ಎಲ್ಲೆಡೆ ಹೋಳಿ ರಂಗಿನಾಟ ಸಂಭ್ರಮ
Team Udayavani, Mar 3, 2018, 11:09 AM IST
ಕಲಬುರಗಿ: ನಗರಲ್ಲಿ ಶುಕ್ರವಾರ ಸಡಗರ ಹಾಗೂ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು. ಕೆಟ್ಟದ್ದರ ಮೇಲಿನ ವಿಜಯದ ಸಂಕೇತವಾಗಿ ಹೋಳಿ ಹುಣ್ಣಿಮೆ ದಿನ ಹೋಲಿಕಾ,ಕಾಮ ದಹನ ಮಾಡಿದ ನಂತರ ಶುಕ್ರವಾರ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಬಾಲ ವೃದ್ದರಾಧಿಯಾಗಿ, ಮಹಿಳೆಯರು ರಂಗಿನ ಓಕುಳಿಯಲ್ಲಿ ಮಿಂದೆದ್ದರು. ಕೆಲ ಬಡಾವಣೆಗಳಲ್ಲಿ ಮೊಸರು ಗಡಿಗೆ ಒಡೆಯುವ ಮೂಲಕ ಸಂಭ್ರಮದಿಂದ ಹೋಳಿ ಆಚರಿಸಲಾಯಿತು.
ಜೇವರ್ಗಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಚಿಣ್ಣರು, ಯುವತಿಯರು, ಯುವಕರು ಶುಕ್ರವಾರ ಬಣ್ಣದೋಕುಳಿಯಾಡಿದರು. ಪಟ್ಟಣದ ಅಖಂಡೇಶ್ವರ ವೃತ್ತ, ಬಸ್ ನಿಲ್ದಾಣ, ಕನಕದಾಸ ವೃತ್ತ, ವಿದ್ಯಾನಗರ, ಬಸವೇಶ್ವರ ಚೌಕ್, ಚಿಕ್ಕಜೇವರ್ಗಿ, ಲಕ್ಷ್ಮೀ ಚೌಕ್, ಶಿಕ್ಷಕರ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜನರು ಬಣ್ಣದಲ್ಲಿ ಮಿಂದೆದ್ದರು. ಚಿಕ್ಕ ಚಿಕ್ಕ ಮಕ್ಕಳು ಪಿಚಕಾರಿ ಹಿಡಿದು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚುವುದು ಹಾಗೂ ಮಹಿಳೆಯರು ಮನೆ ಮನೆಗೆ ತೆರಳಿ ತಮ್ಮ ಗೆಳತಿಯರ ಜೊತೆ ರಂಗಿನಾಟ ಗಮನ ಸೆಳೆಯಿತು.
ಗುರುವಾರ ರಾತ್ರಿ ವಿವಿಧ ಬಡಾವಣೆಗಳಲ್ಲಿ ಯುವಕರು ಕಾಮದಹನ ಮಾಡಿದರು. ನಂತರ ಬೊಬ್ಬೆ ಹಾಕುತ್ತಾ ಸಂಭ್ರಮಿಸಿದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಡಿ.ಬಿ. ಪಾಟೀಲ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.
ಆಳಂದ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ಆಚರಿಸಲಾದ ಬಣ್ಣದೊಕಳಿಯಲ್ಲಿ
ಯುವಕರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಪಟ್ಟಣದ ಅನೇಕ ಬಡಾವಣೆಗಳಲ್ಲಿ ಬೆಳಗಿನಿಂದ ಮಕ್ಕಳು,ಯುವಕರು ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ ಬಣ್ಣದಾಟ ಆಡಿದರು. ಪಟ್ಟಣದ ಹನುಮಾನ ಬಡಾವಣೆ
ಯುವಕರು ಅಣುಕು ಶವದ ಮೆರವಣಿಗೆ ನಡೆಸಿ ಗಮನ ಸೆಳೆದರು. ಹತ್ತಾನಗಲ್ಲಿ, ಬಾಳನಕೇರಿ, ಸುಲ್ತಾನಪುರ ಬಡಾವಣೆ, ಶರಣನಗರ, ಭೀಮನಗರ, ಧನಗರ ಗಲಿ, ರೇವಣಸಿದ್ಧೇಶ್ವರ ಬಡಾವಣೆ, ನಾಯಕನಗರ ಹೀಗೆ ಇನ್ನಿತರ ಬಡಾವಣೆಯಲ್ಲಿ ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ಬಣ್ಣದಾಟದಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂದವು. ಸಂಜೆ ಹಳೆ ಪೊಲೀಸ್ ಚೌಕ್‌ನಲ್ಲಿ ಬಣ್ಣದ ಗಡಿಗೆ ಒಡೆಯಲಾಯಿತು.
