ಬಿಸಿಲ ತಾಪ ತಾಳದೆ ಕುಸಿದು ಬಿದ್ದ ವಿದ್ಯಾರ್ಥಿಗಳು: ಉತ್ತಮ ಶಿಕ್ಷಣ ಊಟಕ್ಕಾಗಿ ಮಕ್ಕಳ ಆಗ್ರಹ
Team Udayavani, Aug 17, 2022, 7:06 PM IST
ವಾಡಿ: ಕಳೆಪೆ ಊಟ ಹಾಗೂ ಕೊಳಕು ವಸತಿ ಕಟ್ಟಡದ ದುಸ್ಥಿತಿ ಖಂಡಿಸಿ ಸ್ಥಳೀಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಬುಧವಾರ ಬೀದಿಗಿಳಿದ ಮಕ್ಕಳು ಅಧಿಕಾರಿಗಳು ಸ್ಥಳಕ್ಕಾಗಮಿಸುವಲ್ಲಿ ತೋರಿದ ವಿಳಂಬ ನೀತಿಗೆ ಆಕ್ರೋಶಗೊಂಡು ದಿಢೀರ್ ರಸ್ತೆ ತಡೆಗೆ ಮುಂದಾದ ಪ್ರಸಂಗ ನಡೆಯಿತು. ಸತತ ಎರಡು ತಾಸು ಬಿಸಿಲಿನಲ್ಲಿ ಕುಳಿತು ಘೋಷಣೆ ಕೂಗುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಸಿಟ್ಟಿ ಪ್ರದರ್ಶಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗಾ, ವಾಡಿ ನಗರದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆ ಕರದಾಳ ಗ್ರಾಮಕ್ಕೆ ಸೇರಿದ್ದಾಗಿದೆ. ಕರದಾಳದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿದ್ದರೂ ಕೂಡ ಮಕ್ಕಳನ್ನು ಅಲ್ಲಿಗೆ ಸ್ಥಳಾಂತರಿಸದೆ ಕಳೆದ ನಾಲ್ಕು ವರ್ಷಗಳಿಂದ ನರಕದ ಕಟ್ಟಡದಲ್ಲಿ ಕುರಿಗಳಂತೆ ಕೂಡಿಡಲಾಗಿದೆ. ಕಟ್ಟಡ ಸೋರುತ್ತಿದೆ. ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ. ಹಲವು ಕೋಣೆಗಳಿಗೆ ಫ್ಯಾನ್ ಅಳವಡಿಸಲಾಗಿಲ್ಲ. ಮಲಗುವ ಪಡಸಾಲೆ ಉಸುಕು ಧೂಳಿನಂದ ಕೂಡಿದೆ. ಬಾಲಕಿಯರ ವಸತಿ ಕೋಣೆಗಳಿಗೆ ಬಾಗಿಲು ಮುರಿದು ವರ್ಷ ಕಳೆದರೂ ದುರಸ್ಥಿ ಮಾಡಿಸಲಾಗಿಲ್ಲ. ಶೌಚಾಲಯಗಳ ದುಸ್ಥಿತಿ ಕೇಳುವಂತಿಲ್ಲ. ಸೊಳ್ಳೆಕಾಟ ತಾಳದೆ ಅಭ್ಯಾಸಕ್ಕೆ ಹೊಡೆತ ಬಿದ್ದಿದೆ. ಊಟದ ವ್ಯವಸ್ಥೆಯೂ ಸರಿಯಾಗಿಲ್ಲ. ಅಡುಗೆಗೆ ಮಕ್ಕಳ ಸಹಾಯ ಪಡೆಯಲಾಗುತ್ತಿದೆ. ಹುಳು ಮತ್ತು ಹರಳು ತುಂಬಿದ ಅಕ್ಕಿಗಳನ್ನೇ ಅನ್ನ ಮಾಡಲಾಗುತ್ತಿದೆ. ಶಿಕ್ಷಣ ಪಡೆಯಲು ತರಗತಿ ಕೋಣೆಗಳು ಉತ್ತಮ ಸ್ಥಿತಿಯಲ್ಲಿಲ್ಲ. ಶಿಕ್ಷಕರ ಕೊರತೆಯಿದೆ. ನೂರಾರು ಸಮಸ್ಯೆಗಳ ಮಧ್ಯೆ ಶಿಕ್ಷಣಕ್ಕಾಗಿ ಬಂದಿರುವ ಬಡ ಮಕ್ಕಳ ಗೋಳಾಟ ಯಾರೂ ಕೇಳುತ್ತಿಲ್ಲ ಎಂದು ಆರೋಪಿಸಿದರು. ಕೂಡಲೇ ಎಲ್ಲಾ ವಿದ್ಯಾರ್ಥಿಗಳನ್ನು ಕರದಾಳ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕಳಪೆ ಊಟ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಶಿಕ್ಷಕರ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸವಾಲ್: