ಕಂಬನಿ ಮಿಡಿದ ಬಿಸಿಲೂರು
Team Udayavani, Aug 18, 2018, 10:44 AM IST
ಕಲಬುರಗಿ: ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ನಾಯಕ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ನಗರದಲ್ಲಿ ಶುಕ್ರವಾರ ಹಲವು ಗಣ್ಯರು, ಸಂಘ-ಸಂಸ್ಥೆಗಳು, ಸಂಘಟನೆಗಳು, ನಾಗರಿಕರು ಶ್ರದ್ಧಾಂಜಲಿ ಸಲ್ಲಿಸಿದರು.
ಬಾಬುರಾವ್ ಚವ್ಹಾಣ ಸಂತಾಪ: ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ ಸಂತಾಪ ಸೂಚಿಸಿದ್ದು, ವಾಜಪೇಯಿ ಆತ್ಮಕ್ಕೆ ದೇವರು ಶಾಂತಿ ನೀಡಲಿ ಮತ್ತು ಕುಟುಂಬದವರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕನ್ನಡ ರಣಧೀರರ ಪಡೆ: ಜಿಲ್ಲಾ ಘಟಕದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿ, ವಾಜಪೇಯಿ ಅವರ ಜೀವನ-ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಅವಳಡಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಆನಂದ ಕಪನೂರ, ಹೈಕ ಭಾಗದ ಸಂಚಾಲಕ ನಾಗರಾಜ ಬಾಣೆಕಾರ, ರೇಣುಕಾ ಗಾಯಕವಾಡ ಮತ್ತಿತರರು ಇದ್ದರು.
ಕನ್ನಡ ಪರ ಸಂಘಟನೆಗಳ ಒಕ್ಕೂಟ: ನಗರದ ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿತು. ಸಚಿನ ಫರಹತಾಬಾದ್, ಮಂಜುನಾಥ ನಾಲವಾರಕರ್, ಕಾಶಿನಾಥ ಮಾಳಗೆ, ದತ್ತು ಭಾಸಗಿ, ನಾಗರಾಜ ಸ್ವಾದಿ ಇದ್ದರು.
ಹಿಂದೂ ಮಹಾಸಭಾ: ಜಿಲ್ಲಾ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮಾಶಂಕರ ರಾಜಗುಂಡೆ, ರಾಜ್ಯ ಉಪಾಧ್ಯಕ್ಷ ದಿನಕರರಾವ್ ನಾರಾಯಣ ರಾವ್ ಕುಲಕರ್ಣಿ ಅಷ್ಠಿಗಿ, ಕೋಶಾಧ್ಯಕ್ಷ ಪ್ರಮೋದ ಚೌದ್ರಿ, ಮಾಜಿ ಜಿಲ್ಲಾಧ್ಯಕ್ಷ ಧರ್ಮರಾಜ ವಡೆಯರ್, ಮರುಳಾರಾಧ್ಯ ಮಠಪತಿ ಮತ್ತಿತರರು ಇದ್ದರು.
ಹುಮನಾಬಾದ ರಿಂಗ್ ರಸ್ತೆ: ಉದ್ಯಮಿ ರಾಮಚಂದ್ರ ರಘೋಜಿ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು. ಸಿದ್ದಾಜಿ ಪಾಟೀಲ, ಗುರು ಸ್ವಾಮಿ, ಸಚಿನ ರೆಡ್ಡಿ, ಸಿ.ಬಿ.ಪಾಟೀಲ, ದಯಾನಂದ, ಸಂಜು ಮಡಗಿ, ಶರಣು ಕಲಶೆಟ್ಟಿ, ವಿಷ್ಣು ಸುರಪುರ ಇದ್ದರು.
ವಿವೇಕ ಗ್ರೂಪ್: ಹುಮನಾಬಾದ ರಿಂಗ್ ರಸ್ತೆಯಲ್ಲಿ ನಮನ ಸಲ್ಲಿಸಿದರು. ಅಧ್ಯಕ್ಷ ಸಿದ್ಧಾಜಿ ಪಾಟೀಲ. ಸಂಗಮೇಶ ಮನಳ್ಳಿ, ರವಿ ಪಾಟೀಲ, ದಯಾನಂದ ಗುತ್ತೆದಾರ, ಚನ್ನು ಫದಿರಬಂದಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.