ಐಎಎಸ್ ಉತ್ತೀರ್ಣ ಗಗನಕುಸುಮವಲ್ಲ: ನಂದಿನಿ
Team Udayavani, Jul 17, 2017, 3:22 PM IST
ಕಲಬುರಗಿ: ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನಾಗರಿಕ ಸೇವೆಗೆ
ಆಯ್ಕೆಯಾಗುವುದು ಗಗನ ಕುಸುಮವಲ್ಲ. ವಿದ್ಯಾರ್ಥಿಗಳು ದಿಟ್ಟ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ಐಎಎಸ್ ಸಾಧನೆ ಮನೆಯಲ್ಲೆ ಅರಳಲು ಸಾಧ್ಯ ಎಂದು ಭಾರತೀಯ ಆಡಳಿತ ಸೇವೆ ಸಾಧಕಿ ನಂದಿನಿ ಕೆ.ಆರ್. ಅನಿಸಿಕೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮಿಕೊಂಡಿದ್ದ ಭಾರತೀಯ ಆಡಳಿತ ಸೇವೆ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಧನಾತ್ಮಕ ಮನೋಭಾವ ಬೆಳೆಸಿಕೊಂಡು ಅಭ್ಯಾಸ ಮಾಡಬೇಕು. ತಾವು ಕಂಡಿರುವ ಕನಸು ಮತ್ತು ಆಸೆಗಳಿಗೆ ರಾಜಿ ಮಾಡಿಕೊಳ್ಳಬಾರದು. ಹೆಣ್ಣುಮಕ್ಕಳು ಕಟ್ಟುಪಾಡುಗಳಿಗೆ ಬಲಿಯಾಗದೇ ತಮ್ಮ ಅಧ್ಯಯನಕ್ಕೆ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಗುರಿ ತಲುಪಬೇಕು. ಸವಾಲುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ಗುರುಗಳು ವಿದ್ಯಾರ್ಥಿಗಳಿಗೆ ಓದುವಲ್ಲಿ ಸ್ಫೂರ್ತಿ ತುಂಬಿ ದೊಡ್ಡ ಗುರಿ ತಲುಪಲು ಮಾರ್ಗದರ್ಶನ ಮಾಡಬೇಕು. ಪುಸ್ತಕದಲ್ಲಿರುವ ವಿಷಯದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕೆಂದರು. ಭಾರತೀಯ ಆಡಳಿತ ಸೇವೆ ಸಾಧಕ ಕಲಬುರಗಿಯ ಶೇಖ್
ತನ್ವೀರ್ ಆಸೀಫ್ ಮಾತನಾಡಿ, ವಿದ್ಯಾರ್ಥಿಗಳು ಯಾವುದನ್ನು ಅಸಾಧ್ಯ ಎಂದು ಭಾವಿಸಬಾರದು. ಪಾಲಕರು ಇದನ್ನೇ ಓದಬೇಕು, ಇದನ್ನೇ ಮಾಡಬೇಕು ಎಂದು ಒತ್ತಡ ಹೇರಿದರೆ ವಿದ್ಯಾರ್ಥಿಗಳು ಖನ್ನತೆಗೆ ಒಳಗಾಗುತ್ತಾರೆ. ಪ್ರೋತ್ಸಾಹಿಸಿದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಕಲಬುರಗಿಯ ಭಾರತೀಯ ಆಡಳಿತ ಸೇವೆ ಸಾಧಕ ರಾಜೇಶ ರಾಠೊಡ ಮಾತನಾಡಿ, ಲೋಕಸೇವಾ ಆಯೋಗದ ಸ್ಪರ್ಧಾತ್ಮಕ
ಪರೀಕ್ಷೆಯಲ್ಲಿ 6ರಿಂದ 12ನೇ ತರಗತಿಯ ವಿಷಯಗಳ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ. ವಿದ್ಯಾರ್ಥಿಗಳು 6ರಿಂದ 12ನೇ ತರಗತಿಯ ವಿಷಯವನ್ನು ಚೆನ್ನಾಗಿ ಓದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುತ್ತವೆ. ಭಾರತೀಯ ಆಡಳಿತ ಸೇವೆ ಪರೀಕ್ಷೆಗೆ ತಯಾರಿ ಮಾಡುವವರು ದಿನಕ್ಕೆ ಸುಮಾರು 8 ರಿಂದ 10 ಗಂಟೆಗಳ ಅಭ್ಯಾಸ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.
ಕಾಳಗಿಯ ಭಾರತೀಯ ಆಡಳಿತ ಸೇವೆ ಸಾಧಕ ಆನಂದ ರಟಕಲ್ ಮಾತನಾಡಿ, ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಲು ಗುರಿ ಮತ್ತು ಸ್ಫೂರ್ತಿ ಮುಖ್ಯವಾಗಿದೆ. ಗುರಿ ತಲುಪಲು ಏನಾದರೂ ಅಡಚಣೆ ಎದುರಾದರೆ ಅದನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಬೇಕು. ತಂದೆ ತಾಯಿಗಳು ಮಕ್ಕಳ ಓದಿಗೆ ಪ್ರೋತ್ಸಾಹಿಸಿ ನೈತಿಕತೆ ಬೆಳೆಸಬೇಕೆಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ, ಐಎಎಸ್ ಅಥವಾ ಐಪಿಎಸ್‌ಗಳಾಗಿ ಆಯ್ಕೆ
ಆದವರಿಗೆ ನೇರವಾಗಿ ಸಮಾಜ ಸೇವೆ ಮಾಡುವ ಸದಾವಕಾಶ ದೊರೆಯುತ್ತದೆ. ಸರ್ಕಾರಿ ಕೆಲಸ ಮಾಡಲು ಅವಕಾಶ ಸಿಕ್ಕಾಗ ನಿಸ್ವಾರ್ಥತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಪ್ರೊಬೇಷನರಿ ಐಎಎಸ್ ಅಧಿಕಾರಿಗಳಾದ ಅನಿಲ್ ಕಮಲ್ ಅತುಲ್, ಪಲ್ಲವಿ ಮತ್ತಿತರರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ನಾಗರಿಕ
ಸೇವಾ ಪರೀಕ್ಷಾ ಸಾಧಕರೊಂದಿಗೆ ಸಂವಾದ ನಡೆಯಿತು.
ಕಥೆ-ಕಾದಂಬರಿ ಓದಲು ಪ್ರೋತ್ಸಾಹಿಸಿ
ನಾವು ಮಾಡುವ ಕೆಲಸದಿಂದ ನಮ್ಮ ಹುದ್ದೆಗೆ ಗೌರವ ದೊರೆಯುವಂತೆ ಆಗಬೇಕು. ಸಮಾಜದಲ್ಲಿ ಕಡೆಗಣಿಸಿದವರಿಗೆ ಸಹಾಯ ಮಾಡಿ ಅವರ ಏಳ್ಗೆಗೆ ಪ್ರಯತ್ನಿಸಬೇಕು. ಸಮಾಜದಲ್ಲಿ ಮತ್ತು ಪ್ರಪಂಚದಲ್ಲಿ ವಿದ್ಯೆಯಿಂದ ಗೌರವ ದೊರೆಯುತ್ತದೆ. ವಿದ್ಯೆಯ ಜೊತೆಗೆ ಸಂಸ್ಕಾರ ಹಾಗೂ ಮಾನವೀಯತೆ ಬೆಳೆಸಿಕೊಳ್ಳಬೇಕಾದರೆ ಮಕ್ಕಳಿಗೆ ಪುಸ್ತಕ, ಕಥೆ, ಕಾದಂಬರಿಗಳನ್ನು ಓದಲು ಪ್ರೋತ್ಸಾಹಿಸಬೇಕು.
ಅಲೋಕ ಕುಮಾರ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.