ಡ್ರೈವಿಂಗ್ ನೈಪುಣ್ಯತೆ ಪರೀಕ್ಷೆಗೆ ಹೈಟೆಕ್ ಸ್ಪರ್ಶ
Team Udayavani, Sep 7, 2020, 4:21 PM IST
ಕಲಬುರಗಿ: ವಾಹನ ಸವಾರರ ಚಾಲನೆಯ ನೈಪುಣ್ಯತೆ ಪರೀಕ್ಷೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಬೇಕಾಬಿಟ್ಟಿ ಡ್ರೈವಿಂಗ್ ಲೈಸನ್ಸ್ ಪಡೆಯುವುದಕ್ಕೆ ಕಡಿವಾಣ ಬೀಳುವುದಲ್ಲದೇ, ಅರ್ಹ ಚಾಲಕರು ಸುಲಭದಲ್ಲಿ ಡ್ರೈವಿಂಗ್ ಲೈಸನ್ಸ್ ಪಡೆಯಬಹುದಾಗಿದೆ. ನಗರದ ಕುಸನೂರ ರಸ್ತೆಯ ಹೊಸ ಆರ್‌ಟಿಒ ಕಚೇರಿ ಆವರಣದಲ್ಲಿ ಗಣಕೀಕೃತ ಚಾಲನಾ ಪರೀಕ್ಷಾ ಪಥ ಉದ್ಘಾಟನೆಗೆ ಸಜ್ಜಾಗಿದ್ದು, ಸೆ.7ರಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಈ ಪರೀಕ್ಷಾ ಪಥವನ್ನುಲೋಕಾರ್ಪಣೆಗೊಳಿಸಲಿದ್ದಾರೆ.
ಇನ್ಮುಂದೆ ಬೈಕ್, ಕಾರ್ ಚಾಲನೆಗೆ ಡ್ರೈವಿಂಗ್ ಲೈಸನ್ಸ್ (ಡಿಎಲ್) ಪಡೆಯಬೇಕಾದರೆ ಚಾಲಕರ ನೈಪುಣ್ಯಯೇ ಪ್ರಥಮ ಮಾನದಂಡವಾಗಲಿದೆ. ಕೇವಲ ವಾಹನ ಚಾಲನೆಯನ್ನು ಕಲಿತರೆ ಸಾಲದು, ಚಾಲಕರು ಈ ಹೈಟೆಕ್ ಚಾಲನಾ ಪರೀಕ್ಷಾ ಪಥದಲ್ಲಿ ಚಾಲಕರು ತಮ್ಮ ಪ್ರಾವೀಣ್ಯ ಪ್ರದರ್ಶಿಸಬೇಕು.
ಏನಿದು ಹೈಟೆಕ್ ಪಥ?: ಹೊಸದಾಗಿ ಆರಂಭಿಸಲಾಗುತ್ತಿರುವ ಗಣಕೀಕೃತ ಚಾಲನಾ ಪರೀಕ್ಷಾ ಪಥ ಆಧುನಿಕ ತಂತ್ರಜ್ಞಾನದ ಮೂಲಕ ಕೂಡಿದೆ. ಬೆಂಗಳೂರು, ಧಾರವಾಡ, ಮೈಸೂರು, ಮಂಗಳೂರಲ್ಲಿ ಈಗಾಗಲೇ ಈ ಹೈಟೆಕ್ ಪಥ ಇದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ಪಥ ನಿರ್ಮಿಸಲಾಗಿದೆ. ವಾಹನ ಚಾಲಕರು ಡಿಎಲ್‌ಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಬೇಕು. ನಂತರ ಅರ್ಜಿದಾರರಿಗೆ ಪರೀಕ್ಷೆಗೆ ಹಾಜರಾಗಬೇಕಾದ ದಿನ ಮತ್ತು ಸಮಯ ತಿಳಿಸಲಾಗುತ್ತದೆ. ಜತೆಗೆ ಆರ್ ಎಫ್‌ಐಡಿ ಕಾರ್ಡ್ ಸಹ ನೀಡಲಾಗುತ್ತದೆ. ಅದರಂತೆ ಚಾಲಕರು ಬಂದು ಚಾಲಕ ಪರೀಕ್ಷಾಗೆ ಒಳಗಾಗಬೇಕು. ವಾಹನ ಚಲಿಸುವ ಪರೀಕ್ಷಾ ಪಥದುದ್ದಕ್ಕೂ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ವಾಹನ ಓಡಿಸುವವರು ಸ್ವಲ್ಪ ಯಾಮಾರಿದರೂ ಅಥವಾ ನಿಯಮ ಉಲ್ಲಂಘನೆ ಮಾಡಿದ್ದನ್ನು ಈ ಸೆನ್ಸರ್‌ಗಳು ಗುರುತಿಸುತ್ತವೆ. ವಾಹನ ಪಥದಿಂದ ಹೊರಗೆ ಚಲಿಸಿದರೆ, ಪರವಾನಗಿ ನೀಡುವುದಕ್ಕೆ ನಿರಾಕರಿಸಲಾಗುತ್ತದೆ. ಜತೆಗೆ ಪ್ರತಿ ವಾಹನದ ಪ್ರವೇಶ ಹಾಗೂ ನಿರ್ಗಮಿಸಿದ ಅವಧಿ ಯನ್ನೂ ಸೆನ್ಸರ್‌ಗಳು ಗ್ರಹಿಸಿರುತ್ತವೆ.
ಈ ಪಥದಲ್ಲಿ ವಾಹನ ಚಾಲನೆ ಮಾಡುವುದು ಗಣಕೀಕರಣ ಮತ್ತು ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆ ಹಿಡಿಯುವ ವ್ಯವಸ್ಥೆ ಇದೆ. ವಾಹನ ಓಡಿಸುವುದಕ್ಕೆ ಪಕ್ಕಾ ಕಲಿತುಕೊಂಡರಷ್ಟೇ ಡ್ರೈವಿಂಗ್ ಲೈಸನ್ಸ್‌ಗೆ ಅರ್ಹರಾಗುತ್ತಾರೆ. ಒಂದೇ ದಿನದೊಳಗೆ ಪರ್ಫೆಕ್ಟ್ ಚಾಲಕರು ಲೈಸನ್ಸ್ ಪಡೆಯಲಿದ್ದಾರೆ ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು.
ಅಕ್ರಮಗಳಿಗೆ ಕಡಿವಾಣ: ವಾಹನ ಚಾಲನೆ ಪರವಾನಿಗೆಗಾಗಿ ಆರ್‌ಟಿಒ ಕಚೇರಿಗೆ ಅಲೆಯುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲೈಸನ್ಸ್ ಪಡೆಯಲು ಕಚೇರಿಗೆ ಹೋದರೆ ಸಾಲಿನಲ್ಲಿ ನಿಲ್ಲಬೇಕು. ಡಿಎಲ್‌ಗಾಗಿ ಅರ್ಜಿ ಹಾಕಿದ ನಂತರ ಡ್ರೈವಿಂಗ್ ಟೆಸ್ಟ್‌ಗೆ ಹಲವು ಪರೀಕ್ಷೆಗಳನ್ನು ಎದುರಿಸಬೇಕು. ಇದನ್ನೆಲ್ಲ ಎದುರಿಸಲಾಗದ ಹಲವರು ಮಧ್ಯವರ್ತಿಗಳ ಮೂಲಕ ಸುಲಭವಾಗಿ ಡಿಎಲ್ ಪಡೆಯುತ್ತಿದ್ದಾರೆ ಎಂಬುದು ಸುಳ್ಳಲ್ಲ.
ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳೂ ಸಂಭವಿಸಲು ವಾಹನ ಚಾಲನೆಯಲ್ಲಿ ಸವಾರರ ಪರಿಣತಿಯ ಕೊರತೆಯೂ ಪ್ರಮುಖ ಕಾರಣವೇ ಸರಿ. ಇದೆಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಹಾಗೂ ಇದಕ್ಕೆ ಕಡಿವಾಣ ಹಾಕುವುದು ಹಾಗೂ ಡ್ರೈವಿಂಗ್ ಲೈಸೆನ್ಸ್ ವಿರತಣೆಯಲ್ಲಿ ಪರದರ್ಶಕತೆಯನ್ನೇ ತರುವುದೇ ಗಣಕೀಕೃತ ಚಾಲನಾ ಪರೀಕ್ಷಾ ಪಥದ ಮೂಲ ಗುರಿ.
