ಎಚ್‌ಕೆಇ ಚುನಾವಣೆ: ಶೇ.93.15 ಮತದಾನ
Team Udayavani, Mar 24, 2018, 3:20 PM IST
ಕಲಬುರಗಿ: ಈ ಭಾಗದ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 2018-21ನೇ ಸಾಲಿನ ಆಡಳಿತ ಮಂಡಳಿಗೆ
ಶುಕ್ರವಾರ ಚುನಾವಣೆ ನಡೆಯಿತು. ಬಿರು ಬಿಸಿಲಿನ ನಡುವೆ ಉತ್ಸಾಹದಿಂದ ಮತದಾನ ನಡೆಯಿತು. ಒಟ್ಟಾರೆ ಶೇ.93.15
ರಷ್ಟು ಮತದಾನವಾಗಿದೆ. 1551 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹಾಲಿ ಅಧ್ಯಕ್ಷರೂ ಆದ ಬಸವರಾಜ ಭೀಮಳ್ಳಿ, ಉದ್ಯಮಿ ಡಾ| ಭೀಮಾಶಂಕರ ಬಿಲಗುಂದಿ ಮಧ್ಯೆ ಸಮರ ನಡೆದಿದ್ದು, ಉಪಾಧ್ಯಕ್ಷ
ಹಾಗೂ 13 ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕಾಗಿ 30 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಸಂಸ್ಥೆಗೆ ಬೀದರ್ 99, ಕಲಬುರಗಿ 1478 ಮತ್ತು ರಾಯಚೂರು 96 ಸೇರಿದಂತೆ ಒಟ್ಟು 1666 ಮತದಾರರಿದ್ದು, ಕಲಬುರಗಿ
ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ಮತಗಟ್ಟೆ ಸೇರಿದಂತೆ ಒಟ್ಟು ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಭೀಮಳ್ಳಿ ಪೆನಲ್: ಬಸವರಾಜ ಭೀಮಳ್ಳಿ (ಅಧ್ಯಕ್ಷ), ಡಾ| ಸೂರ್ಯಕಾಂತ ಪಾಟೀಲ (ಉಪಾಧ್ಯಕ್ಷ), ಆರ್.ಎಸ್.ಹೊಸಗೌಡ,
ಡಾ| ಶರದ್ ರಾಂಪುರೆ, ಜಿ.ಡಿ.ಅಣಕಲ್, ಶಿವರಾಜ ನಿಗ್ಗುಡಗಿ, ಎನ್.ಡಿ. ಪಾಟೀಲ, ಡಾ| ಎಸ್.ಎನ್.ಪಾಟೀಲ, ಉದಯಕುಮಾರ
ಚಿಂಚೋಳಿ, ಅರುಣಕುಮಾರ, ಎಂ.ವೈ. ಪಾಟೀಲ, ಡಾ| ಶರಣಬಸಪ್ಪ ಕಾಮರೆಡ್ಡಿ, ಚಂದ್ರಶೇಖರ ಹಿರೇಮಠ, ವೆಂಕಟೇಶ ಸಾರಡಾ, ಡಾ| ಬಸವರಾಜ ಜಿ.ಪಾಟೀಲ, ಎಂ.ವೀರಣಗೌಡ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಸ್ಪರ್ಧೆಯಲ್ಲಿದ್ದಾರೆ.
