ಜೇವರ್ಗಿಯಲ್ಲಿ ಧಾರಾಕಾರ ಮಳೆ-ತುಂಬಿದ ಹಳ್ಳ ಕೊಳ್ಳ
Team Udayavani, Sep 9, 2017, 10:50 AM IST
ಜೇವರ್ಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ವಿವಿಧೆಡೆ ಪ್ರವಾಹ ಉಂಟಾಗಿದೆ.
ಗುರುವಾರ ಸಂಜೆ 5:30 ಗಂಟೆಗೆ ಆರಂಭವಾದ ಗುಡುಗು ಸಿಡಿಲು ಸಹಿತ ಮಳೆ ಸುಮಾರು ಮೂರು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಇದರಿಂದ ರಸ್ತೆಗಳು ನೀರಿನಲ್ಲಿ ಮುಳುಗುವಂತಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು.
ಪಟ್ಟಣದ ಅಖಂಡೇಶ್ವರ ವೃತ್ತದ ಬಳಿ ಮರಗೋಳ ಕಾಂಪ್ಲೆಕ್ಸ್ ಒಳಗೆ ನೀರು ನುಗ್ಗಿದ ಪರಿಣಾಮ ಅಗ್ನಿಶಾಮಕ ವಾಹನದ ಸಹಾಯದಿಂದ ನೀರು ಹೊರ ಹಾಕಲಾಯಿತು. ರಸ್ತೆಗಳಲ್ಲಿ ಚರಂಡಿ ನೀರು ಶೇಖರಣೆಗೊಂಡು ವಾಹನ ಸವಾರರು, ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವಂತಾಯಿತು. ಶಾಲೆ ಬಿಡುವ ಸಮಯದಲ್ಲೇ ಮಳೆ ಆರಂಭವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಾತ್ರಿ 8:00 ಗಂಟೆವರೆಗೆ ಶಾಲೆಯಲ್ಲೇ ಇರುವಂತಾಯಿತು. ಕೆಲವು ಪಾಲಕರು ಮಳೆಯಲ್ಲೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದರು.
ಮಳೆಯ ರಭಸಕ್ಕೆ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಹಳ್ಳದ ಸೇತುವೆ ಕುಸಿದು
ವಿದ್ಯಾರ್ಥಿಗಳು, ಲೋಕೋಪಯೋಗಿ ಸಿಬ್ಬಂದಿ ಹಾಗೂ ವಸತಿಗೃಹದಲ್ಲಿರುವ ಜನತೆ ಪರದಾಡುವಂತಾಯಿತು.
ಸೇತುವೆ ಗುರುವಾರ ರಾತ್ರಿ 7ಗಂಟೆ ಸುಮಾರಿಗೆ ಕುಸಿದಿದ್ದರಿಂದ ಜನರು ಮನೆಗಳಿಗೆ ಹೋಗದೆ ರಾತ್ರಿಯಿಡಿ ದೇವಸ್ಥಾನ ಹಾಗೂ ಗೆಳೆಯರ ಮನೆಗಳಲ್ಲಿ ವಾಸ್ತವ್ಯ ಮಾಡುವಂತಾಯಿತು. ಶುಕ್ರವಾರ ಮಧ್ಯಾಹ್ನ ಪ್ರವಾಹ ಕಡಿಮೆಯಾದ ಮೇಲೆ ಮನೆಗಳಿಗೆ ತೆರಳಿದರು.
ಅಲ್ಲದೇ ದತ್ತನಗರ ಹಾಗೂ ಚಿಕ್ಕಜೇವರ್ಗಿ ಬಡಾವಣೆಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತಗೊಂಡು ನಿವಾಸಿಗಳು ಮನೆ ಬಿಟ್ಟು ಹೊರಬಾರದಂತಾಗಿತ್ತು. ಪಟ್ಟಣದ ಶಾಂತನಗರ, ವಿದ್ಯಾನಗರ, ಓಂ ನಗರ, ಲಕ್ಕಪ್ಪ ಲೇಔಟ್ ಬಡಾವಣೆ ಸೇರಿದಂತೆ ಅನೇಕ ಕಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಯಿತು.
ಗ್ರಾಮೀಣ ಭಾಗದಲ್ಲೂ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ತಾಲೂಕಿನ ಹರವಾಳ ಕ್ರಾಸ್ ಹತ್ತಿರ ರಾತ್ರಿ ರಾಷ್ಟ್ರೀಯ ಹೆದ್ದಾರಿ 218ರ ಮೇಲೆ ಸೇತುವೆ ಜಲಾವೃತಗೊಂಡು ಟ್ರಾಫಿಕ್ ಜಾಮ್ ಆಗಿ ಪರದಾಡುವಂತಾಯಿತು. ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬ ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ, ರಸ್ತೆಗಳು ಕಿತ್ತುಕೊಂಡು ಹೋಗಿವೆ.
ಗಿಡಮರಗಳು ಉರುಳಿ ಬಿದ್ದಿವೆ.
ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಇಂತಹ ಮಳೆ ಸುರಿದಿರಲಿಲ್ಲ, ಈಗಾಗಲೇ ಅಗತ್ಯದಷ್ಟು ಮಳೆಯಾಗಿದ್ದು, ಬೆಳೆಗಳಿಗೆ ಸಾಕಾಗಿದೆ. ಆದರೆ ಮಳೆ ಇದೇ ರೀತಿ ಮುಂದುವರಿದರೆ ಬೆಳೆಗಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.