ಹೇಮರಡ್ಡಿ ಮಲ್ಲಮ್ಮ ಹೆಸರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಯತ್ನ
Team Udayavani, May 6, 2017, 4:29 PM IST
ಕಲಬುರಗಿ: ರೆಡ್ಡಿ ಸಮಾಜದ ಜನರು ಬಹುತೇಕ ರೈತರಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಡಿಮೆ ಆದ್ದರಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹೆಸರಲ್ಲಿ ಶಿಕ್ಷಣ ಸಂಸ್ಥೆ, ಮಹಿಳೆಯರ ವಸತಿ ನಿಲಯ, ದೇವಾಲಯ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಉದ್ದೇಶ ರೆಡ್ಡಿ ಸಮಾಜದ ಮುಖಂಡರಿಗಿದೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲು ಯೋಚಿಸಲಾಗಿದೆ ಎಂದು ರಾಜ್ಯ ತೊಗರಿ ಮಂಡಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ತಿಳಿಸಿದರು.
ನಗರದ ಸರ್ವಜ್ಞ ಕಾಲೇಜಿನಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳೆಯರ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಮಹಿಳೆಯರು ಇದರ ಲಾಭ ಪಡೆಯಬೇಕು ಎಂದು ಕೋರಿದರು.
ಮುಖ್ಯ ಅತಿಥಿಯಾಗಿದ್ದ ಡಾ| ಇಂದಿರಾ ವೀರಭದ್ರಪ್ಪ ಮಾತನಾಡಿ, ಕುಟುಂಬದ ಎಲ್ಲ ಸದಸ್ಯರ ಆರೋಗ್ಯ, ಯೋಗಕ್ಷೇಮ ಮತ್ತು ಮಕ್ಕಳ ಶಿಕ್ಷಣ ಇನ್ನಿತರ ಎಲ್ಲ ಕೌಟುಂಬಿಕ ಜವಾಬ್ದಾರಿ ನಿರ್ವಹಿಸುವ ಮಹಿಳೆ ಅನಾರೋಗ್ಯದಿಂದ ಬಳಲುತ್ತಿರುವುದು ನೋವಿನ ಸಂಗತಿ ಎಂದರು.
ಡಾ| ಶರಣಬಸಪ್ಪ ಕಾಮರೆಡ್ಡಿ ಮಾತನಾಡಿ, 40 ವರ್ಷ ನಂತರದ ಮಹಿಳೆಯರಿಗೆ ಮೊಳಕಾಲು ನೋವು, ಬೆನ್ನು ನೋವು ಸಹಜ ಎಂಬಂತಾಗಿದೆ. ಆದ್ದರಿಂದ ಮೂಳೆ ಸಾಂದ್ರತೆ ಕಂಡು ಹಿಡಿಯುವ ಉಪಕರಣ ಬೆಂಗಳೂರಿನಿಂದ ತರಿಸಲಾಗಿದ್ದು,ಶಿಬಿರದಲ್ಲಿ ಭಾಗವಹಿಸಿರುವ ಮಹಿಳೆಯರಿಗೆ ಯಾವುದೇ ರೋಗ ಲಕ್ಷಣವಿದ್ದರೂ ಉಚಿತವಾಗಿ ಚಿಕಿತ್ಸೆ ನೀಡಿ, ಗುಣಪಡಿಸಲಾಗುವುದು ಎಂದರು.
ನೇತ್ರ ತಜ್ಞ ಡಾ| ವಿಶ್ವನಾಥ ರೆಡ್ಡಿ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಕನ್ನಡಕ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು ಎಂದರು. ಶಿಬಿರದಲ್ಲಿ 475 ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿ ಕೀಲುನೋವು, ರಕ್ತಪರೀಕ್ಷೆ, ಬಿಪಿ ಮತ್ತು ಹಾಗೂ ಇನ್ನಿತರ ಸ್ತ್ರೀ ರೋಗಗಳನ್ನು ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು, ಉಚಿತ ಔಷಧಿ ಪಡೆದುಕೊಂಡರು.
ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಎಲ್ಲಾ ಅತ್ಯಾಧುನಿಕ ಉಪಕರಣಗಳ ವಾಹನದಲ್ಲಿ ಸುಮಾರು 80 ಮಹಿಳೆಯರು ಮೆಮೊಗ್ರಾμ, ಪ್ಯಾಪಸ್ಮಿಯರ್ (ಗರ್ಭಾಶಯ ಕ್ಯಾನ್ಸರ್ ಪತ್ತೆ) ತಪಾಸಣೆ ಮಾಡಿಸಿಕೊಂಡರು. ಡಾ| ಸಂಜೀವರೆಡ್ಡಿ ನಂದನ್ ಡೈಯಾಗ್ನೊàಸ್ಟಿಕ್ಸ್ ಮತ್ತು ಚಂದ್ರಶೇಖರಗೌಡ ಕೊಲ್ಲೂರ ಬಾಬಾ ಹೌಸ್ ಹಾಗೂ ಡಾ| ವಿಕ್ರಮ ಸಿದ್ದಾರೆಡ್ಡಿ ಯುನೈಟೆಡ್ ಆಸ್ಪತ್ರೆ ಇವರು ಉಚಿತ ರಕ್ತ ಪರೀಕ್ಷೆ ಮಾಡಿದರು.
ವಿಜಯರೆಡ್ಡಿ ಬಸವೇಶ್ವರ ಮೆಡಿಕಲ್ ಸ್ಟೋರ್ ವತಿಯಿಂದ ಉಚಿತ ಔಷಧಿ ವಿತರಿಸಲಾಯಿತು. ಆರೋಗ್ಯ ಶಿಬಿರದಲ್ಲಿ ಡಾ| ಪ್ರಮೋದ ಇಟಗಿ, ಡಾ| ವಿಕ್ರಮ ಸಿದ್ದಾರೆಡ್ಡಿ, ಡಾ| ಶಾಂತಲಿಂಗ ನಿಗ್ಗುಡಗಿ, ಡಾ| ದಯಾನಂದರೆಡ್ಡಿ, ಡಾ| ಸುಷ್ಮಾ ಕುರಾಳ, ಡಾ| ವೀಣಾ ಸಿದ್ದಾರೆಡ್ಡಿ, ಡಾ| ಪ್ರತಿಮಾ ಕಾಮರೆಡ್ಡಿ, ಡಾ| ಸಂಜೀವರೆಡ್ಡಿ ಹಾಗೂ ಇತರರು ಭಾಗವಹಿಸಿ ಉಚಿತ ತಪಾಸಣೆ ನಡೆಸಿದರು.
ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಪ್ರೊ| ಚನ್ನಾರೆಡ್ಡಿ ಪಾಟೀಲ, ಹೆಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಆರ್. ಪಾಟೀಲ, ರೆಡ್ಡಿ ಸಮಾಜದ ರಾಜ್ಯ ಉಪಾಧ್ಯಕ್ಷ ವಿ.ಶಾಂತರೆಡ್ಡಿ, ವಿಜಯಲಕೀ ಎಸ್. ಪಾಟೀಲ, ಪಾಲಿಕೆ ಸದಸ್ಯ ಮಹೇಶ ರೆಡ್ಡಿ ಹೊಸೂರಕರ, ಖಜಾಂಚಿ ಸೂಗಣ್ಣ ಆವಂತಿ, ಉಪಾಧ್ಯಕ್ಷರಾದ ಚಂದ್ರಶೇಖರರೆಡ್ಡಿ ಪರಸರೆಡ್ಡಿ,
ಮಹಿಳಾ ಉಪಾಧ್ಯಕ್ಷರಾದ ಡಾ| ಸುಜಾತಾ ಬಂಡೇಶರೆಡ್ಡಿ, ರಮೇಶ ಪಾಟೀಲ, ಆರ್.ಎಸ್. ಪಾಟೀಲ ರೊಟ್ನಡಿಗಿ, ಬಾಪುಗೌಡ, ಶಂಕರಗೌಡ, ಶಂಕರ ಕಾಮರೆಡ್ಡಿ, ನಂದೀಶರೆಡ್ಡಿ, ಗುರುಬಸಪ್ಪ ಪಾಟೀಲ, ಎಸ್.ಎಸ್.ಪಾಟೀಲ ರೊಟ್ನಡಿಗಿ, ಶಾಂತರೆಡ್ಡಿ ಪೇಠ ಶಿರೂರ ಹಾಜರಿದ್ದರು. ಸಮಾಜದ ಕಾರ್ಯದರ್ಶಿ ಬಿ.ಆರ್. ಪಾಟೀಲ ಸ್ವಾಗತಿಸಿದರು. ಗೀತಾ ಚನ್ನಾರೆಡ್ಡಿ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್