ಮಾಮೂಲಿ ಕೊಡದಿದ್ದರೆ ಕೆಲಸ ಆಗಲ್ಲ
Team Udayavani, Mar 25, 2017, 3:08 PM IST
ಅಫಜಲಪುರ: ಯಾವುದೇ ಕ್ರಿಯಾ ಯೋಜನೆ ತಯಾರಿಸಿ ಅದಕ್ಕೆ ಅನುಮೋದನೆ ನೀಡಬೇಕಾದರೆ ಅಧಿಕಾರಿಗಳು ಮಾಮೂಲಿ ಕೇಳುತ್ತಾರೆ. ಹೀಗಿದ್ದಾಗ ಅಭಿವೃದ್ಧಿ ಕಾಮಗಾರಿ ಎಲ್ಲಿಂದ ಆಗಬೇಕು ಎಂದು ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಆರೋಪಿಸಿದರು.
ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ-ತಾಪಂ ಕ್ರಿಯಾ ಯೋಜನೆಗಳ ತಯಾರಿಕೆ, ಅನುಮೋದನೆಗಾಗಿ ಅಧಿ ಕಾರಿಗಳು ಪಿಡಿಒಗಳಿಂದ ಮತ್ತು ಸದಸ್ಯರಿಂದ 20ರಿಂದ 25 ಸಾವಿರ ರೂ. ಮಾಮೂಲಿ ಕೇಳುತ್ತಾರೆ.
ಕೊಡದಿದ್ದರೆ ಕೆಲಸವಾಗುವುದಿಲ್ಲ ಎಂದಾಗ ಪ್ರಭಾರಿ ಇಒ ಮಹಾದೇವಗೌಡ ಮಾತನಾಡಿ ನನಗಿಂತ ಮೊದಲಿದ್ದ ಅಧಿಕಾರಿಗಳು ಮಾಮೂಲಿ ಕೇಳಿದ್ದಾರೋ ಇಲ್ಲವೊ ಗೊತ್ತಿಲ್ಲ. ಆದರೆ ನನ್ನ ಅಧಿಕಾರವಧಿಯಲ್ಲಿ ಯಾರೂ ಯಾರಿಗೂ ನಯಾ ಪೈಸೆ ಕೊಡಬೇಕಾಗಿಲ್ಲ. ಸರಿಯಾಗಿ ಕಾಮಗಾರಿ ಕೈಗೊಂಡು ಅನುದಾನದ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಆರ್ .ಎ. ಇನಾಮದಾರ ಸಭೆಗೆ ವರದಿ ನೀಡಿದರು. ತಾಪಂ ಸದಸ್ಯೆಯರಾದ ಅಂಬಿಕಾ ನಿಂಗಪ್ಪ, ಸುಜಾತಾ ಮಹಾಂತಪ್ಪ ಮಾತನಾಡಿ, ಚಿಂಚೋಳಿ ಮತ್ತು ಅಂಕಲಗಿ ಗ್ರಾಮಗಳಲ್ಲಿನ ಕೆರೆಗಳು ಸಂಪೂರ್ಣ ಮುಚ್ಚಿಹೋಗಿವೆ. ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ನಿರ್ವಹಣೆ ಮಾಡಿಲ್ಲ.
ಈಗ ರೈತರು ಕೆರೆ ಜಾಗದಲ್ಲಿ ಉಳುಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿ ಕಾರಿ ಇನಾಮದಾರ, ಕೆರೆಗಳಿಗೆ ಭೇಟಿ ನೀಡಿ ರೈತರು ಕೆರೆ ಜಾಗದಲ್ಲಿ ಉಳುಮೆ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಕುಲಕರ್ಣಿ ಮಾಹಿತಿ ನೀಡಿ, ಇಲಾಖೆ ವ್ಯಾಪ್ತಿಗೆ ಬರುವ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇಲ್ಲ.
ಸರ್ಕಾರದಿಂದ ಬಂದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಎಂದಾಗ ಮಧ್ಯ ಪ್ರವೇಶಿಸಿದ ಇಒ ಮಹಾದೇವಗೌಡ ಸಾಗನೂರ ವಸತಿ ನಿಲಯದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಸ್ವತ್ಛತೆ ಇಲ್ಲ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಇದೆ ಇದನ್ನು ನೀವು ನೋಡಿಲ್ಲವೇ ಎಂದು ಪ್ರಶ್ನಿಸಿದರು.
ಇವರ ಮಾತಿಗೆ ತಾ.ಪಂ ಸದಸ್ಯ ಗುರಣ್ಣ ಧ್ವನಿಗೂಡಿಸಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ದೊರಕುತ್ತಿಲ್ಲ. ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸಂಜೆ ಮನೆಪಾಠ ಹೇಳುತ್ತಿಲ್ಲ, ಅನೇಕ ಅವ್ಯವಹಾರಗಳು ನಡೆಯುತ್ತಿವೆ. ಇದಕ್ಕೆಲ್ಲ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದರು.
ತಾ.ಪಂ ಸದಸ್ಯ ವಿಠಲ್ ನಾಟೀಕಾರ ಮಾತನಾಡಿ, ಗ್ರಾ.ಪಂ ಪಿಡಿಒಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಕಳೆದ ಬೇಸಿಗೆಯಲ್ಲಿನ ರೀತಿ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಹೀಗಾಗಿ ದಿನದಲ್ಲಿ ಕಡೆ ಪಕ್ಷ ನಾಲ್ಕು ಗಂಟೆಯಾದರೂ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚಿಸಿ ಎಂದು ಇಒ ಮಹಾದೇವಗೌಡ ಅವರಿಗೆ ಮನವಿ ಮಾಡಿದರು.
ಬೇಸಿಗೆಯಲ್ಲಿ ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಆಗದಂತೆ ಆಯಾ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ತಾಪಂ ಕಚೇರಿಯಲ್ಲಿ ಅಳವಡಿಸಿರುವ 3 ಹವಾನಿಯಂತ್ರಕಗಳಿಗೆ 4.5 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಇದು ಅಷ್ಟು ಮೊತ್ತದ್ದಾಗಿಲ್ಲ. ಇದರಲ್ಲಿ ಅವ್ಯವಹಾರ ನಡೆದಿದ್ದು ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಬಲವಂತ ಜಕಬಾ, ಶರಣು ಪಡಶೆಟ್ಟಿ, ವಸಂತ , ಶಂಕರಗೌಡ ಪಾಟೀಲ ಹಾಗೂ ವಿಧ ಇಲಾಖೆ ಅಧಿ ಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.