ಕತ್ತಲು ಕೋಣೆಗಳಲ್ಲಿ ನಾವು ಹೇಗೆ ಮಲಗಬೇಕು ಮತ್ತು ಅಭ್ಯಾಸ ಮಾಡಬೇಕು?. ಊಟದಲ್ಲಿ ಹರಳು ಹುಳುಗಳು ಕಂಡರೆ ಅದನ್ನು ಹೇಗೆ ತಿನ್ನಬೇಕು?. ದುರ್ವಾಸನೆ ಹರಡುವ ಶೌಚಾಲಯದ ನೀರು ತರಗತಿ ಕೋಣೆಗೆ ಮತ್ತು ವಸತಿ ಕೋಣೆಗೆ ಹರಿದು ಬರುತ್ತವೆ ಏನು ಮಾಡಬೇಕು?. ಸಮರ್ಪಕವಾಗಿ ಪಠಗಳೇ ನಡೆಯುತ್ತಿಲ್ಲ. ಹತ್ತನೇ ತರಗತಿಯ ಪರೀಕ್ಷೆ ಹೇಗೆ ಬರೆಯಬೇಕು?. ನಾವೂ ನಿಮ್ಮ ಮಕ್ಕಳಂತೆ ಅಲ್ವಾ ಸರ್? ಬಡವರ ಮಕ್ಕಳ ಶಿಕ್ಷಣ ಇಷ್ಟೊಂದು ಕಳೆಪೆ ಏಕೆ? ನಾವು ಚೆನ್ನಾಗಿ ಓದುತ್ತಿದ್ದೇವೆ ಎಂದು ನಮ್ಮ ಹೆತ್ತವರು ಅಂದುಕೊಳ್ಳುತ್ತಿದ್ದಾರೆ. ನಮ್ಮ ಕಷ್ಟ ಕೇಳಿದರೆ ನೊಂದುಕೊಳ್ಳುತ್ತಾರೆ. ನಾವೇನು ಪಾಪ ಮಾಡಿದ್ದೇವೆ ಸರ್? ನಮ್ಮನ್ನೇಕೆ ಈ ನರಕದಲ್ಲಿ ಕೂಡಿಟ್ಟಿದ್ದೀರಿ? ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಸುವ ಮೂಲಕ ಸ್ಥಳಕ್ಕಾಗಮಿಸಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ಶಿವರಾಮ ಚವ್ಹಾಣ ಅವರಿಗೆ ಸವಾಲು ಹಾಕಿದರು. ಇದಕ್ಕೆ ತಾಳ್ಮೆಯಿಂದ ಉತ್ತರಿಸಿದ ಅಧಿಕಾರಿ ಶಿವರಾಮ, ನಿಮ್ಮ ಕಷ್ಟ ನನಗೆ ಅರ್ಥವಾಗಿದೆ. ನಾನು ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ. ಶಾಸಕ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ ನಾಲ್ಕು ದಿನದಲ್ಲಿ ಶಾಲೆಯನ್ನು ಕರದಾಳ ಗ್ರಾಮದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತೇನೆ. ಊಟದ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಇಂದಿನಿಂದಲೇ ಹೊಸ ವಾರ್ಡ್ ನ ನೇಮಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಪ್ರತಿಭಟನಾ ನಿರತ ನೂರಾರು ಮಕ್ಕಳಲ್ಲಿ ಮೂವರು ವಿದ್ಯಾರ್ಥಿಗಳು ಬಿಸಿಲ ತಾಪಕ್ಕೆ ಕುಸಿದು ಬಿದ್ದ ಘಟನೆ ನಡೆಯಿತು. ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಎಐಡಿಎಸ್‌ಒ ಮುಖಂಡರಾದ ಸಿದ್ಧಾರ್ಥ ಪರತೂರಕರ, ಸಿದ್ದರಾಜ ಮದ್ರಿಕಿ, ಶಿವುಕುಮಾರ ಆಂದೋಲಾ, ವಿಠ್ಠಲ್ ರಾಠೋಡ, ಈರಣ್ಣ ಇಸಬಾ, ಶರಣು ಹೇರೂರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ರಸ್ತೆ ತಡೆ ಚಳುವಳಿಯಿಂದಾಗಿ ಎರಡು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.