ಹೈದ್ರಾಬಾದ್ ಕರ್ನಾಟಕ ಪದ ದಾಸ್ಯದ ಸಂಕೇತ
Team Udayavani, Sep 20, 2022, 2:24 PM IST
ಸೇಡಂ: ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಣೆ ಮಾಡಲು ಶ್ರಮಿಸಿದವರು ಶಾಸಕ ರಾಜಕುಮಾರ ಪಾಟೀಲ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ತಾಲೂಕಿನ ಮದನಾ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗವನ್ನು ಹೈದರಾಬಾದ್ ಕರ್ನಾಟಕವೆಂದು ಕರೆಯುವುದು ದಾಸ್ಯದ ಸಂಕೇತ. ಇದನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡುವಂತ ಸರ್ಕಾರದ ಮೇಲೆ ಒತ್ತಡ ಹಾಕಿ ಸತತ ಪರಿಶ್ರಮದಿಂದ ಕ.ಕ ಎಂದು ನಾಮಕರಣ ಮಾಡಿಸಿದ್ದಾರೆ. ಮುಳುಗಿ ಹೋಗಿದ್ದ ಡಿಸಿಸಿ ಬ್ಯಾಂಕಿನ ಸಾರಥ್ಯವನ್ನು ವಹಿಸಿಕೊಂಡು ಕೋಟ್ಯಂತರ ರೂಪಾಯಿ ಅನುದಾನ ತರುವ ಮೂಲಕ ಅವಳಿ ಜಿಲ್ಲೆಯ ರೈತರ ಬಾಳಿಗೆ ಬೆಳಕಾಗಿ ನಿಂತಿದ್ದಾರೆ. ಅವರನ್ನು ಮತ್ತೂಮ್ಮೆ ಆಶೀರ್ವದಿಸಿ ಶಾಸಕರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಕೆಕೆಆರ್‌ಟಿಸಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ಸ್ವಾವಲಂಬಿ ಜೀವನ ನಡೆಸಲು ಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕ್‌ವತಿಯಿಂದ 2500 ಕೋಟಿ ಹಣವನ್ನು ಬಡ್ಡಿ ರಹಿತವಾಗಿ ಸಾಲ ಸೌಲಭ್ಯ ನೀಡುವ ಮಹತ್ತರ ಯೋಜನೆ ಹಾಕಿಕೊಳ್ಳಲಾಗಿದೆ. ಹಿಂದಿನ ದಿನಗಳಲ್ಲಿ ರೈತರು ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿ ಹೇಗಾದರೂ ಮಾಡಿ ರೈತರಿಗೆ ಈ ಬಡ್ಡಿಯಿಂದ ಮುಕ್ತಿ ಕೊಡಿಸಬೇಕು ಎನ್ನುವಾಗ ಕಂಡಿದ್ದು ಡಿಸಿಸಿ ಬ್ಯಾಂಕ್. ಆದರೆ ಅದಾಗಲೇ ಡಿಸಿಸಿ ಬ್ಯಾಂಕ್ ಮುಳುಗಿ ಹೋಗಿತ್ತು. ಆದರೂ ಛಲ ಬಿಡದೆ ಅದರ ಅಧ್ಯಕ್ಷನಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಡಿ, ಬೇಡಿ ಹಣವನ್ನು ತಂದು. ಕೆಲವು ಬ್ಯಾಂಕ್ ಗಳ ಮನವೊಲಿಸಿ ಹಣ ತಂದು ಈ ಭಾಗದ ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಕೆಲಸ ಮಾಡುತ್ತಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ನವಜೀವನ ಬ್ಲಿಡ್ ಬ್ಯಾಂಕ್ ಸಹಯೋಗದಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಬಿಜೆಪಿ ಮುಖಂಡ ಶಿವುಕುಮಾರ ಪಾಟೀಲ (ಜಿಕೆ) ತೆಲ್ಕೂರ ಚಾಲನೆ ನೀಡಿದರು. 40ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.
ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಕಿಂದಿಗೇರಿ, ಉಪಾಧ್ಯಕ್ಷೆ ವೆಂಕಟಮ್ಮ ಖಂಡೆಬೊಯಿನ್, ಶಿವುಕುಮಾರ ಪಾಟೀಲ (ಜಿಕೆ) ತೆಲ್ಕೂರ, ಅನಂತರೆಡ್ಡಿ ಪಾಟೀಲ, ಶಿವಲಿಂಗರೆಡ್ಡಿ ಬೆನಕನಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರೆಡ್ಡಿ ಪಾಟೀಲ ದೇಶಮುಖ ಮದನಾ, ನಾಗೇಂದ್ರಪ್ಪ ಸಾಹುಕಾರ, ಬಸವರಾಜ ಭೂತಪೂರ, ಶರಣರೆಡ್ಡಿ ಜಿಲ್ಲೆಡಪಲ್ಲಿ, ಮುಕುಂದ ದೇಶಪಾಂಡೆ, ಶ್ರೀಕಾಂತರೆಡ್ಡಿ, ನಾಗಪ್ಪ ಕೊಳ್ಳಿ, ವೀರೇಶ ಹೂಗಾರ, ಓಂಪ್ರಕಾಶ ಪಾಟೀಲ್, ಶಿವಾನಂದ ಸ್ವಾಮಿ, ಮುರುಗೇಂದ್ರ ರೆಡ್ಡಿ, ನಾಗಭೂಷಣರೆಡ್ಡಿ ಹೂಡಾ, ಮಹಿಪಾಲ್ ರೆಡ್ಡಿ, ವಿಜಯಕುಮಾರ ಆಡಕಿ, ಪ್ರಶಾಂತ ಕೇರಿ, ಶಿವಲಿಂಗಪ್ಪ ಶೆಟ್ಟಿ, ಶ್ರೀನಿವಾಸರೆಡ್ಡಿ, ಶಶಿಕಾಂತ ಬೆಡಸೂರು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಜಯಪ್ರಕಾಶ ಜೆಪಿ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.