ಅಕ್ರಮ ಕಟ್ಟಡ-ಒತ್ತುವರಿ ಮಾಡಿದವರಿಗೆ ನಡುಕ
Team Udayavani, May 3, 2017, 4:18 PM IST
ಕಲಬುರಗಿ: ಸೆಟ್‌ಬ್ಯಾಕ್ ಬೀಡದೆ ಹಾಗೆ ಕಟ್ಟಿದ ಕಟ್ಟಡಗಳಿಗೆ, ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸದಿರುವ ಹಾಗೂ ನಿಗದಿಗಿಂತ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡಿರುವ ಅಕ್ರಮ ಕಟ್ಟಡದಾರರಿಗೆ ಮಹಾನಗರ ಪಾಲಿಕೆ ಖಡಕ್ ನೋಟಿಸ್ ಜಾರಿ ಮಾಡಿದೆ. ನಿಯಮಾವಳಿ ಉಲ್ಲಂಘಿಸಿ ಅಕ್ರಮ ಕಟ್ಟಡ ಕಟ್ಟಿದವರು ನೊಟೀಸ್ ತಲುಪಿದ ನಂತರ ಸರಿ ಮಾಡಿಕೊಳ್ಳಬೇಕು.
ಇಲ್ಲದಿದ್ದರೆ ಪಾಲಿಕೆಯೇ ಒತ್ತುವರಿ ತೆರವು, ಅಕ್ರಮ ಕಟ್ಟಡಗಳ ನೆಲಸಮದಂತಹ ಕಾರ್ಯಾಚರಣೆ ಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಪಾಲಿಕೆ ನೋಟಿಸ್ ಜಾರಿ ಮಾಡಿದ್ದು, ಅಕ್ರಮ ಕಟ್ಟಡದಾರರಲ್ಲಿ ನಡುಕ ಶುರುವಾಗಿದೆ. ಕಳೆದ ಏ. 28ರಂದು ದಕ್ಷ ಹಿರಿಯ ಐಎಎಸ್ ಅಧಿಕಾರಿಯಾಗಿರುವ ಹರ್ಷ ಗುಪ್ತಾ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಹಾಗೂ
ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಗಳಾದ ನಂತರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಹಾನಗರದಲ್ಲಿನ ಅಕ್ರಮ, ಒತ್ತುವರಿ ಕಟ್ಟಡಗಳ ಕುರಿತಾಗಿ ಸಮಾಲೋಚಿಸಿ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಮಹಾನಗರಾದ್ಯಂತ 250ಕ್ಕೂ ಹೆಚ್ಚು ಅಕ್ರಮ ಕಟ್ಟಡದಾರರಿಗೆ ನೋಟಿಸ್‌ಗಳು ಜಾರಿಯಾಗಿವೆ.
ಸ್ವಯಂ ತೆರವು: ಹರ್ಷ ಗುಪ್ತಾ ಆರ್‌ಸಿಯಾಗಿ ಕಾರ್ಯಭಾರ ವಹಿಸಿಕೊಳ್ಳುತ್ತಿದ್ದಂತೆ ಹಾಗೂ ನೋಟಿಸ್ ಜಾರಿಯಾಗುತ್ತಿದ್ದಂತೆ ಸೆಟ್‌ಬ್ಯಾಕ್ ಹಾಗೂ ಪಾರ್ಕಿಂಗ್ ಸ್ಥಳ ಬಿಡದಿರುವ ಕಟ್ಟಡದಾರರು ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಈಗಾಗಲೇ ಗೋವಾ ಹೊಟೇಲ್ ಹತ್ತಿರ ಕಟ್ಟಡದಾರರು ಕೆಳ ಅಂತಸ್ತಿನ ಕೋಣೆಗಳನ್ನು ನೆಲಸಮಗೊಳಿಸಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಿದ್ದಾರೆ. ಅದೇ ರೀತಿ ಅಲ್ಲಲ್ಲಿ ಒತ್ತುವರಿ ತೆರವು ಹಾಗೂ ಪಾರ್ಕಿಂಗ್‌ಗೆ ಜಾ ಬಿಡುತ್ತಿರುವ ಸ್ವಯಂ ಕಾರ್ಯಾಚರಣೆ ನಡೆದಿದೆ. ಮಹಾನಗರಾದ್ಯಂತ ಕಟ್ಟಡ ನಿರ್ಮಾಣಗಾರರಲ್ಲಿಪಾಲಿಕೆಯಿಂದ ಯಾವುದೇ ಭಯದ ವಾತಾವರಣ ಇರಲಿಲ್ಲ.
