ಹೆದ್ದಾರಿ ಕಾಮಗಾರಿ ಚುರುಕು

Team Udayavani, Nov 18, 2018, 11:30 AM IST

gul-4.jpg

ಚಿಂಚೋಳಿ: ಕಳೆದ ಒಂದು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ-ಬೀದರ ಹೆದ್ದಾರಿ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿ ಅತಿ ಚುರುಕಿನಿಂದ ನಡೆಯುತ್ತಿದ್ದು, ಇನ್ನು ಮುಂದೆ ವಾಹನಗಳ ಸುಗಮ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ.

ಬೀದರ ಜಿಲ್ಲಾ ಕೇಂದ್ರದ ಚಿದ್ರಿಯಿಂದ ಚಿಂಚೋಳಿ ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ ಪ್ರತಿಮೆವರೆಗೆ ಒಟ್ಟು 60 ಕಿಮೀ ರಸ್ತೆ ಡಾಂಬರೀಕರಣಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದಿಂದ ಒಟ್ಟು 227 ಕೋಟಿ ರೂ. ಮಂಜೂರಿಗೊಳಿಸಲಾಗಿದ್ದು, ಈ ಕಾಮಗಾರಿಯನ್ನು ಗುಜರಾತ ರಾಜ್ಯದ ಖಾಸಗಿ ಡಿಪಿ ಜೈನ್‌ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.

ಈಗಾಗಲೇ ಐನೋಳಿ, ದೇಗಲಮಡಿ, ಫತ್ತೆಪುರ, ಕೊಳ್ಳುರ, ನಾಗಾಇದಲಾಯಿ, ತುಮಕುಂಟಾ ಗ್ರಾಮಗಳ ವರೆಗೆ ಒಟ್ಟು 25 ಕಿಮೀ ವರೆಗೆ ಒಂದು ಭಾಗದ ಡಾಂಬರೀಕರಣಗೊಂಡಿದೆ. ತೆಲಂಗಾಣ ರಾಜ್ಯದ ಮಹೆಬೂಬನಗರ ಜಿಲ್ಲೆಯ ಎನ್‌ ಎಚ್‌ 4ರಿಂದ ಮನ್ನಾಎಕ್ಕೆಳ್ಳಿ ರಾಷ್ಟ್ರೀಯ ಹೆದ್ದಾರಿ 9ಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮುಖ್ಯ ಉದ್ದೇಶವಾಗಿದೆ. ಒಟ್ಟು 30 ಮೀಟರ್‌ ಅಗಲವುಳ್ಳ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ರಸ್ತೆಯಿಂದ ಬೀದರ ನಗರದಿಂದ ಕಮಠಾಣ, ಮರ್ಜಾಪುರ, ಕಾಡವಾದ, ಬಗದಲ್‌, ಮನ್ನಾಎಕ್ಕೆಳ್ಳಿ, ವಿಠಲಪುರ, ಚಾಂಗಲೇರಾ, ತುಮಕುಂಟಾ, ನಾಗಾಇದಲಾಯಿ, ಕೊಳ್ಳುರ, ಫತ್ತೆಪುರ, ದೇಗಲಮಡಿ, ಐನೋಳಿ, ಚಿಂಚೋಳಿ ಒಟ್ಟು 60 ಕಿಮೀ ರಸ್ತೆ ಅಭಿವೃದ್ಧಿ ನಡೆಯುತ್ತಿದೆ.

ಚಿಂಚೋಳಿ-ಐನೋಳಿ ರಸ್ತೆ ಬದಿಯಲ್ಲಿ ಬರುವ ಮರಗಳನ್ನು ಕಡಿಯದಂತೆ ವನ್ಯಜೀವಿಧಾಮ ಪರವಾನಗಿ ನೀಡದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ರಾಜ್ಯ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳನ್ನು ಕಡಿದು ಹಾಕಲು ಅನುಮತಿ ಕೊಟ್ಟಿದ್ದರಿಂದ ಈಗ ರಸ್ತೆ ಸುಧಾರಣೆ ಚುರುಕಿನಿಂದ ನಡೆಯುತ್ತಿದೆ. ಅದರಂತೆ ಚಿಂಚೋಳಿ-ಬೀದರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬರುವ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ.
 
ಬೀದರ-ಚಿಂಚೋಳಿ ಮಾರ್ಗವಾಗಿ ಎನ್‌ಎಚ್‌4ಕ್ಕೆ ಸಂಪರ್ಕ ಕಲ್ಪಿಸುವುದರಿಂದ ಬೆಂಗಳೂರು ನಗರಕ್ಕೆ ಅತಿ ಕಡಿಮೆ 570 ಕಿಮೀ ಕಡಿಮೆ ಆಗುವುದರಿಂದ ಬೀದರ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನ ಆಗಲಿದೆ. ಅಲ್ಲದೇ ತಾಂಡೂರ, ಚಿಂಚೋಳಿ ಗಡಿಯಲ್ಲಿ ಇರುವ ಚೆಟ್ಟಿನಾಡ, ಕಲಬುರಗಿ ಸಿಮೆಂಟ್‌, ಕೋರಮಂಡಲ, ಐಸಿಸಿ ಕಂಪನಿಗಳಿಂದ ಸಿಮೆಂಟ್‌ ತುಂಬಿದ ಲಾರಿಗಳ ಓಡಾಟಕ್ಕೆ ಅನುಕೂಲವಾಗಲಿದೆ. ಟೆಂಡರ್‌ ಅವಧಿ ಪ್ರಕಾರ 2019 ಅಗಸ್ಟ್‌ನೊಳಗೆ ರಸ್ತೆ ಡಾಂಬರೀಕರಣಗೊಳಿಸಬೇಕಾಗಿದೆ ಎಂದು ಕೆಆರ್‌ಡಿಸಿಎಲ್‌ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಸೊಂಡೂರ ತಿಳಿಸಿದ್ದಾರೆ.

ಚಿಂಚೋಳಿ-ಬೀದರ ರಸ್ತೆ ಸುಧಾರಣಗೊಳಿಸಬೇಕು. ಸುತ್ತಲಿನ ಗ್ರಾಮಗಳ ಪ್ರಯಾಣಿಕರಿಗೆ ರಸ್ತೆ ಸಂಪರ್ಕ ಒದಗಿಸಿಕೊಡಬೇಕು ಎಂಬುದು ನನ್ನ ಗಮನಕ್ಕೆ ಬಂದಿರುವುದರಿಂದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿನ ಹದಗೆಟ್ಟಿರುವ ರಸ್ತೆ ವಿಚಾರ ಗಮನಕ್ಕೆ ತಂದಾಗ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿಗೊಳಿಸಿದ್ದರು. ಈಗ ರಸ್ತೆ ಪ್ರಗತಿ ನಡೆಯುತ್ತಿದೆ. ಇದು ಐತಿಹಾಸಿಕ ಸಾಧನೆ ಆಗಿದೆ ಎಂದು ಶಾಸಕ ಡಾ|ಉಮೇಶ ಜಾಧವ ತಿಳಿಸಿದ್ದಾರೆ.

ಟಾಪ್ ನ್ಯೂಸ್

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

mob

Karkala: ದೂರವಾಣಿ ಕರೆ ಮಾಡಿ ಹಣ ಲೂಟಿ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

robbers

Suratkal: ಮಹಿಳೆಯರಿಗೆ ನಿಂದನೆ: ಬಾಲಕರ ಸೆರೆ

police crime

ಕೊಳತ್ತಮಜಲಿನಲ್ಲಿ ಹೊಡೆದಾಟ; ಎರಡು ಪ್ರತ್ಯೇಕ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.