ಪಾಟೀಲ ಹೇಳಿಕೆಗೆ ಈಡಿಗರ ಖಂಡನೆ
Team Udayavani, Apr 8, 2018, 4:57 PM IST
ಜೇವರ್ಗಿ: ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಈಳಿಗ್ಯಾ ಎಂದು ಸಂಬೋಧಿ ಸುವ ಮೂಲಕ ಒಂದು ಜಾತಿಯ ವೃತ್ತಿ ಮತ್ತು ಘನತೆಯನ್ನು ಅವಮಾನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಆರ್ಯ ಈಡೀಗ ಸಮಾಜದ ಮುಖಂಡರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಸಮಾಜದ ಹಿರಿಯ ಮುಖಂಡ ಲಾಲಯ್ಯ ಗುತ್ತೇದಾರ ನೇತೃತ್ವದಲ್ಲಿ ನೂರಾರು ಸಮಾಜ ಬಾಂಧವರು ತಹಶೀಲ್ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜಕಾರಣದಲ್ಲಿರುವ ವ್ಯಕ್ತಿಗಳು ವೈಯಕ್ತಿಕವಾಗಿ ಮತ್ತು ಜಾತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಬಾರದು. ಕೋಣ ಕಡಿಯಬೇಕು ಎಂದು ಜಾತಿ ಹೀಯಾಳಿಕೆ ಮಾಡಿರುವ ಮಾಜಿ ಶಾಸಕ ಎಂ.ವೈ.ಪಾಟೀಲ ಅವರ ಪುತ್ರ ಜಿಪಂ ಸದಸ್ಯ ಅರುಣಕುಮಾರ ಅವರ ಹೇಳಿಕೆಯನ್ನು ಈಡೀಗ ಸಮಾಜ ಬಲವಾಗಿ ಖಂಡಿಸುತ್ತದೆ.
ಜಿಪಂ ಸದಸ್ಯರಾಗಿ ಚುನಾಯಿತರಾದವರು ಎಲ್ಲ ಜಾತಿಯ ಮತಗಳಿಂದ ಗೆದ್ದಿರುತ್ತಾರೆ ಎನ್ನುವುದನ್ನು ಮರೆಯಬಾರದು. ಈಡೀಗ ಜಾತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪಾಟೀಲ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು. ಸಮಾಜದ ಮುಖಂಡ ದೇವಿಂದ್ರ ಗುತ್ತೇದಾರ, ಶಿವು ಗುತ್ತೇದಾರ, ನಾಗರಾಜ ಗುತ್ತೇದಾರ, ಜಾನಯ್ಯ ಗುತ್ತೇದಾರ, ವೆಂಕಟೇಶ ಎನ್. ಗುತ್ತೇದಾರ, ದೇವಿಂದ್ರಪ್ಪ ಮಾಸ್ತರ ಗುಡೂರ, ನವೀನ್ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ನಿಂಗಯ್ಯ ಗುತ್ತೇದಾರ, ಮಾನಯ್ಯ ಗುತ್ತೇದಾರ ಯಾಳವಾರ, ದೇವಿಂದ್ರ ಎಂ.ಗುತ್ತೇದಾರ, ಬಸಯ್ಯ ಗುತ್ತೇದಾರ ಅವರಾದ, ದೇವಿಂದ್ರ ಗುತ್ತೇದಾರ ಅಣಬಿ, ಲಾಲಯ್ಯ ಗುತ್ತೇದಾರ, ಜಾನಯ್ಯ ಗುತ್ತೇದಾರ ಕಟ್ಟಿಸಂಗಾವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ
Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು