ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರುವೆ: ಎಂ.ವೈ. ಪಾಟೀಲ
Team Udayavani, Sep 28, 2018, 10:42 AM IST
ಅಫಜಲಪುರ: ಪ್ರತಿಯೊಬ್ಬ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಕೆಂದು ಬಯಸುತ್ತಾರೆ. ಆದರೆ ನಾನು ಮಕ್ಕಳಿಗಾಗಿ
ಆಸ್ತಿ ಮಾಡಿಲ್ಲ, ಬದಲಿಗೆ ಅವರನ್ನೇ ಆಸ್ತಿಯನ್ನಾಗಿ ಮಾಡಿದ್ದೇನೆ. ಹೀಗಾಗಿ ಇಂದು ಸಾವಿರಾರು ಜನರು ನನ್ನ ಮಕ್ಕಳನ್ನು ತಮ್ಮ ಮಕ್ಕಳಂತೆ, ತಮ್ಮ ಮನೆಯ ಮಗನಂತೆ ಕಂಡು ಪ್ರೀತಿ ತೋರುತ್ತಿದ್ದಾರೆ ಎಂದು ಶಾಸಕ ಎಂ.ವೈ. ಪಾಟೀಲ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ನ್ಯಾಷನಲ್ ಪಂಕ್ಷನ್ ಹಾಲ್‌ನಲ್ಲಿ ಮಾಶಾಳ ಜಿಪಂ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ ಅಭಿಮಾನಿಗಳ ಬಳಗ, ಅರುಣಕುಮಾರ ಪಾಟೀಲ ಸ್ನೇಹಿತರ ಬಳಗ ಏರ್ಪಡಿಸಿದ್ದ ಅರುಣಕುಮಾರ ಪಾಟೀಲ ಅವರ 45ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ರಾಜಕೀಯ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಆದರೆ ಜನರ ಒಡನಾಟದಿಂದ ವಿಮುಖನಾಗಿಲ್ಲ. ಅಲ್ಲದೆ ಸೋಲು, ಗೆಲುವುಗಳನ್ನು ಎಂದಿಗೂ ಲೆಕ್ಕ ಹಾಕದೆ ಜನರಿಗಾಗಿ ಜೀವನ ಸವೆಸಿದ್ದೇನೆ. ಅದನ್ನೇ ನನ್ನ ಮಕ್ಕಳಿಗೂ ಕಲಿಸಿದ್ದೇನೆ. ಹೀಗಾಗಿ ನನ್ನ ಸುಪುತ್ರ ಅರುಣಕುಮಾರ ಪಾಟೀಲ ಕೂಡ ಜನರ ಸೇವೆಗಾಗಿ ರಾಜಕೀಯ ಸೇರಿ ಜಿ.ಪಂ ಸದಸ್ಯರಾಗಿ ಜನರ ಸೇವೆ ಮಾಡುತ್ತಿದ್ದಾರೆ. ನಾನು ಆತನಿಗೆ ಹೇಳುವುದು ಒಂದೇ ಮಾತು ಜನರ ಕಷ್ಟಕ್ಕೆ ಕಿವಿಯಾಗಿ, ಕೈಲಾದ ಸಹಾಯ ಮಾಡು. ಜನರ ಸಮಸ್ಯೆಗಳಿಗೆ ಸ್ಪಂದಿಸು ಎಂಬುದಾಗಿ ಎಂದರು.
ನಾನು ರಾಜಕೀಯಕ್ಕಾಗಿ ನನ್ನ ಆಸ್ತಿ ಕಳೆದುಕೊಂಡಿದ್ದೇನೆ. ಆದರೂ ಜನರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ, ಅದೇ ನನಗೆ
ದೊಡ್ಡ ಆಸ್ತಿಯಾಗಿದೆ. ಅರುಣಕುಮಾರ ಎಂ.ವೈ. ಪಾಟೀಲ ಮಗನೆಂದು ಗುರುತಿಸಿಕೊಳ್ಳದೆ ಸ್ವಂತ ಬಲದಲ್ಲಿ ಹೆಸರುಗಳಿಸಿ ಬದುಕಿ ತೋರಿಸಬೇಕು ಎನ್ನುವುದೇ ನನ್ನ ಆಶಯ ಎಂದು ಹೇಳಿದರು.
ಮಾಶಾಳ ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿ, ನನ್ನ ಜನ್ಮದಿನಕ್ಕೆ ಬಂದು ಶುಭಕೋರಿದ ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ಸೇವೆಯಿಂದ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ತಾಲೂಕಿನ ಸರ್ವಾಂಗೀಣ ಅಭವೃದ್ಧಿಗೆ ಸಹಕಾರ ನೀಡಿ. ಅಫಜಲಪುರ ತಾಲೂಕನ್ನು ಎಲ್ಲರೂ ಸೇರಿ ಮಾದರಿ ತಾಲೂಕು ಮಾಡೋಣ ಎಂದರು.
ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಶ್ರೀಕಂಠ ಶಿವಾಚಾರ್ಯರು, ವೀರಮಹಾಂತ ಶಿವಾಚಾರ್ಯರು, ಶಾಂತವೀರ ಶೀವಾಚಾರ್ಯರು, ಚನ್ನಮಲ್ಲೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಮತೀನ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾತಲಿಂಗಪ್ಪ ಮೇತ್ರೆ, ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಭೀಮಶಂಕರ ಹೊನ್ನಕೇರಿ, ತುಕಾರಾಮಗೌಡ
ಪಾಟೀಲ, ಡಾ| ಸಂಜಯ ಪಾಟೀಲ, ಬೀರಣ್ಣ ಕಲ್ಲೂರ, ಪ್ರಕಾಶ ಜಮಾದಾರ, ಮಹಾದೇವಪ್ಪ ಕರೂಟಿ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಪಪ್ಪು ಪಟೇಲ್, ಚಂದು ದೇಸಾಯಿ, ಸಿದ್ದಾರಾಮಗೌಡ ಪಾಟೀಲ, ಮಕೂಲ್ ಪಟೇಲ್, ತುಕಾರಾಮಗೌಡ ಪಾಟೀಲ, ರವಿ ಶೆಟ್ಟಿ, ಶಿವಾನಂದ ಗಾಡಿಸಾಹುಕಾರ, ಗೌಡಪ್ಪಗೌಡ ಪಾಟೀಲ, ಶಿವಶಣಪ್ಪ ಹೀರಾಪುರ, ಎಸ್.ವೈ. ಪಾಟೀಲ, ಸಿದ್ದು ಶಿರಸಗಿ, ಶರಣು ಕುಂಬಾರ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.