ಜೇನುಹುಳು ನಾಶವಾದರೆ ಮಾನವ ಸಂತತಿಗೆ ಅಪಾಯ
Team Udayavani, May 21, 2018, 4:38 PM IST
ಕಲಬುರಗಿ: ಖ್ಯಾತ ವಿಜ್ಞಾನಿ ಅತುರ್ಟ ಎನಸ್ಸಿಗ್ ಹೇಳುವ ಪ್ರಕಾರ ಭೂಮಿಯಲ್ಲಿ ಜೇನುಹುಳುಗಳು ನಾಶವಾದರೆ ನಾಲ್ಕೇ ನಾಲ್ಕು ವರ್ಷದಲ್ಲಿ ಮಾನವ ಸಂತತಿ ನಾಶಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಾಣಿ ವಿಜ್ಞಾನಿ ಡಾ| ಮಂಜುನಾಥ ಪಾಟೀಲ ತಿಳಿಸಿದರು.
ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರವಿವಾರ ಆಚರಿಸಲಾದ ವಿಶ್ವ ಜೇನುನೊಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೇನಿನಲ್ಲಿರುವ ವಿವಿಧ ಬಗೆಯ ಸಕ್ಕರೆಗಳು ಸುಲಭವಾಗಿ ಜೀರ್ಣ ಆಗುವುದರಿಂದ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ನಿಶಕ್ತಿ ಇದ್ದವರಿಗೆ ನೀಡಲಾಗುತ್ತದೆ. ಇದರಲ್ಲಿ ವಿವಿಧ ಲವಣಾಂಶಗಳು ಅಡಕ ಆಗಿರುವುದರಿಂದ ದೇಹಕ್ಕೆ ಉತ್ತಮ ಆಹಾರವೆನಿಸುತ್ತದೆ.
ಔಷಧಿ ಗುಣವುಳ್ಳ ಜೇನಿನ ರಸವನ್ನು ನರಗಳಿಗೆ ಸಂಬಂಧಿಸಿದ ನೋವು ನಿವಾರಣೆಗೂ ಉಪಯೋಗಿಸುತ್ತಾರೆ. ಇಂತಹ ಜೇನುಹುಳುಗಳು ನಶಿಸಿ ಹೋಗದಂತೆ ಉಳಿಸಿ ಜನರಲ್ಲಿ ಅರಿವು ಮೂಡಿಸುವುದಕ್ಕೆ ಮೇ 20 ರಂದು ವಿಶ್ವಜೇನು ನೊಣದ ದಿನವೆಂದು ಆಚರಿಸಲು ಜಗತ್ತಿನಾದ್ಯಂತ ನಿರ್ಧರಿಸಲಾಗಿದೆ ಎಂದರು.
ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಮಹಾಂತೇಶ ಮಾತನಾಡಿ, ಕೃಷಿಯಲ್ಲಿ ಜೇನು ಸಾಕಾಣಿಕೆ ಮಾಡಿದಾಗ ವಿವಿಧ ಬೆಳೆಗಳಲ್ಲಿ ಜೇನುನೊಣಗಳು ತಮ್ಮ ಪರಾಗಸ್ಪರ್ಶದಿಂದ ಬೆಳೆಗಳ ಶೇ. 65 ರಷ್ಟು ಉತ್ಪಾದಕತೆ ಹೆಚ್ಚಿಸುತ್ತವೆ. ಅಲ್ಲದೇ ನಮ್ಮ ಪರಿಸರದಲ್ಲಿ ಜೀವ ವೈವಿಧ್ಯ ಕಾಪಾಡಿದಂತಾಗುತ್ತದೆ. ಹಾಗೆಯೇ, ಈ ಸಾಕಾಣಿಕೆಗೆ ಪ್ರತ್ಯೇಕವಾದ ಭೂಮಿ, ನೀರು ಹಾಗೂ ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದಂತಹ 50 ರೈತ ಹಾಗೂ ರೈತ ಮಹಿಳೆಯರಿಗೆ ಕೃಷಿಯಲ್ಲಿ ಜೋನುನೊಣಗಳ ಮಹತ್ವದ ಬಗ್ಗೆ ತರಬೇತಿ ನೀಡಲಾಯಿತು. ಜೇನುತುಪ್ಪ, ಜೇನುನೊಣದ ಪೆಟ್ಟಿಗೆ, ಜೇನು ತೆಗೆಯುವ ಯಂತ್ರ, ರಾಣಿ ತಡೆತಟ್ಟೆ ಹಾಗೂ ಜೇನು ಮೇಣ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಜೇನು ಕೃಷಿ ತಾಂತ್ರಿಕತೆಯ ಹಸ್ತಪ್ರತಿ ಬಿಡುಗಡೆಗೊಳಿಸಿ ರೈತರಿಗೆ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.