ಎನ್‌ಇಕೆಆರ್‌ಟಿಸಿ ಸುಧಾರಣೆಗೆ ಬೇಕು ಕ್ರಮ :ನಷ್ಟದಲ್ಲಿರುವ ಎನ್‌ಇಕೆಆರ್‌ಟಿಸಿ ಸಂಸ್ಥೆ ಸುಧಾರಣೆಗೆ ಕಠಿಣ ಕ್ರಮ ಅಗತ್ಯ ಎಂಬ ಮಾತು ಸಂಸ್ಥೆಯಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಕೆಲ ಅಧಿಕಾರಿಗಳಿಂದ ನೌಕರರಿಗೆ ನಡೆಯುತ್ತಿರುವ ಕಿರುಕುಳ ತಪ್ಪಿಸುವುದು, ಹತ್ತಾರು ವರ್ಷಗಳಿಂದ ಒಂದೇ ಸ್ಥಳ ಹಾಗೂ ಒಂದೇ ವಿಭಾಗದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದು, ಡಿಪೋಗಳಲ್ಲಿ ಡಿಸೈಲ್ ಕಳ್ಳತನವಾದರೂ ಸಂಬಂಧಪಟ್ಟ ಭದ್ರತಾ ಮತ್ತು ಜಾಗೃತಾ ಇಲಾಖೆ ಕ್ರಮ ಕೈಗೊಳ್ಳದಿರುವುದು, ಕೋವಿಡ್-19ದಿಂದ ಸಾರಿಗೆ ನೌಕರರು ಒಳಗಾಗಿ ಸಂಕಷ್ಟ ಅನುಭವಿಸಿದ್ದರೂ ಸಂಸ್ಥೆಯ ಕಾರ್ಮಿಕ ಕಲ್ಯಾಣ ಇಲಾಖೆ ನಿದ್ರೆಯಿಂದ ಬಾರದಿರುವುದು, ಯಾದಗಿರಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ನಿರುಪಯುಕ್ತವಾಗಿರುವ ಸಾವಿರಾರು ಬಸ್‌ಗಳನ್ನು ವಿಲೇವಾರಿ ಮಾಡದೇ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡುತ್ತಿರುವುದು ಹಾಗೂ ನಿರ್ವಾಹಕರು, ಚಾಲಕರು ಮತ್ತು ಮೆಕ್ಯಾನಿಕ್‌ಗಳ ರಜೆ ಮಂಜೂರಾತಿಯ ಬಯೋಮೆಟ್ರಿಕ್ ವ್ಯವಸ್ಥೆ ಕಾರ್ಯಕ್ಕೆ ತೀಲಾಂಜಲಿ ಹಾಕಿರುವುದು ಸೇರಿದಂತೆ ಇತರ ಹತ್ತಾರು ಕ್ರಮ ಕೈಗೊಂಡಲ್ಲಿ ಸಂಸ್ಥೆ ಆಡಳಿತ ಸುಧಾರಣೆಗೆ ನಾಂದಿ ಹಾಡಿದಂತಾಗುತ್ತದೆ. ಸೋಮವಾರ ಜಿಲ್ಲೆಗೆ ಸಾರಿಗೆ ಖಾತೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಮಿಸುತ್ತಿದ್ದು, ಇವುಗಳ ಬಗ್ಗೆ ಗಮನಹರಿಸಿ ಸುಧಾರಣೆಗೆ ಖಡಕ್ ಸೂಚನೆ ಕೊಟ್ಟಲ್ಲಿ ಮಾತ್ರ ಭೇಟಿ ಸಾರ್ಥಕವೆನಿಸುತ್ತದೆ. ಅದೇ ರೀತಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಳ್ಳುತ್ತಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ಸಹ ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಈ ಎಲ್ಲ ಲೋಪಗಳನ್ನು ಅವಲೋಕಿಸಿ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.