ಶಿವಾಜಿಯಿಂದ ಹಿಂದೂ ಸ್ವರಾಜ ಕಲ್ಪನೆ
Team Udayavani, Mar 2, 2018, 11:58 AM IST
ವಾಡಿ: ದೇಶದ ಧಾರ್ಮಿಕ ಸಂಸ್ಕೃತಿಯನ್ನು ಎತ್ತಿ ಹಿಡಿದ ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಂದೂ ಸ್ವರಾಜ ಕಲ್ಪನೆ
ಮೂಡಿತು ಎಂದು ವಿಶ್ವಹಿಂದೂ ಪರೀಷತ್ ಚಿತ್ತಾಪುರ ತಾಲೂಕು ಸಂಚಾಲಕ ಅಜಯಕುಮಾರ ಬಿದರಿ ಹೇಳಿದರು.
ಪಟ್ಟಣದಲ್ಲಿ ಮರಾಠಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪಾಕಿಸ್ತಾನದ ಗಡಿಯಿಂದ ಭಾರತದೊಳಕ್ಕೆ ಗುಂಡುಗಳು ನುಗ್ಗಿ ಬಂದು ನಮ್ಮ ಸೈನಿಕರ ಪ್ರಾಣ ತೆಗೆಯುತ್ತಿವೆ. ಭಾರತದ ರಕ್ಷಣೆಗೆ ನಿಂತಿರುವ ಸೈನಿಕರ ಜೀವದ ಕಾಳಜಿಗೆ ಮರುಗಬೇಕಾದ ನಮ್ಮ ಯುವಜನಾಂಗ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ
ಮೋಜು ಮಸ್ತಿಯಲ್ಲಿ ಮುಳುಗಿದೆ. ಶಿವಾಜಿ ಮಹಾರಾಜರ ಶೌರ್ಯ ಮೈಗೂಡಿಸಿಕೊಂಡು ಭಾರತೀಯ ಸೈನಿಕರಿಗೆ ಶಕ್ತಿಯಾಗಿ ನಾವು ಎದ್ದು ನಿಲ್ಲಬೇಕು ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಾಬುಮಿಯ್ನಾ ಮಾತನಾಡಿ, ನಾವೆಲ್ಲರೂ ಭಾರತೀಯರು ಎಂದಾದ ಬಳಿಕ ಹಿಂದೂ-ಮುಸ್ಲಿಂ ಎಂಬ ಒಡಕಿನ ಮಾತಗಳು ಬೇಕಾಗುವುದಿಲ್ಲ. ನಾವು ನಮ್ಮ ನಂಬಿಕೆಯಂತೆ ದೇವರನ್ನು ಅಲ್ಹಾ ಎನ್ನುತ್ತೇವೆ. ನೀವು ನಿಮ್ಮ ನಂಬಿಕೆಯಂತೆ ದೇವರನ್ನು ರಾಮ ಎನ್ನಿ. ಆದರೆ, ಪರಸ್ಪರ ಸಹೋದರತೆಯಿಂದ ಬದುಕೋಣ. ಧರ್ಮ ಮೀರಿ ಮಾನವೀಯತೆ ಮೆರೆಯೋಣ. ದ್ವೇಶ ಭಾವವನ್ನು ತೊಡೆದು ಸ್ನೇಹಭಾವ ಬಿತ್ತೋಣ ಎಂದು ಹೇಳಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಮರಾಠಾ ಸಮಾಜದ ಅಧ್ಯಕ್ಷ ಅಶೋಕ ಪವಾರ, ಪ್ರಧಾನ ಕಾರ್ಯದರ್ಶಿ ಹರಿ ಗಲಾಂಡೆ, ಪಿಎಸ್‌ಐ ಜಗದೇವಪ್ಪ ಪಾಳಾ, ಮುಖಂಡರಾದ ಟೋಪಣ್ಣ ಕೋಮಟೆ, ರಾಜು ಮುಕ್ಕಣ್ಣ, ಬಸವರಾಜ ಪಂಚಾಳ, ಸಿದ್ದಣ್ಣ ಕಲಶೆಟ್ಟಿ, ವಿಷ್ಣು ಸೂರ್ಯವಂಶಿ, ಅಶೋಕ ದಹಿಹಂಡೆ, ಅಶೋಕ ಸೂರ್ಯವಂಶಿ, ಮುತ್ತಯ್ಯಸ್ವಾಮಿ, ವಿಜಯಕುಮಾರ ಸಿಂಗೆ, ರಮೇಶ ಕಾರಬಾರಿ, ಭಶೀರ ಅಹ್ಮದ್ ಖುರೇಶಿ, ತಿಮ್ಮಯ್ಯ ಕುರಕುಂಟಾ, ಕೊಳ್ಳಪ್ಪ ಸಿಂದಗೀಕರ, ಬಸವರಾಜ ಕೇಶ್ವಾರ, ನಾಗೇಂದ್ರ ಜೈಗಂಗಾ ಪಾಲ್ಗೊಂಡಿದ್ದರು. ಶ್ಯಾಮ ನವಗಿರೆ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.
ದತ್ತಾ ಖೈರೆ ವಂದಿಸಿದರು. ನಂತರ ನಡೆದ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆಯಲ್ಲಿ ಮರಾಠಾ ಸಮಾಜದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.