ಹೈ-ಕ ಡ್ಯಾಂಗಳು ಖಾಲಿ ಖಾಲಿ; ತಳಕಚ್ಚಿದ ಭೀಮಾ ಏತ ಜಲಾಶಯ
Team Udayavani, Jun 22, 2018, 6:00 AM IST
ಕಲಬುರಗಿ: ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿದು ಆ ಭಾಗದ ಜಲಾಶಯಗಳು ಭರ್ತಿಯಾಗುತ್ತಿದ್ದರೆ, ಬಿಸಿಲ ನಾಡು ಹೈದ್ರಾಬಾದ್ ಕರ್ನಾಟಕ ಭಾಗದ ಜಲಾಶಯಗಳು ಮಾತ್ರ ದಿನೇ ದಿನೆ ಬತ್ತುತ್ತಿವೆ. ಕಲಬುರಗಿ ಜಿಲ್ಲೆಯ ಜೀವನಾಡಿ ಭೀಮಾ ಏತ ಜಲಾಶಯ ನೀರಿಲ್ಲದೆ ಬರಡು ಭೂಮಿಯಂತಾಗಿದೆ.
ಮುಂಗಾರು ಆರಂಭವಾಗಿ ಎರಡು ವಾರಗಳೇ ಕಳೆದರೂ ಭೂಮಿ ಹಸಿಯಾಗುವಷ್ಟು ಮಳೆ ಬಾರದೇ ಇರುವುದು ಹಾಗೂ ಕಳೆದೊಂದು ವಾರದಿಂದ ಬಿರುಗಾಳಿ, ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಉಂಟಾಗಿದ್ದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಯಾವುದೇ ಜಲಾಶಯಗಳಲ್ಲಿ ನೀರು ಏರಿಲ್ಲ. ಮುಂಗಾರು ಆರಂಭಕ್ಕೂ ಮುಂಚೆ ಸ್ವಲ್ಪ ಮಳೆ ಬಂದಿದ್ದು ಬಿಟ್ಟರೆ ಮತ್ತೆ ಮಳೆರಾಯನ ಕೃಪೆಯೇ ಇಲ್ಲ. 3-4 ದಿನಗಳ ವಾತಾವರಣ ನೋಡಿದರೆ ಮತ್ತೆ ಬರಗಾಲವೇ ಎನ್ನುವ ಆತಂಕ ರೈತರಲ್ಲಿ ಮೂಡಲಾರಂಭಿಸಿದೆ.
ಎಷ್ಟೆಷ್ಟಿದೆ ನೀರು?
ಕಳೆದ ವರ್ಷ ಈ ವೇಳೆಗೆ ಉತ್ತಮವಾಗಿ ಮಳೆಯಾಗಿದ್ದು, ಜಲಾಶಯಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿತ್ತು. 3.16 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಭೀಮಾ ಏತ ಜಲಾಶಯದಲ್ಲಿ ಈಗ ಕೇವಲ 0.669 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹ ಹೊಂದಿದೆ. ಒಳಹರಿವು ಏನೂ ಇಲ್ಲ. ಕಳೆದ ವರ್ಷ ಇದೇ ಸಮಯಕ್ಕೆ 1.042 ಟಿಎಂಸಿ ಅಡಿ ನೀರಿತ್ತು.
ಬೆಣ್ಣೆ ತೋರಾದಲ್ಲಿ 5.29 ಟಿಎಂಸಿ ಅಡಿ ನೀರಿನ ಸಂಗ್ರಹದ ಪೈಕಿ ಈಗ 3.22 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಜೂ.20ಕ್ಕೆ 4.20 ಟಿಎಂಸಿ ಅಡಿ ನೀರಿತ್ತು. ಅಮರ್ಜಾದಲ್ಲಿ 1.55 ಟಿಎಂಸಿ ಅಡಿ ನೀರಿನ ಪೈಕಿ 0.850 ಟಿಎಂಸಿ ಅಡಿ ನೀರಿದೆ. ಬೀದರ್‌ನ ಕಾರಂಜಾ ಜಲಾಶಯದಲ್ಲಿ 7.691 ಟಿಎಂಸಿ ಪೈಕಿ 3.677 ಟಿಎಂಸಿ ಅಡಿ ನೀರಿದೆ. ಚಂದ್ರಂಪಳ್ಳಿ, ಸೌದಾಗಾರ, ಹತ್ತಿಕುಣಿ ಜಲಾಶಯಗಳು ಡೆಡ್ ಸ್ಟೋರೇಜ್‌ಗೆ ತಲುಪಿವೆ.
ಬಿತ್ತನೆ ಕೈ ಬಿಟ್ಟ ರೈತರು
ರಾಜ್ಯಾದ್ಯಂತ ಭಾರೀ ಮಳೆ ಸುರಿದಾಗ ಕಲಬುರಗಿ ಭಾಗದಲ್ಲಿ ಸ್ವಲ್ಪ ಮಳೆ ಸುರಿದಿತ್ತು. ಭೂಮಿ ಹಸಿಯಾಗದಿದ್ದರೂ ಮಳೆ ಸುರಿಯುತ್ತದೆ ಎನ್ನುವ ಆಶಾಭಾವನೆಯಿಂದ ರೈತ ಬಿತ್ತನೆ ಕಾರ್ಯ ಆರಂಭಿಸಿದ್ದ. ಆದರೆ ಭೂಮಿ ಹಸಿ ಮಾಯವಾಗಿ ಬರೀ ಗಾಳಿ ಹಾಗೂ ಬಿಸಿಲಿನ ಪ್ರಮಾಣ ಹೆಚ್ಚಳವಾಗುವುದರ ಜತೆಗೆ ಮಳೆ ಮಾಯವಾಗಿದ್ದರಿಂದ ರೈತರು ಈಗ ಬಿತ್ತನೆ ಕಾರ್ಯ ನಿಲ್ಲಿಸಿದ್ದಾರೆ. ಭೂಮಿಗೆ ಹಾಕಿದ ಬೀಜ ಮೊಳಕೆಯೊಡೆದು ಮೇಲೆ ಬರುತ್ತಿಲ್ಲ.
ಮರಳುಗಾರಿಕೆಯಿಂದ ಬತ್ತುತ್ತಿವೆ ಜಲಾಶಯ!
ಕಲಬುರಗಿ ಭಾಗದ ಜಲಾಶಯಗಳಲ್ಲಿ ಭೀಮಾ ನದಿಯೇ ಹೆಚ್ಚಿನ ಪ್ರಮಾಣದಲ್ಲಿ ಬತ್ತಲು ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕಾರಣ. ಅಕ್ರಮ ಮರಳುಗಾರಿಕೆ ತಡೆದಲ್ಲಿ ಮಾತ್ರ ಭೀಕರ ಪರಿಸ್ಥಿತಿ ಎದುರಾಗುವುದನ್ನು ಸ್ವಲ್ಪ ಪ್ರಮಾಣದಲ್ಲಾದರೂ ತಪ್ಪಿಸಬಹುದು. ಭೀಮಾ ನದಿಯಲ್ಲಿ ನೀರು ಬತ್ತುತ್ತಿರುವುದರಿಂದ ಕಲಬುರಗಿ ಮಹಾನಗರ ನೀರು ಪೂರೈಕೆಯ ಸರಡಗಿ ಬ್ಯಾರೇಜ್‌ನಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ನಗರಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.
– ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.