Kalaburagi ಜಿಲ್ಲೆಯಲ್ಲಿ ಧಾರಾಕಾರ ಮಳೆ; ಸಂತಸಗೊಂಡ ರೈತರು
Team Udayavani, Sep 3, 2023, 2:30 PM IST
ಕಲಬುರಗಿ: ಮೇಲಿಂದ ಮೇಲೆ ಕಣ್ಣು ಮುಚ್ಚಾಲೆ ಆಡುತ್ತಿದ್ದ ಮಳೆ ಅಂತೂ ಇಂತೂ ಶನಿವಾರ ಸಂಜೆಯಿಂದ ಧಾರಾಕಾರವಾಗಿ ಸುರಿಯುತ್ತಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ಸಣ್ಣದಾಗಿ ಸುರಿಯುತ್ತಿದ್ದ ಮಳೆ 9 ರಿಂದ 11 ಗಂಟೆಯವೆರೆಗೆ ಧಾರಾಕಾರವಾಗಿ ಸುರಿಯಿತು.
ಶನಿವಾರ ಸಂಜೆ 7 ಗಂಟೆಯಿಂದ 4 ಗಂಟೆಯವರೆಗೆ ಅಂದರೆ ಸುಮಾರು 9 ಗಂಟೆ ಕಾಲ ಸತತ ಧಾರಾದಾರ ಮಳೆ ಬಂದಿದೆ. ಶನಿವಾರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ನಿನ್ನೆಯಿಂದ ಇಂದಿನವರೆಗೂ ಒಟ್ಟು 35 ಮೀ.ಮೀ. ಮಳೆಯಾಗಿದೆ.
ಕಮಲಾಪುರ ತಾಲೂಕಿನ ಕಮಲಾಪುರದಲ್ಲಿ 14.8 ಮೀ.ಮೀ, ಮಹಾಗಾಂವ 18 ಮೀ. ಮೀ, ಶಹಾಬಾದ್ ತಾಲೂಕಿನಲ್ಲಿ 11 ಮೀ.ಮೀ, ಜೇವರ್ಗಿ ತಾಲೂಕಿನಲ್ಲಿ 28.4 ಮೀ.ಮೀ, ಯಡ್ರಾಮಿ ತಾಲೂಕಿನಲ್ಲಿ 31.2 ಮೀ.ಮೀ, ಆಳಂದ ತಾಲೂಕಿನಲ್ಲಿ 42 ಮೀ.ಮೀ, ಸೇಡಂ ತಾಲೂಕಿನಲ್ಲಿ 97.4 ಮೀ.ಮೀ, ಚಿಂಚೋಳಿ ತಾಲೂಕಿನಲ್ಲಿ 42.4 ಮೀ.ಮೀ, ಚಿತ್ತಾಪುರ ತಾಲೂಕಿನಲ್ಲಿ 105.2 ಮೀ.ಮೀ, ಕಾಳಗಿ ತಾಲೂಕಿನಲ್ಲಿ 22.4 ಮೀ.ಮೀ ಮಳೆಯಾಗಿದೆ.
ಜೂನ್ ತಿಂಗಳಲ್ಲಿ ಬರಬೇಕಾಗಿದ್ದ ಮಳೆ ಒಂದು ತಿಂಗಳ ತಡವಾಗಿ ಜುಲೈ ತಿಂಗಳ ಮೊದಲ ವಾರದಲ್ಲಿ ಮಳೆ ಬಂದಿತ್ತು. ಆಗ ಜಿಲ್ಲೆಯಲ್ಲಿ ರೈತರು ಜೋಳ, ತೊಗರಿ, ಗೋದಿ ಸೇರಿದಂತೆ ಇತರ ಬೆಳೆಗಳನ್ನು ಬಿತ್ತನೆ ಮಾಡಿದರು. ಮತ್ತೆ ಮಳೆರಾಯ ತಿರುಗಿ ನೋಡಲೇ ಇಲ್ಲ. ಇದರಿಂದ ರೈತರು ಕಂಗಾಲಾಗಿ ಮೋಡದತ್ತ ನೋಡುತ್ತ ಈಗ ಮಳೆ ಬಂದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ ಇಲ್ಲದಿದ್ದರೆ ಬೆಳೆ ಹಾಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆ ಬಾರದೆ ಇರುವುದರಿಂದ ರಾಜ್ಯ ಸರಕಾರ ತಲೆ ಕೆಡಿಸಿಕೊಂಡು ಬರಗಾಲ ಘೋಷಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಈ ಮಧ್ಯೆ ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು,ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶನಿವಾರದಿಂದ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಬರುತ್ತಿದ್ದು, ಈ ಮಳೆ ಭಾನುವಾರವೂ ಮುಂದುವರಿದಿದೆ.
ಇದನ್ನೂ ಓದಿ:ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ..?: ಸರ್ಕಾರದ ನಿಲುವು ಪ್ರಕಟಿಸಿದ ಅನುರಾಗ್ ಠಾಕೂರ್
ಶನಿವಾರದಿಂದ ಮಳೆ ಆರಂಭವಾಗಿದ್ದು, ಈ ಮಳೆ ಬೆಳೆಗಳಿಗೆ ಜೀವ ತುಂಬಿದಂತಾಗಿದ್ದು, ರೈತರು ಸಂತಸಗೊಂಡಿದ್ದು,ಈ ಮಳೆ ಇನ್ನೂ ನಾಲ್ಕೈದು ದಿನವ ಬಂದರೆ ಬೆಳೆಗಳು ಉತ್ತಮ ಬೆಳೆದು ಉತ್ತಮ ಫಸಲು ನೀಡಬಹುದು ಎನ್ನುತ್ತಾರೆ ಅನ್ನದಾತರು.
ಮಳೆಯಿಂದಾಗಿ ಜಿಲ್ಲೆಯ ಎಲ್ಲ ನದಿ, ಹಳ್ಳ, ಕೊಳ್ಳಗಳಿಗೆ ನೀರು ಬಂದಿದೆ. ಬತ್ತುತ್ತಿರುವ ಕೊಳವೆ ಬಾವಿಗಳಿಗೆ ಮರುಪುರಣವಾಗಿವೆ. ಒಟ್ಟಾರೆ ಈ ಮಳೆ ಜನ, ಜಾನುವಾರು, ಬೆಳೆಗಳಿಗೆ ಅನುಕೂಲವಾಗುವಂತಾಗಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯಲ್ಲಿ ಜೋಳ ಶೇ. 62 ರಷ್ಟು ಬಿತ್ತನೆಯಾದರೆ, ಅಕ್ಕಿ ಶೇ.41, ತೊಗರಿ ಶೇ.98ರಷ್ಟು, ಕಡಲೆಕಾಯಿ ಶೇ.10ರಷ್ಟು, ಎಳ್ಳು ಶೇ. 19 ರಷ್ಟು, ಸೂರ್ಯಕಾಂತಿ ಶೇ. 39 ರಷ್ಟು, ಸೋಯಾಬಿನ್ ಶೇ.96 ರಷ್ಟು, ಹತ್ತಿ ಶೇ. 105 ರಷ್ಟು, ಕಬ್ಬು ಶೇ. 109 ರಷ್ಟು ಬಿತ್ತನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.