ಡಿಎನ್‌ಎ ಟೆಸ್ಟ್‌ ಬಳಿಕ ತಾಯಿ ಮಡಿಲು ಸೇರಿದ ಶಿಶುಗಳು!


Team Udayavani, Jan 8, 2018, 11:19 AM IST

mother-holding-babies-hand-black-and-white-photography.jpg

ಕಲಬುರಗಿ: ಕಳೆದ ಡಿ.14ರಂದು ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳು ಅದಲು ಬದಲು ಆಗಿರುವ ಪ್ರಕರಣಕ್ಕೆ ತೆರೆ ಬಿದ್ದಿದ್ದು, ಡಿಎನ್‌ಎ ಪರೀಕ್ಷೆ ನಂತರ ಶಿಶುಗಳು ತಾಯಿಯಂದಿರ ಮಡಿಲು ಸೇರಿವೆ. ಆದರೆ ಮೂರು ವಾರಗಳ ಕಾಲ ತಾಯಂದಿಯರು ಆಸ್ಪತ್ರೆಯಲ್ಲಿದ್ದರೂ ತಮ್ಮ ಮಗುವಿಗೆ ಪ್ರೀತಿ ತೋರದ, ಮುದ್ದಾಡಿಸದ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿತ್ತು.

ಕಳೆದ 2017ರ ಡಿಸೆಂಬರ್‌ 14ರಂದು ಜಿಲ್ಲಾಸ್ಪತ್ರೆಯಲ್ಲಿ ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ನಂದಮ್ಮ ಸಿದ್ದಪ್ಪಗೆ ಮಗುವೊಂದು ಜನಿಸಿತ್ತು. ಅದೇ ದಿನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಾಡಮಗೇರಾದ ಗ್ರಾಮದ ನಜ್ಮಾ ಬೇಗಂ ಲಾಲ ಮೊಹ್ಮದ ಎನ್ನುವರಿಗೂ ಮಗು ಜನಿಸಿತ್ತು. ಆಸ್ಪತ್ರೆಯ ಆಯಾಗಳು ನಂದಮ್ಮ ಹಾಗೂ ಅವರ ಪತಿ ಮತ್ತು ಕುಟುಂಬ ವರ್ಗದವರಿಗೆ ಗಂಡು ಮಗು ಜನಿಸಿದೆ ಎಂದು ಹೇಳಿ ಗಂಡು ಮಗು ಕೊಟ್ಟಿದ್ದರು.

