ಬಡ ಪ್ರತಿಭಾನ್ವಿತ ಹುಡುಗಿಗೆ ಹೃದಯಲ್ಲಿ ರಂಧ್ರ: ಶಸ್ತ್ರಚಿಕಿತ್ಸೆ ನೆರವಿಗೆ ಮನವಿ
Team Udayavani, Oct 23, 2022, 4:54 PM IST
ಕಲಬುರಗಿ: ಇಲ್ಲಿನ ಬಸವ ನಗರದ ನಿವಾಸಿ ಆಟೋ ಚಾಲಕನ ಮಗಳು ಹನ್ನೇರಡು ವರ್ಷದ ಸಂಜನಾ ಶ್ರೀಮಂತ ವಿದ್ಯಾರ್ಥಿನಿಗೆ ಹೃದಯದಲ್ಲಿ ರಂಧ್ರವಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ.
ಬೆಂಗಳೂರು ಜಯದೇವ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಬೇಕಿದ್ದು, ಬಡ ಕುಟುಂಬ ಬೆಂಗಳೂರಿಗೆ ಹೋಗೋದು ಕಷ್ಟವಾಗಿದೆ. ಹೀಗಾಗಿ ಸಂಜನಾಳ ತಂದೆ ಶ್ರೀಮಂತ ಮಾವಿನ ಹಾಗೂ ತಾಯಿ ಅನೀತಾ ಮಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.
ವೈದ್ಯರು ಚಿಕಿತ್ಸೆ ತುರ್ತಾಗಿ ಮಾಡಬೇಕು. ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟದಾಯಕವಾಗಿದೆ. ಪ್ರಯತ್ನ ಮಾಡುವುದು ತಮ್ಮಿಚ್ಚೆ ಮುಂದಿನದ್ದು ದೈವಿಚ್ಚೆ ಎಂದಿದ್ದಾರೆ.
ಬಡ ಆಟೋ ಚಾಲಕರ ಕಷ್ಟ ಹಾಗೂ ಬಡತನ ಕಂಡ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರು ಆಗಿರುವ ಕೆಕೆಆರ್ ಡಿಬಿ ಅಧ್ಯಕ್ಷರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಶಸ್ತ್ರಚಿಕಿತ್ಸೆ ಚಿಕಿತ್ಸೆ ಉಚಿತವಾಗುತ್ತದೆ. ಆದರೆ ಇತರ ಖರ್ಚು ವೆಚ್ಚಗಳು ಬರುತ್ತವೆ. ವಿದ್ಯಾರ್ಥಿನಿ ಸಂಜನಾ ಪ್ರತಿಭಾನ್ವಿತೆ ಹೊಂದಿದ್ದು ಹಾಗೂ ಕುಟುಂಬ ಸಂಕಷ್ಟ ಕಂಡು ವೈಯಕ್ತಿಕವಾಗಿ ಸಹಾಯ ಕಲ್ಪಿಸಲಾಗಿದೆ ಎಂದು ಅಪ್ಪುಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ಸಹಾಯ ಮಾಡಲಿಚ್ಚಿಸುವರು ಅನಿತಾ ತಂದೆ ಪರಶುರಾಮ
ಬ್ಯಾಂಕ್ ಖಾತೆ ನಂ 40342631166
ಎಸ್ ಬಿಐ ಹುಸೇನ್ ಗಾರ್ಡನ್ ಶಾಖೆಯ ಖಾತೆಗೆ ಆರ್ಥಿಕ ಸಹಾಯ ಕಲ್ಪಿಸಬಹುದು ಎಂದು ಕುಟುಂಬದವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663934315 ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.