ಕಲಬುರಗಿಯ ಜಿಮ್ಸ್ ನಲ್ಲಿ ಅತ್ಯಾಚಾರ ಯತ್ನ ನಡೆಸಿದ್ದ ಆರೋಪಿಯ ಹಳೆಯ ಹೀನ ಕೃತ್ಯ ಬಯಲು
Team Udayavani, Jun 20, 2021, 11:39 AM IST
ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆ ಮೇಲೆ ಅತ್ಯಾಚಾರ ಯತ್ನದ ಪ್ರಕರಣದ ಆರೋಪಿ, ಈ ಹಿಂದೆಯೂ ಕೂಡ ಆಸ್ಪತ್ರೆಯಲ್ಲೇ ಇಂತಹದೊಂದು ಕೃತ್ಯಕ್ಕೆ ಯತ್ನಿಸಿದ್ದ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಜೂ.9ರಂದು ಕೋವಿಡ್ ವಾರ್ಡ್ ನಲ್ಲಿ ಮಹಿಳಾ ರೋಗಿ ಮೇಲೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಪ್ರೇಮಸಾಗರ ಅಲಿಯಾಸ್ ಪಿಂಟು ಎಂಬುವನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲೇ ನಡೆದಿರುವ ಈ ಅತ್ಯಾಚಾರ ಯತ್ನ ಘಟನೆ ಸಾರ್ವಜನಿಕರ ಆಘಾತಕ್ಕೆ ಕಾರಣವಾಗಿತ್ತು. ಅಲ್ಲದೇ, ಮೂರು ದಿನಗಳ ಹಿಂದೆ ಅತ್ಯಾಚಾರ ಯತ್ನಕ್ಕೆ ಒಳದಾಗಿದ್ದ ಮಹಿಳೆ ಸಾವನ್ನಪ್ಪಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಇದೇ ಆರೋಪಿ ಪಿಂಟು ಈ ಹಿಂದೆ ಕೂಡ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಈ ಆರೋಪಿ ಹಿರಿಯ ಮಹಿಳೆ ಮೇಲೆ ಕೈ ಹಾಕಿ ಕೆಟ್ಟದ್ದಾಗಿ ನಡೆದುಕೊಂಡಿದ್ದು ಬಯಲಾಗಿದೆ.
ಇದನ್ನೂ ಓದಿ: ತೀರ್ಥಹಳ್ಳಿ: ಅಪ್ರಾಪ್ತೆ ಮದುವೆಯಾಗಿ ಅತ್ಯಾಚಾರ! : ಯುವಕ ಅಂದರ್
ಅಂದೇ ಈ ವಿಷಯ ತಿಳಿದ ಮಹಿಳೆಯ ಕುಟುಂಬಸ್ಥರು ಆರೋಪಿಯನ್ನು ಹಿಡಿದಿದ್ದರು. ಆಸ್ಪತ್ರೆಯಲ್ಲೇ ಆರೋಪಿಗೆ ಕುಟುಂಬಸ್ಥರು ಮತ್ತು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಥಳಿಸಿದ್ದರು. ಆರೋಪಿ ಪಿಂಟುಗೆ ಥಳಿಸಿ ಎಚ್ಚರಿಕೆ ನೀಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಅಂದೇ ಆರೋಪಿ ಪಿಂಟು ವಿರುದ್ಧ ಆಸ್ಪತ್ರೆಯವರು ಪೊಲೀಸರಿಗೆ ದೂರು ನೀಡಿ, ಆತನ ಬಂಧನಕ್ಕೆ ಕ್ರಮ ವಹಿಸಿದ್ದರೆ, ಈಗ ಮತ್ತೊಂದು ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಚಾರ ಯತ್ನದಂತಹ ಪ್ರಕರಣಗಳು ನಡೆಯುವುದು ತುಂಬಾ ಆತಂಕಕಾರಿ. ರಾಜ್ಯ ಸರ್ಕಾರ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಈ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಬೇಕೆಂದು ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್ ಖತೀಬ್ ಆಗ್ರಹಿಸಿದ್ದಾರೆ.
ಇನ್ನು, ಆರೋಪಿ ಪಿಂಟು ಖಾಸಗಿ ಆಂಬ್ಯಲೆನ್ಸ್ ಚಾಲಕನಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿನ ಮೃತ ದೇಹಗಳನ್ನು ಸಾಗಿಸುತ್ತಿದ್ದ. ಕೋವಿಡ್ ಸೋಂಕಿತೆ ಮೇಲೆ ಅತ್ಯಾಚಾರ ಯತ್ನದ ಘಟನೆಯಲ್ಲಿ ಆರೋಪಿ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.