ಚಿಂಚೋಳಿ: ಹಸರಗುಂಡಗಿ ಗ್ರಾಮ ಪಂಚಾಯತ್; ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ
Team Udayavani, Mar 16, 2022, 5:24 PM IST
ಚಿಂಚೋಳಿ: ತಾಲೂಕಿನ ಹಸರಗುಂಡಗಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀದೇವಿ ಪರ್ವತಕುಮಾರ ದೇಸಾಯಿ ಮರಪಳ್ಳಿ ಉಪಾಧ್ಯಕ್ಷರಾಗಿ ಜಗನ್ನಾಥ ಸೋಮಸಿಂಗ ರಾಠೋಡ ಇದ್ದಲಮೋಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಸರಗುಂಡಗಿ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣಾ ಪ್ರಕ್ರಿಯಲ್ಲಿ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಶ್ರೀದೇವಿ ಪರ್ವತಕುಮಾರ ದೇಸಾಯಿ ಮತ್ತು ಪರಿಶಿಷ್ಟ ಜಾತಿ ಸ್ಥಾನಕ್ಕೆ ಜಗನ್ನಾಥ ಸೋಮಸಿಂಗ ರಾಠೋಡ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು.
ಹೆಚ್ಚು ನಾಮಪತ್ರಗಳು ಸಲ್ಲಿಕೆ ಆಗದ ಕಾರಣ ಚುನಾವಣಾ ಅಧಿಕಾರಿ ಅಂಜುಮ ತಬಸುಮ್ ಚುನಾವಣಾ ಫಲಿತಾಂಶ ಪ್ರಕಟಿಸಿದರು.
ಪಿಡಿಒ ಪ್ರತಿಕ್ಷಾ, ಡಿಸಿಸಿಬ್ಯಾಂಕ ನಿರ್ದೇಶಕ ಗೌತಮ ಪಾಟೀಲ್, ಸಂತೋಷ ಗಡಂತಿ, ಸಂತೋಷರಡ್ಡಿ, ಭವಾನಿ,ಗೋಪಾಲರೆಡ್ಡಿ ಕೊಳ್ಳುರ, ಗ್ರಾಪಂ ಸದಸ್ಯರಾದ ಆನಂದ ಕುಮಾರ,ಸಿದ್ದಮ್ಮ, ಅಮಿತಾ ,ಕಮಲಾಬಾಯಿ, ಇಸಾಮೊದ್ದಿನ, ಶೋಭಾಬಾಯಿ, ಮೋಹನ, ಇಸ್ಮಾಯಿಲ್ ಬೀ, ಸರಸ್ವತಿ, ಮಾಪಣ್ಣ, ಮಮತಾ,ಸೂರ್ಯಕಾಂತ, ಬಕ್ಕಪ್ಪ, ಉಮಾದೇವಿ,ಪದ್ಮಾವತಿ ಭಾಗವಹಿಸಿದರು.
ಅವಿರೋಧವಾಗಿ ಆಯ್ಕೆ ಆಗಿರುವುದಕ್ಕೆ ಮರಪಳ್ಳಿ ಹಸರಗುಂಡಗಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿಕೊಂಡು ಪಟಾಕಿ ಸಿಡಿಸಿ ಸಂತಸ ಪಟ್ಟರು.
ಗೌತಮ ಪಾಟೀಲ್, ಬಿಜೆಪಿ ತಾಲೂಕು ಅಧ್ಯಕ್ಷ ಸಂತೋಷ ಗಡಂತಿ ಇನ್ನಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.