ವಾಡಿ: ಹೋಳಿ ಹುಣ್ಣಿಮೆ ಹಬ್ಬದ ನಿಮಿತ್ತ ಪಟ್ಟಣ ಸೇರಿದಂತೆ ವಿವಿಧ ಗ್ರಾಮದಲ್ಲಿ ಬಣ್ಣದೋಕುಳಿ ಸಂಭ್ರಮ ಮನೆಮಾಡಿತ್ತು. ಬಣ್ಣದಾಟದಲ್ಲಿ ಬಡಾವಣೆ ಮಕ್ಕಳು ಮತ್ತು ಮಹಿಳೆಯರು ಹೆಚ್ಚಾಗಿ ಕಂಡುಬಂದರೆ, ಯುವಕರು 12:00ರ ಸುಮಾರಿಗೆ ಕಾಗಿಣಾ ನದಿಗೆ ತೆರಳಿ ಹೆಜ್ಜೆಹಾಕಿ ಬಣ್ಣ ತೊಳೆದುಕೊಂಡರು. ಹಲವರು ನದಿ ದಂಡೆಯಲ್ಲಿಯೇ ಬಾಡೂಟ ಸವಿದು ಹಬ್ಬದ ಸಂತೋಷ ಹಂಚಿಕೊಂಡರು. ಹಲವೆಡೆ ಎತ್ತರದಲ್ಲಿ ಕಟ್ಟಲಾಗಿದ್ದ ಬಣ್ಣದ ಗಡಿಗೆಗಳನ್ನು ಮಾನವ ಏಣಿ ನಿರ್ಮಿಸಿ ಒಡೆದರು.
ಹಲಗೆ ಸಂಗೀತದ ಮಧ್ಯೆ ಸಮೂಹಕವಾಗಿ ಬಣ್ಣದಾಭಿಷೇಕ ಮಾಡಿಕೊಂಡು ಪರಸ್ಪರ ಹರ್ಷ ವ್ಯಕ್ತಪಡಿಸಿದರು. ರಾವೂರಿನಲ್ಲಿ ಹೋಳಿ ಹಬ್ಬದ ಸಡಗರವಿತ್ತು. ಬೆಳಗ್ಗೆಯಿಂದ ಯುವಕರು ರಸ್ತೆ ಹಾಗೂ ಬಡಾವಣೆ ಗಲ್ಲಿಗಳಲ್ಲಿ ಜಮಾಯಿಸಿ ಸಾರ್ವಜನಿಕರಿಗೆ ಬಣ್ಣ ಎರಚಿದರು. ಪರಸ್ಪರ ಮುಖಗಳಿಗೆ ಬಣ್ಣ ಹಚ್ಚಿ ಆನಂದ ಪಟ್ಟರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣು ಜ್ಯೋತಿ ಯುವಕರೊಂದಿಗೆ ಬಣ್ಣದಾಟದಲ್ಲಿ ಬೆರೆತು ಹಬ್ಬದ ಸಂಭ್ರಮ ಹೆಚ್ಚಿಸಿದರು.
ಲಾಡ್ಲಾಪುರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಯುವಕರೊಂದಿಗೆ ಸೇರಿ ಬಣ್ಣದಾಟವಾಡಿದರು. ಮುಖ್ಯ ರಸ್ತೆಗಳಲ್ಲಿ ಜಮಾಯಿಸಿ ವಾಹನ ಸಂಚಾರಿಗಳ ಮೇಲೆ ಬಣ್ಣ ಎರಚಿ ಬೊಬ್ಬೆ ಹಾಕಿದರು. ಸಕ್ಕರೆ ಸರವನ್ನು ಕೊರಳಿಗೆ ಹಾಕಿಕೊಂಡು ಬರುತ್ತಿದ್ದ ಪುಟಾಣಿ ಮಕ್ಕಳು ಗಮನ ಸೆಳೆದರು.
