ಅಬ್ಬರಿಸಿದ ಮಳೆ ಹೊಡೆತಕ್ಕೆ ತತ್ತರಿಸಿದ ಬೆಳೆ
Team Udayavani, Aug 6, 2022, 3:06 PM IST
ವಾಡಿ: ಮಂಜು ಮುಸುಕಿನ ದೃಶ್ಯದಂತೆ ಅಬ್ಬರಿಸಿದ ಮಹಾ ಮಳೆಗೆ ಹೊಲ, ಗದ್ದೆಗಳು ಜಲಾವೃತವಾಗಿ ಬೆಳೆಸಾಲುಗಳು ತತ್ತರಿಸಿವೆ.
ಚಿತ್ತಾಪುರ ತಾಲೂಕಿನಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ವರುಣನಾರ್ಭಟಕ್ಕೆ ರೈತರು ಬೆಚ್ಚಿಬಿದ್ದಿದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆಟುಕುವ ಮೊದಲೇ ನೀರು ಪಾಲಾಗುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ. ಮೋಡ ಮುಗಿಲು ಆವರಿಸಿಕೊಂಡು ಕಗ್ಗತ್ತಲು ಆವರಿಸುತ್ತಿದ್ದಂತೆ ಭಾರಿ ಮಳೆಯ ಮುನ್ಸೂಚನೆ ಮೂಡಿ ಮಳೆಯ ಅಬ್ಬರ ಹೆಚ್ಚಿತ್ತು. ಒಂದೇ ನಿಮಿಷದಲ್ಲಿ ಹೊಲಗದ್ದೆಗಳು ನೀರಿನಿಂದ ಭರ್ತಿಯಾಗಿ ಬೆಳೆ ಮುಳುಗಿ ಜಲಪ್ರಳಯದ ದೃಶ್ಯ ಕಾಣಿಸಿತು.
ಹಸಿರು ಹಸಿರಾಗಿದ್ದ ಬಳವಡಗಿ, ಕೊಲ್ಲೂರ, ನಾಲವರ, ಸನ್ನತಿ, ಹಳಕರ್ಟಿ ಭಾಗದ ಹೊಲಗಳಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಹೊಳೆ ಹರಿಯುತ್ತಿದ್ದ ನೋಟ ಗೋಚರಿಸಿತು. ಮಳೆ ನೀರಿಗೆ ಕೊಚ್ಚಿಕೊಂಡು ಹೋದ ಬೆಳೆ ರಕ್ಷಿಸದೇ ರೈತರು ಗೋಳಾಡಿದರು.
ಅತಿವೃಷ್ಟಿ ಅವಲೋಕಿಸಿದ ಬೆಳೆ ಪರಿಶೀಲಿಸಿದ ಪ್ರಿಯಾಂಕ್
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲು ಕೊಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಬಳವಡಗಿ ಶಾಲೆ ಉದ್ಘಾಟನೆಗೆ ಹೊರಟ ಮಧ್ಯದಲ್ಲೇ ಮಳೆಗೆ ಸಿಲುಕಿದರು. ಮಳೆ ನಿಂತ ಮೇಲೆ ಕಾರಿನಿಂದ ಕೆಳಗಿಳಿದು ಕೋಲಕುಂದಾ ಸಮೀಪ ಜಲಾವೃತಗೊಂಡಿದ್ದ ಹೊಲಗಳನ್ನು ವೀಕ್ಷಿಸಿದರು.
ಹೆಸರು, ತೊಗರಿ, ಉದ್ದು, ಸೇಂಗಾ ಬೆಳೆಗಳೆಲ್ಲವೂ ನೀರುಪಾಲಾದ ಸ್ಥಿತಿಗೆ ಮರುಗಿದರು. ಅತಿವೃಷ್ಟಿಗೆ ಸಿಲುಕಿದ ಚಿತ್ತಾಪುರ ಮತಕ್ಷೇತ್ರದ ರೈತರ ಸಂಕಷ್ಟಕ್ಕೆ ನೆರವಾಗುವುದಾಗಿ ಭರವಸೆ ನೀಡಿದ ಪ್ರಿಯಾಂಕ್, ಬೆಳೆ ಸಮೀಕ್ಷೆಗೆ ಮುಂದಾಗುವಂತೆ ತಾಲೂಕಿನ ಅ ಧಿಕಾರಿಗಳಿಗೆ ಆದೇಶ ನೀಡಿದರು.
ಪರಿಹಾರಕ್ಕಾಗಿ ರೈತರ ಮನವಿ
ಮಳೆಯನ್ನೇ ನಂಬಿ ಮುಂಗಾರು ಬಿತ್ತನೆ ಮಾಡಿದ್ದ ನಾಲವಾರ ವಲಯದ ರೈತರು, ಮಳೆ ಹೊಡೆತದಿಂದಾಗಿ ಬೆಳೆ ನಷ್ಟ ಅನುಭವಿಸುವ ಮೂಲಕ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಕೃಷಿ ಚಟುವಟಿಕೆ ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ತತ್ತರಿಸಿದ್ದಾರೆ. ಆರಂಭದಲ್ಲಿ ಮಳೆ ಕೊರತೆ ಕಾಣಿಸಿತು. ಈಗ ಮಳೆ ಹೆಚ್ಚಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡಕ್ಕೂ ಸಿಲುಕಿ ಬೆಳೆ ಕೈಕೊಟ್ಟಿದೆ. ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದ್ದ ಹೆಸರು ಕೂಡ ಕೈಬಿಟ್ಟಿತು. ತೊಗರಿ ಮರು ಬಿತ್ತನೆ ಮಾಡಿದರೂ ಬದುಕುವ ಲಕ್ಷಣ ಕಾಣುತ್ತಿಲ್ಲ. ಈ ವರ್ಷ ಮತ್ತೆ ಬದುಕಿನ ಮೇಲೆ ಸಾಲದ ಹೊರೆ ಬಿದ್ದಿದೆ. ಸರ್ಕಾರದಿಂದ ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಶಾಸಕ ಖರ್ಗೆಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.