ಕಲಬುರಗಿ: ಭಾರೀ ಮಳೆಗೆ ರಸ್ತೆ ಸಂಪರ್ಕ ಕಡಿತ; ಸಾರ್ವಜನಿಕರ ಪರದಾಟ
Team Udayavani, Oct 14, 2022, 10:54 AM IST
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಅನೇಕ ಗ್ರಾಮಗಳಲ್ಲಿ ನದಿ, ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ.
ತಾಲೂಕಿನ ಮುಲ್ಲಾಮಾರಿ ಜಲಾಶಯದಲ್ಲಿ ಹರಿದ ನೀರಿನಿಂದಾಗಿ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ಅಣವಾರ, ಗರಗಪಳ್ಳಿ ಮತ್ತು ಜಟ್ಟೂರು ಗ್ರಾಮಗಳ ಬಳಿ ನಿರ್ಮಿಸಿದ ಸೇತುವೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದರಿಂದ ರಸ್ತೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡು ಜನರು ತೊಂದರೆ ಪಡಬೇಕಾಯಿತು.
ಚಿಂಚೋಳಿ ತಾಲೂಕಿನಲ್ಲಿ ವ್ಯಾಪಕವಾಗಿ ಸುರಿದ ಮಳೆಗೆ ಚಂದ್ರಂಪಳ್ಳಿ ಮತ್ತು ಕೆಳದಂಡೆ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿರುವುದರಿಂದ ಕೋಡಿಗಳ ಮೂಲಕ ನೀರು ಹರಿದು ಬಿಟ್ಟ ಪರಿಣಾಮವಾಗಿ ಮುಲ್ಲಾಮಾರಿ ನದಿಯು ಮೈದುಂಬಿ ಹರಿಯುತ್ತಿದೆ. ಗುರುವಾರ ರಾತ್ರಿ ಸಿಡಿಲು ಗುಡುಗು ಮಿಂಚಿನಿಂದ ಕೂಡಿದ ಆರ್ಭಟದ ಮಳೆಗೆ ಜನರು ಬೆಚ್ಚಿ ಬಿದ್ದು ಭಯಭೀತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ
Koteshwara: ಸಂಭ್ರಮದ ಕೊಡಿಹಬ್ಬ…
Mangaluru: ಮೂಲಗೇಣಿ ಹಕ್ಕು ಸದನದಲ್ಲಿ ಚರ್ಚೆ: ಐವನ್ ಡಿ’ಸೋಜಾ
Aranthodu: ಕಾಡು ಪ್ರಾಣಿ ಎಂದು ಸಾಕು ನಾಯಿಗೆ ಗುಂಡು ಹಾರಿಸಿದ ಬೇಟೆಗಾರರು
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.