ಶಹಾಬಾದ: ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನಗರ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿಕಾಮಣ್ಣರ ಮೂರ್ತಿಗೆ ಪೂಜೆ ಸಲ್ಲಿಸಿ ಗುರುವಾರ
ರಾತ್ರಿಯೇ ದಹನ ಮಾಡಲಾಯಿತು. ಶುಕ್ರವಾರ ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಹಲಿಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಬಣ್ಣದ ನೀರು ತುಂಬಿದ ಮಡಿಕೆ ಒಡೆದು ಹಾಕುವ ಆಟ ಗಮನ ಸೆಳೆಯಿತು. ರಸ್ತೆ ಮೇಲೆ ಓಡಾಡುವ ವಾಹನಗಳನ್ನು
ಅಡ್ಡಗಟ್ಟಿ ಬಣ್ಣ ಎರಚಿದ ದೃಶ್ಯ ಕಂಡ ಬಂತು. ಹೋಳಿ ಹಬ್ಬದ ನಿಮಿತ್ತ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಚರಿಸಿದರು. ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ಗೆಳೆಯರ ಬಳಗದವರು ವಿಶೇಷವಾಗಿ ಹೋಳಿ ಹಬ್ಬ ಆಚರಿಸಿದರು. ಭಂಕೂರಿನ ಅರಣ್ಯ ಇಲಾಖೆ ಸ್ಥಳದಲ್ಲಿ ಔತಣ ಕೂಟ ಏರ್ಪಡಿಸಿ ಮಿತ್ರರು ಹಾಗೂ ನಗರದ ಗಣ್ಯರನ್ನು ಆಹ್ವಾನಿಸಿದ್ದರು. ಒಂದೇ ಕಡೆ ಎಲ್ಲರೂ ಸೇರಿ ನಂತರ ಎಲ್ಲರೂ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.
ಚಿತ್ತಾಪುರ: ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬ ನಿಮಿತ್ತ ಗುರುವಾರ ರಾತ್ರಿ ಕಾಮದಹನ ಮಾಡಿ ಶುಕ್ರವಾರ ಜನರು ಬಣ್ಣ ಎರಚಿ ರಂಗಿನಾಟ ಆಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯುವಕರು, ಮಕ್ಕಳು, ಕುಳ್ಳು ಕಟ್ಟಿಗೆ ಸಂಗ್ರಹಿಸಿ ರಾತ್ರಿ ಕಾಮಣ್ಣ ಮೂರ್ತಿಗೆ ಪೂಜೆ ಸಲ್ಲಿಸಿ ದಹನ ಮಾಡಿದರು. ಜನಮನ ಸೆಳೆಯುವ ಹೋಳಿ ಹಾಡು ಆಡಿದರು. ಸಂಪ್ರದಾಯದಂತೆ ಕಾಮಣ್ಣನಿಗೆ ಹಚ್ಚಿದ ಬೆಂಕಿ ತಂದ ಮಹಿಳೆಯರು ಅದರಿಂದಲೇ ಮನೆ ದೀಪ ಬೆಳಗಿಸಿದರು. ಅಲ್ಲದೆ ಕಾಮದಹನ ಮಾಡಿದ ಬೆಂಕಿಯಲ್ಲಿ ಕಡಲೆ, ಉಳ್ಳಾಗಡ್ಡಿ, ಗೆಣಸು ಸುಟ್ಟು ಪ್ರಸಾದ ಎಂದು ಸ್ವೀಕರಿಸಿದರು.
ಶುಕ್ರವಾರ ದುಲಂಡಿ ದಿನದಂದು ಬೆಳಗ್ಗೆಯಿಂದಲೇ ಮಕ್ಕಳು ಯುವಕರು, ರಾಜಕಾರಣಿಗಳು, ವಕೀಲರು, ವ್ಯಾಪಾರಸ್ಥರು, ಶಿಕ್ಷಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ರಂಗಿನಾಟದಲ್ಲಿ ತೊಡಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.