ಗುಂದಗಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.