ಡಾ| ಬಿಲಗುಂದಿ ಪೆನಲ್: ಡಾ| ಭೀಮಾಶಂಕರ ಬಿಲಗುಂದಿ (ಅಧ್ಯಕ್ಷ), ಡಾ| ಶಿವಾನಂದ ದೇವರಮನಿ (ಉಪಾಧ್ಯಕ್ಷ), ಶಿವಶರಣಪ್ಪ ನಿಗ್ಗುಡಗಿ, ವಿಜಯಕುಮಾರ ದೇಶಮುಖ, ಡಾ| ಸಂಪತ್ ಲೋಯಾ, ವಿಶ್ವನಾಥರೆಡ್ಡಿ, ಬಿಜಾಪುರ ಸುಭಾಷ ಬಸವರಾಜ, ನಿತಿನ್ ಜವಳಿ, ಗಂಗಾಧರ ಎಲಿ, ಸತೀಶ ಹಡಗಲಿಮಠ, ಡಾ| ನಾಗೇಂದ್ರ ಮಂಠಾಳೆ, ಅನುರಾಧಾ ಮಹಾಂತೇಶ ದೇಸಾಯಿ, ವಿನಯ ಪಾಟೀಲ, ಅನಿಲಕುಮಾರ ಮರಗೋಳ, ಸಂಗಮೇಶ್ವರ ಗಂಗೂ (ಆಡಳಿತ ಮಂಡಳಿ ಸದಸ್ಯ) ಸ್ಪರ್ಧೆಯಲ್ಲಿದ್ದಾರೆ.
ವ್ಯಾಪಕ ಬಂದೋಬಸ್ತ್: ಚುನಾವಣೆ ಹಿನ್ನೆಲೆಯಲ್ಲಿ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾಲೇಜಿನ ಮುಖ್ಯದ್ವಾರದಲ್ಲಿ ಅನಗತ್ಯವಾಗಿ ಯಾರನ್ನೂ ಒಳಬಿಡಲಿಲ್ಲ. ಅಂಗವಿಕಲರು, ಅನಾರೋಗ್ಯಕ್ಕೆ ಒಳಗಾದವರಿಗೆ ವಾಹನದ ಮೂಲಕ ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಾಲೇಜು ಎದುರಿನಲ್ಲಿ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಖಡಕ್ ಬಿಸಿಲು ಇದ್ದುದರಿಂದ ಜನ ಟೆಂಟ್ ಆಶ್ರಯ ಪಡೆದರು. ಬಿಸಿಲಿನ ನಡುವೆ ಸ್ಪರ್ಧಾ ಅಭ್ಯರ್ಥಿಗಳು ಮತಯಾಚಿಸುತ್ತಿರುವುದು ಹಾಗೂ ಬಿಸಿಲಿನ ನಡುವೆ ಮತದಾರರು ಉತ್ಸುಕತೆಯಿಂದ ಮತ ಚಲಾಯಿಸುತ್ತಿರುವುದು ಕಂಡು ಬಂತು.
ಶಾಂತಿಯುತ ಮತದಾನ: ಚುನಾವಣೆಯು ಅತ್ಯಂತ ಶಾಂತಿಯುತವಾಗಿ ನಡೆದಿದೆ. ಸೂಕ್ತ ಮತದಾನಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿತ್ತಲ್ಲದೇ ಎಲ್ಲರೂ ಸಹಕರಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಾ| ಪಿ.ಎಸ್.ಶಂಕರ ತಿಳಿಸಿದ್ದಾರೆ.
ಎಣಿಕೆಗೆ ಸಿದ್ಧತೆ
ಮಾರ್ಚ್ 24ರಂದು ಬೆಳಗ್ಗೆ 8 ಗಂಟೆಯಿಂದ ಪಿಡಿಎ ಇಂಜಿನಿಯರಿಂಗ್ ಕಾಲೇಜ್‌ನ ಗ್ರಂಥಾಲಯ ಕಟ್ಟಡದಲ್ಲಿ ನಡೆಯಲಿದೆ. ಸಂಜೆ ಹೊತ್ತಿನ ನಂತರ ಮೊದಲು ಆಡಳಿತ ಮಂಡಳಿ ಸದಸ್ಯರ ಹಾಗೂ ತದನಂತರ ಅಧ್ಯಕ್ಷ-ಉಪಾಧ್ಯಕ್ಷರ ಫಲಿತಾಂಶ ಹೊರ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.