ಅಕ್ರಮ ಕುರಿತಾಗಿ ಪಾಲಿಕೆ ಅಧಿಕಾರಿಗಳು ಪ್ರಶ್ನಿಸಲು ಹೋದಾಗ ಮಾಲೀಕರು ನೌಕರರ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಸಂಗಗಳು ನಡೆದಿದ್ದವು. ಜನಪ್ರತಿನಿಧಿಗಳ ಮೂಲಕ ಒತ್ತಡ ಹಾಕಿದ ಪ್ರಸಂಗಗಳು ನಡೆಯುತ್ತಲೇ ಬಂದಿದ್ದವು. ಈಗ ಕಠಿಣ ಕ್ರಮದ ಹೆಜ್ಜೆ ಹಾಕುತ್ತಿರುವುದು ಎಲ್ಲರಲ್ಲು ನಡುಕ ಹುಟ್ಟಿಸಿದೆ.
ಕಾರ್ಯಾಚರಣೆ: ಮಂಗಳವಾರ ನೆಹರು ಗಂಜ್ ಪ್ರದೇಶದಲ್ಲಿನ ಮುಖ್ಯ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಹಾಗೂ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸದಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಇದೇ ರೀತಿಯ ಕಾರ್ಯಾಚರಣೆ ನಗರಾದ್ಯಂತ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋರ್ಟ್‌ಗೆ ರಜೆ: ಮೇ ಮಾಸಾಂತ್ಯದವರೆಗೂ ನ್ಯಾಯಾಲಯಗಳಿಗೆ ರಜೆಯಿದೆ. ಹೀಗಾಗಿ ಈಗ ಕೈಗೆತ್ತಿಕೊಂಡಿರುವ ಒತ್ತುವರಿ ತೆರವು ಹಾಗೂ ಅಕ್ರಮ ಕಟ್ಟಡಗಳಿಗೆ ನೆಲಸಮ ಕಾರ್ಯ ಜೆಸಿಬಿಯಿಂದ ಕೈಗೊಂಡರೆ ನ್ಯಾಯಾಲಯದ ಮೋರೆ ಹೋಗಲು ತಕ್ಷಣದ ಅವಕಾಶ ಇಲ್ಲದಿರುವುದನ್ನು ಮನಗಂಡು ತುರ್ತು ಕಾರ್ಯಾಚರಣೆಗೆ ಇಳಿಯಲಾಗಿದೆ ಎನ್ನಲಾಗಿದೆ.
ಕೋಟೆ ತೆರವು ಯಾವಾಗ: ಐತಿಹಾಸಿಕ ಬಹಮನಿ ಕೋಟೆಯೊಳಗೆ ಅಕ್ರಮವಾಗಿ ವಾಸವಾಗಿರುವರನ್ನು ತೆರವುಗೊಳಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಇಲ್ಲಿನ ನಿವಾಸಿಗಳಿಗೆ ಬೇರೆ ಕಡೆ ನಿವೇಶನ ಕಲ್ಪಿಸುವ ಕುರಿತಾಗಿ ಹಲವು ಸಲ ಮಾತುಕತೆ ನಡೆದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಜಾಫರಾಬಾದ ಬಳಿ ಏಳು ಎಕರೆ ಜಮೀನಿನಲ್ಲಿ 190 ಕುಟುಂಬಗಳಿಗೆ ಮನೆ ಕಲ್ಪಿಸಲು ಜಿಲ್ಲಾಡಳಿತ ಯೋಚಿಸುತ್ತಿದೆ.
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.