ಧರ್ಮದ ಗಡಿಯಾಚೆ ಮಾನವೀಯತೆ: ಖಾದ್ರಿ
Team Udayavani, Jan 1, 2018, 11:46 AM IST
ವಾಡಿ: ಧರ್ಮದೊಳಗಿನ ಬಂಧು ಮಿತ್ರರನ್ನು ಪ್ರೀತಿ ಸ್ನೇಹದಿಂದ ಕಾಣುವುದು ಮುಖ್ಯವಲ್ಲ. ಧರ್ಮದ
ಗಡಿಯಾಚೆಗಿನ ಅನ್ಯ ಕೋಮಿನ ಜನರನ್ನು ಸಹೋದರರಂತೆ ಕಾಣುವುದೇ ನಿಜವಾದ ಮಾನವೀಯತೆ ಎಂದು
ಮುಸ್ಲಿಂ ಸಮಾಜದ ಮುಖಂಡ, ದರ್ಗಾದ ಸಜ್ಜಾದ್ ನಸೀನ್ ಸೈಯ್ಯದ್ ಮುಸ್ತಫಾ ಖಾದ್ರಿ ಹೇಳಿದರು.
ರಾವೂರ ಗ್ರಾಮದ ಹಜರತ್ ಮಹೆಬೂಬ್ ಸುಭಾನಿ ದರ್ಗಾದ 111ನೇ ಉರೂಸ್ ನಿಮಿತ್ತ ಏರ್ಪಡಿಸಲಾಗಿದ್ದ
ಸರ್ವಧರ್ಮ ಸಮ್ಮೇಳನ ಹಾಗೂ ಖವ್ವಾಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮನುಷ್ಯ ಮನುಷ್ಯರನ್ನು ಸ್ನೇಹದಿಂದ ಕಾಣದ ಧರ್ಮ ಧರ್ಮವಲ್ಲ. ಕೋಮು ದ್ವೇಷ ಸಮಾಜವನ್ನು ಸುಟ್ಟು ಹಾಕುತ್ತಿದೆ. ಮಾನವ ಸಂಬಂಧಗಳು ನಾಶವಾಗುತ್ತಿವೆ. ಪರಸ್ಪರ ಸಹೋದರತೆಯಿಂದ ಭಾರತೀಯನಾಗಿ ಬದುಕುವ
ವಾತಾವರಣ ಸೃಷ್ಟಿಯಾಗಬೇಕಿದೆ.
ಅಂತಹ ಮಾನವೀಯ ಮೌಲ್ಯಗಳನ್ನು ಪಸರಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ
ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಹೆಬೂಬ್ ಎಂ. ಆರ್., ಭಾರತದಲ್ಲಿ ನೂರಾರು ಜಾತಿ-ಧರ್ಮಗಳಿವೆ.
ಜೀವನದಲ್ಲಿ ವಿಭಿನ್ನ ಆಚರಣೆಗಳಿವೆ.
ಆದರೂ ಸಂವಿಧಾನ ನಮ್ಮೆಲ್ಲರಿಗೂ ಹಕ್ಕುಗಳನ್ನು ಕೊಟ್ಟು ಒಗ್ಗಟ್ಟಿನಿಂದ ಬದುಕಲು ಅವಕಾಶ ನೀಡಿದೆ. ಧಾರ್ಮಿಕ
ವಿಚಾರಗಳು ಮಾಡದ ಕಾರ್ಯವನ್ನು ಸಂಗೀತ ಮತ್ತು ಸಾಹಿತ್ಯ ಮಾಡಬಲ್ಲದು. ಖವ್ವಾಲಿ ಗಾಯನ ಸರ್ವರನ್ನೂ
ಒಂದುಗೂಡಿಸುವ ಶಕ್ತಿಯಿದೆ ಎಂದು ಹೇಳಿದರು.
ಕಲಬುರಗಿಯ ಸೈಯ್ಯದ್ ಶಹಾ ಮುರ್ತೂಜಾ ಖ್ವಾದ್ರಿ ದರ್ಗಾದ ಧರ್ಮಗುರು ಆರೀಫುಲ್ಲಾ ಖಾದ್ರಿ, ತಾಪಂ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಜಿಪಂ ಮಾಜಿ ಸದಸ್ಯ ಡಾ| ಗುಂಡಣ್ಣ ಬಾಳಿ, ಮುಖಂಡ ಬಸವರಾಜ ಮಾಕಾ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ, ತಿಪ್ಪಣ್ಣ ವಗ್ಗರ, ದೇವಿಂದ್ರ ತಳವಾರ, ಹಣಮಂತ ಹೊನಗೇರಿ, ಮೋಹನ
ಸೂರೆ, ಅಹ್ಮದ್ ಮಾಸ್ತಾರ, ಸುರೇಶ ಪಂಚಾಳ, ಇಲಿಯಾಸ್ ಸೇಠ, ಅಮೀರ್ ಮೂಸಾವಾಲೆ, ಜಾವೀದ್ ಕರ್ನೂಲ,
ಜಹಾಂಗೀರ ಸೇಠ ವಾಡಿ, ಜಾಫರ್ ಕರ್ನೂಲ, ಯೂನ್ಯೂಸ್ ಪ್ಯಾರೆ, ರಾಜು ಬೊಮ್ಮಣ್ಣ, ಹಾಜಿ ಕರೀಮಸಾಬ,
ಉಸ್ಮಾನ್ ಪಟೇಲ, ಮಹೇಶ ನೆಲೋಗಿ, ಅಲ್ಲಾಬಕ್ಷ ಮೌಜನ್, ಮಿಯ್ನಾ ಪಟೇಲ, ನವಾಬ್ ಪಟೇಲ ಪಾಲ್ಗೊಂಡಿದ್ದರು.
ಮಹೆಬೂಬ್ ಖಾನ್ ಧರಿ ಸ್ವಾಗತಿಸಿದರು. ಮಲ್ಲಿಕಪಾಶಾ ಮೌಜನ್ ವಂದಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸಂಗೀತ ಕಲಾವಿದರು ಖವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.