ಪ್ರಥಮ ಮಗು ಗಂಡು ಜನಿಸಿತು ಎಂದು ಹರ್ಷಗೊಂಡು ಬಂಧುಗಳಿಗೆ ಸುದ್ದಿ ಮುಟ್ಟಿಸಿದ್ದರು. ಆದರೆ ಈ ಖುಷಿ ಬಹಳ ಹೊತ್ತು ಉಳಿಯಲಿಲ್ಲ. ತದನಂತರ ಆಸ್ಪತ್ರೆಯ ಇನ್ನೊಬ್ಬ ಆಯಾ ಬಂದು ತಪ್ಪಿನಿಂದ ನಿಮಗೆ ಗಂಡು ಮಗು ಹುಟ್ಟಿದೆ ಎಂದು ಹೇಳಿದ್ದೆವು. ಆದರೆ ನಿಮಗೆ ಜನಿಸಿದ್ದು ಹೆಣ್ಣು ಎಂದು ಹೇಳಿ ಹೆಣ್ಣು ಮಗು ಒಪ್ಪಿಸಿದರು. ನಿಮಗೆ ಕೊಟ್ಟಿದ್ದ ಗಂಡು ನಜ್ಮಾ ಬೇಗಂಳದ್ದು ಎಂದು ಹೇಳಿ ಗಂಡು ಮಗು ತೆಗೆದುಕೊಂಡರು. ಇದನ್ನು ಒಪ್ಪದ ನಂದಮ್ಮ ಕುಟುಂಬ ವರ್ಗದವರು ಆಸ್ಪತ್ರೆಯ ಆಡಳಿತದವರ ವಿರುದ್ಧ ಪ್ರತಿಭಟನೆಗಿಳಿದರು. ತಮ್ಮೊಂದಿಗೆ ಆಸ್ಪತ್ರೆಯ ಸಿಬ್ಬಂದಿ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಜ್ಮಾ ಬೇಗಂಳ ಕುಟುಂಬದದವರು ಸಹ ಹೆಣ್ಣು ಮಗು ಸ್ವೀಕರಿಸಲು ಒಪ್ಪಲಿಲ್ಲ. ಆಗ ಆಸ್ಪತ್ರೆಯ ಸರ್ಜನ್‌ ಡಾ.ಬಿ.ಎನ್‌. ಜೋಶಿ ಹಾಗೂ ಇತರರು ಎರಡು ಕುಟುಂಬ ವರ್ಗದವರ ಮನವೊಲಿಸಲು ಯತ್ನಿಸಿದರು ಹಾಗೂ ರಕ್ತ ಪರೀಕ್ಷೆ ನಡೆಸಿದರು. ರಕ್ತ ಪರೀಕ್ಷೆ ವರದಿಯಂತೆ ನಜ್ಮಾ ಬೇಗಂ ಲಾಲ ಮೊಹ್ಮದ ಹಾಗೂ ಗಂಡು ಮಗುವಿನ ರಕ್ತದ ಗುಂಪು ಬಿ ಪಾಸಿಟಿವ್‌ ಆಗಿತ್ತು. ಹೆಣ್ಣು ಮಗುವಿನ ರಕ್ತದ ಗುಂಪು ನಂದಮ್ಮ ಮತ್ತು ಸಿದ್ದಪ್ಪ ರಕ್ತದ ಗುಂಪು ಎ ನೆಗೆಟಿವ್‌ ಆಗಿತ್ತು. ಆದರೂ ಮಕ್ಕಳನ್ನು ಇಬ್ಬರು ತಾಯಿಯಂದಿರು
ಒಪ್ಪಿಕೊಳ್ಳದ ಕಾರಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಹಾಗೂ ಇತರ ಅಧಿಕಾರಿಗಳನ್ನು ಕರೆಯಿಸಿ ಮನವೊಲಿಸಿ ಪ್ರಯತ್ನಿಸಲಾಗಿತ್ತು. ಆದರೂ ಶಿಶುಗಳನ್ನು ಒಪ್ಪಿಕೊಳ್ಳದ ಜತೆಗೆ ಹಾಲು ಕುಡಿಸಲು ಇಬ್ಬರೂ ತಾಯಿಂದಿರು ನಿರಾಕರಿಸಿದ್ದರು.

ಆಗ ಆಸ್ಪತ್ರೆ ಹಾಗೂ ಪೊಲೀಸ್‌ ಇಲಾಖೆಯವರು ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿ ಡಿಎನ್‌ಎ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ತಾಯಂದಿಯರಿಂದ ತಿರಸ್ಕಲ್ಪಟ್ಟ ಎರಡು ಶಿಶುಗಳು ಆಸ್ಪತ್ರೆಯಲ್ಲಿಯೇ ಇದ್ದವು. ಡಿಎನ್‌ಎ ಪರೀಕ್ಷಾ ವರದಿ ಬರುವವರೆಗೂ ಆಸ್ಪತ್ರೆಯಲ್ಲಿರಲು ಅವಕಾಶ ಕಲ್ಪಿಸಲಾಗಿತ್ತು. ಜ.5ರಂದು ವರದಿ ಬಂದ ನಂತರ ಗಂಡು ಮಗುವನ್ನು ನಜ್ಮಾ ಬೇಗಂಗೆ ಹಾಗೂ ಹೆಣ್ಣು ಮಗುವನ್ನು ನಂದಮ್ಮಳಿಗೆ ನೀಡಲಾಯಿತು.

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.