ಸುಧಾರಿಸಿದೆ ಆಹಾರ ಉತ್ಪಾದನೆ
Team Udayavani, Jun 10, 2018, 10:05 AM IST
ಕಾಳಗಿ: ಹಸಿರು ಕಾಂತ್ರಿಯಲ್ಲಿ ಸುಧಾರಿತ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಾಲಿಂದರ ಗುಂಡಪ್ಪ ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರೈತ ಸಂಪರ್ಕ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ
ಸಮಗ್ರ ಕೃಷಿ ಅಭಿಯಾನ ಯೊಜನೆಯಡಿ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಜನಸಂಖ್ಯೆಗೆ ಅನುಗುಣವಾಗಿ ಹಸಿರು ಕಾಂತ್ರಿ ಸಮಯದಲ್ಲಿ ಹೊಸ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು
ನೀರಾವರಿ ಸೌಲಭ್ಯ, ಭೂ ಸುಧಾರಣೆ, ಕೃಷಿ ಯಾಂತ್ರಿಕರಣದಿಂದ ನೂರಾರು ಎಕರೆ ಭೂಮಿಯಲ್ಲಿ ಭೂಸಾಗುವಳಿ ಮಾಡಿ ಹೆಚ್ಚಿನ ಆಹಾರವನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಬೆಳೆ ರೋಗತಜ್ಞ ದಯಾನಂದ ಮಹಾಲಿಂಗ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆ ಬೆಳೆಯುವ ಪ್ರದೇಶ ಕಲಬುರಗಿ ಜಿಲ್ಲೆಯಾಗಿದ್ದು, ಈ ಭಾಗದ ರೈತರಿಗೆ ತೊಗರಿಯೇ ಆಧಾರವಾಗಿದೆ. ನಿರಂತರವಾಗಿ ತೊಗರಿ ಬೆಳೆ ಬೆಳೆಯುವುದರಿಂದ ನೆಟೆ ರೋಗ ಹರಡುವ ಸಾಧ್ಯತೆಯಿದ್ದು ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಬೆಳೆ ಬದಲಾವಣೆ ಮಾಡಿ ಸಾವಯುವ ಗೊಬ್ಬರ, ತಿಪ್ಪೆ ಗೊಬ್ಬರ ಹಾಕುವುದರಿಂದ ಈ ರೋಗ ತಡೆಯಬಹುದು ಎಂದು ಸಲಹೆ ನೀಡಿದರು.
ನೆಟೆ ರೋಗ ಹರಡುತ್ತಿರುವ ಹೊಲದಲ್ಲಿ ಟಿಎಸ್3ಆರ್, ಜಿಆರ್‌ಜಿ 811 ತಳಿಯ ತೊಗರಿ ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತುವುದರಿಂದ ನೆಟೆ ರೋಗ ನಿಯಂತ್ರಿಸಬಹುದು ಎಂದು ಹೇಳಿದರು. ತೋಟಗಾರಿಕಾ ಸಹಾಯಕ ನಿರ್ದೇಶಕ ಜಗದಿಧೀಶ ದರ್ಜೆ ತೋಟಗಾರಿಕೆ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಪಟ್ಟಣದ ಮಂಜುನಾಥ ಆಗ್ರೋ ಏಜೆನ್ಸಿ ವತಿಯಿಂದ 100ರೈತರಿಗೆ ಬಿಜೋಪಚಾರಕ್ಕಾಗಿ ಉಚಿತವಾಗಿ ರೈಬೊಸಿಯಂ, ಟ್ರೆ„ಕೊರ್ಡಮಾ, ಪಿಎಸ್‌ಬಿ ವಿತರಿಸಲಾಯಿತು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರುಚಿ ಕೆಂಗಾಪುರ, ಎಎಒ ಬಸವರಾಜ ಬಂಗರಗಿ, ಚಂದ್ರಕಾಂತ ವನಮಾಲಿ, ಶರಣು ವಚ್ಚಾ, ಮಲ್ಲಿಕಾರ್ಜುನ
ಟೆಂಗಳಿಕರ್, ರೈತರಾದ ಅಶೋಕ ಕಲಶೆಟ್ಟಿ, ಶಿವಪುತ್ರಪ್ಪ ಸಣ್ಣೂರ, ಬಂಡಪ್ಪ ತಳವಾರ, ಸೂರ್ಯಕಾಂತ ನೈಕೊಡಿ, ಕಾಳಶೆಟ್ಟಿ ಸಲಗೂರ ಇದ್ದರು. ಕೃಷ್ಣ ಕಟ್ಟಿಮನಿ ಸ್ವಾಗತಿಸಿದರು, ನಾಗರಾಜ ಸಜ್ಜನ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.