ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ
ಸಿದ್ದರಾಮಯ್ಯ ಒಬ್ಬ ಹುಚ್ಚ, ಇಂತಹ ಹುಚ್ಚನನ್ನು ಕರ್ನಾಟಕ ಜನ ಯಾವತ್ತೂ ನೋಡಿರಲಿಲ್ಲ!
Team Udayavani, Nov 30, 2021, 2:22 PM IST
ಕಲಬುರಗಿ: ಬಿಜೆಪಿ ಹೈಕಮಾಂಡ್ ರಾಜ್ಯದ ಸಚಿವರ ರಹಸ್ಯ ವರದಿ ತರಿಸಿರುವ ವಿಚಾರ ತಮಗೇನು ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವರ ಕಾರ್ಯವೈಖರಿ ಕುರಿತಾಗಿ ಹೈಕಮಾಂಡ್ ರಹಸ್ಯ ವರದಿ ತರಿಸಿಕೊಂಡಿಲ್ಕ. ಇದೆಲ್ಲ ಸುಳ್ಳು ಸುದ್ದಿ ಎಂದರು.
ನಿರಾಣಿ ಮುಂದಿನ ಸಿಎಂ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪನವರು, ನಿರಾಣಿ ಆರಂಭದಲ್ಲಿ ಸಣ್ಣ ಉದ್ಯಮಿ. ಈಗ ವಿಶ್ವದಲ್ಲಿ ಹೆಚ್ಚು ಸಕ್ಕರೆ ಉತ್ಪಾದಿಸುವ ಉದ್ಯಮಿಗಳ ಸಾಲಿನಲ್ಲಿದ್ದಾರೆ. ನಾಳೆನೇ ಬೊಮ್ಮಾಯಿ ಅವರನ್ನು ತೆಗೆದು ನಿರಾಣಿಯವರನ್ನ ಸಿಎಂ ಮಾಡುತ್ತಾರೆಂದು ನಾನೆಲ್ಲೂ ಹೇಳಿಲ್ಲ. ಮುಂದೊಂದು ದಿನ ಆಗುತ್ತಾರೆಂದು ಹೇಳಿದ್ದೇನೆ. ಇದಕ್ಕೆ ಇಷ್ಟೊಂದು ಪ್ರಚಾರ ಸಿಗುತ್ತದೆ ಅಂದು ಕೊಂಡಿರಲಿಲ್ಲ. ಪ್ರಚಾರ ಸಿಕ್ಕಿದರೆ ಸಂತೋಷ. ನಾನೇನು ಮಾಡಲಾಗದು ಎಂದು ವಿವರಿಸಿದರು.
ಇದನ್ನೂ ಓದಿ:ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ
ಕಲಬುರಗಿಯಲ್ಲಿ ಶ್ರೀಮಂತರಿಗೆ ಬಿಜೆಪಿ ಟಿಕೆಟ್ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, 1734 ಕೋಟಿ ರೂ. ಆಸ್ತಿ ಇರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇಷ್ಟು ದುಡ್ಡು ಒಬ್ಬ ವ್ಯಕ್ತಿ ಬಳಿ ಇರುತ್ತದೆಂದು ನನಗೆ ಗೊತ್ತೇ ಇರಲಿಲ್ಲ. ಇಂತಹ ವಿಚಾರ ನಾ ಹೇಳಿದರೆ ಸಿದ್ರಾಮಯ್ಯ ತಮಗೆ ಪೆದ್ದ ಎನ್ನುತ್ತಾ. ಆದರೆ ಎಸ್.ಆರ್. ಪಾಟೀಲ್ ಒಬ್ಬ ಸಜ್ಜನ ರಾಜಕಾರಣಿ. ಸಿದ್ದರಾಮಯ್ಯನಂತೆ ಹತ್ತಾರು ಪಕ್ಷಕ್ಕೆ ಹೋದವರಲ್ಲ. ಅಂಥವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯನಷ್ಟು ಜಾತಿವಾದಿ ಇನ್ನೊಬ್ಬರಿಲ್ಲ. ವೀರಶೈವ ಲಿಂಗಾಯತ ಜಾತಿ ಒಡೆದಿದ್ದು ಇದೇ ಸಿದ್ರಾಮಯ್ಯ. ಗೋಹತ್ಯೆ ವಿರುದ್ದ ಹೋರಾಟ ಮಾಡಿದರೆ ಅಂತವರನ್ನೇ ಜೈಲಿಗೆ ಹಾಕಿದ ಮಹಾನುಭಾವ. ಸಿದ್ದರಾಮಯ್ಯ ಒಬ್ಬ ಹುಚ್ಚ. ಇಂತಹ ಹುಚ್ಚನನ್ನು ಕರ್ನಾಟಕ ಜನ ಯಾವತ್ತೂ ನೋಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈಗ ಸಿದ್ರಾಮಯ್ಯ ಜೆಡಿಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಗಿಂತ ಕಡಿಮೆ ಸೀಟು ಕಾಂಗ್ರೆಸ್ ಪಡೆಯುತ್ತದೆ ಎಂದು ಭವಿಷ್ಯ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.