ತಡಕಲ್ ಗ್ರಾಮ ಪಂಚಾಯತ್‌ನಲ್ಲಿ ಪತಿ-ಪತ್ನಿಗೆ ಗೆಲುವು
Team Udayavani, Jan 2, 2021, 3:14 PM IST
ಆಳಂದ: ತಡಕಲ್ ಗ್ರಾಪಂ ವ್ಯಾಪ್ತಿಯ ಕಣಮಸ್ ಗ್ರಾಮದಲ್ಲಿ ಪತಿ-ಪತ್ನಿಯರು ಗೆಲುವು ಸಾಧಿಸಿದ್ದಾರೆ. ಕಣಮಸ್ ಗ್ರಾಮದ ವಾರ್ಡ್ ಸಾಮಾನ್ಯ ಸ್ಥಾನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಥಂಬೆ ಅವರು ಸ್ಪರ್ಧಿಸಿ 507 ಮತಗಳು ಪಡೆದು 2ನೇ ಬಾರಿಗೆ ಗೆಲವು ಸಾಧಿಸಿದ್ದಾರೆ. ಅವರ ಪತ್ನಿ ಪಾರ್ವತಿ ನಾಗೇಂದ್ರ ಥಂಬೆ ಮತ್ತೂಂದಡೆ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿ 453 ಮತ ಪಡೆದು ವಿಜಯ ಸಾಧಿಸಿದ್ದಾರೆ.
ತಡಕಲ ಗ್ರಾಮದ ರೈತ, ಕಾರ್ಮಿಕ ಹೋರಾಟದಲ್ಲಿ ತೋಡಗುತ್ತಲೇ ಎರಡು ಬಾರಿ ಸೋಲನುಭವಿಸಿದ್ದಕಲ್ಯಾಣಿ ತುಕಾಣೆ ಅವರ ಪತ್ನಿ ಮಹಾನಂದ ತುಕಾಣೆಅವರು ಈ ಬಾರಿ 27 ಮತ ಗಳಿಂದ ಗೆಲುವು ಸಾಧಿ ಸಿದ್ದಾರೆ. ಇದೇ ಗ್ರಾಮದ ಔಷಧ ವ್ಯಾಪಾರಿ ವಿಶ್ವನಾಥ ಬಸವರಾಜಪವಾಡಶೆಟ್ಟಿ ಗೆಲುವು ಸಾಧಿಸಿದ್ದಾರೆ. ಉದ್ಯೋಗ ಖಾತ್ರಿಕಾರ್ಮಿಕ ಬಂಧು ದಲಿತ ಬಡಾವಣೆಯ ಬಸವರಾಜ ಬೆಳಮಗಿಗೆ ಮತದಾರರು ಕೈಹಿಡಿದ್ದಾರೆ.
ಕಾರ್ಮಿಕ ಬಂದು ಗೆಲುವು: ಕಿಣ್ಣಿ ಸುಲ್ತಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೇಗಾಂವ ಗ್ರಾಮದಲ್ಲಿ ಕಾರ್ಮಿಕ ಬಂದು ಶರಣಪ್ಪ ಕುಂಬಾರ ಎಂಬುವ ವ್ಯಕ್ತಿ ಪಕ್ಷೇತ್ರನ್ನಾಗಿ ಜಯಶಾಲಿಯಾಗಿ ದ್ದಾನೆ. ಇದೇ ಗ್ರಾಮದಕೃಷ್ಣಾ ಕಾಂಬಳೆ ಎಂಬುವ ವ್ಯಕ್ತಿ ಮೀಸಲು ಕ್ಷೇತ್ರದ ಬದಲು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾ ಧಿಸಿದ್ದು,ಕಾಂಬಳೆಯವರ ಅದೃಷ್ಟದ ಬಾಗಿಲು ಮತ್ತೂಮ್ಮೆತೆರೆದುಕೊಂಡಿದೆ. ಕಳೆದ ಬಾರಿ ಸೋತ್ತಿದ್ದ ಸಾಲೇಗಾಂವ ಗ್ರಾಮದ ಕುಪೇಂದ್ರ ವಡಗಾಂವ ಅವರನ್ನು ಈ ಬಾರಿ ಮತದಾರರು ಕೈ ಹಿಡಿದಿದ್ದಾರೆ.
ಕೊರಳ್ಳಿ ಗ್ರಾಮದ ವಾರ್ಡ್ 2ರಲ್ಲಿ ಗುರುರಾಜ ಶಶಿಕಾಂತ ಪಾಟೀಲ ಅವರು 571 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಲಕ್ಷ್ಮಣ ಎಂಬುವರಿಗೆ ಕೇವಲ137 ಮತಗಳು ಪಡೆದಿದ್ದು, ಗುರುರಾಜ್ ಅವರು ತಾಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆದಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.