ಉದ್ದು-ಹೆಸರು ಬೆಳೆಗೆ ಕೀಟಗಳಕಾಟ: ಆನ್ನದಾತರಲ್ಲಿ ಆತಂಕ
Team Udayavani, Aug 14, 2020, 1:45 PM IST
ಚಿಂಚೋಳಿ: ತಾಲೂಕಿನಲ್ಲಿ ಮುಂಗಾರು ಉದ್ದು, ಹೆಸರು ಬೆಳೆಗಳಲ್ಲಿ ಹೇನು ಮತ್ತು ಕೀಟಗಳು ಕಾಣಿಸಿಕೊಂಡಿರುವುದರಿಂದ ರೈತರನ್ನು ಆತಂಕವನ್ನುಂಟು ಮಾಡಿದೆ.
ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಹೆಸರು, ಉದ್ದು, ಸೋಯಾಬಿನ್ ಬೆಳೆಗಳು ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜೂನ್, ಜುಲೈ ತಿಂಗಳಲ್ಲಿ ಬಿರುಸಿನ ಮಳೆ ಆಗಿರುವುದರಿಂದ ಎಲ್ಲ ಗ್ರಾಮಗಳಲ್ಲಿ ಬೆಳೆಗಳು ನಳ ನಳಿಸುತ್ತಿವೆ. ಹೆಸರು, ಹೂವು, ಚೆಳ್ಳಿ, ಕಾಯಿ ಕಟ್ಟುವ ಹಂತದಲ್ಲಿದ್ದು ಬೆಳೆಗಳಲ್ಲಿ ಹೇನಿನ ಭಾದೆ ಕಂಡು ಬರುತ್ತಿದೆ.
ಜೊತೆಗೆ ಉದ್ದಿನ ಬೆಳೆಗಳಲ್ಲಿ ಕೀಟಗಳ ಹಾವಳಿ ಕಂಡು ಬಂದಿರುವುದರಿಂದ ರೈತರು ಹುಳಗಳ ನಿಯಂತ್ರಣಕ್ಕಾಗಿ ಕೀಟನಾಶಕ ಸಿಂಪರಣೆಯಲ್ಲಿ ತೊಡಗಿದ್ದಾರೆ.ಸುಲೇಪೇಟ, ಕೋಡ್ಲಿ, ಚಂದನಕೇರಾ, ಐನಾಪುರ, ಚಿಂಚೋಳಿ, ಚಿಮ್ಮನಚೋಡ, ರಟಕಲ್, ಮೋಘಾ, ನಿಡಗುಂದಾ, ಸಾಲೇಬೀರನಳ್ಳಿ, ದೇಗಲಮಡಿ, ಕುಂಚಾವರಂ ಸುತ್ತಲಿನ ಗ್ರಾಮಗಳಲ್ಲಿ ಹೆಸರು, ಉದ್ದು ಬೆಳೆಗಳಿಗೆ ಕೀಟಗಳ ಹಾವಳಿ ಹೆಚ್ಚಾಗುತ್ತಿದೆ. ಅಲ್ಲದೇ ಕೆಲವು ಕಡೆ ಬೆಳೆಗಳಲ್ಲಿ ಮಚ್ಚೆರೋಗ ಕಾಣಿಸಿಕೊಂಡಿದೆ. ಉತ್ತಮ ಬೆಳೆಗಳಿಗೆ ಹೇನು ಮತ್ತು ಕೀಟಗಳ ಹಾವಳಿಯಿಂದಾಗಿ ರೈತರಲ್ಲಿ ನಿರಾಶೆ ಮೂಡಿಸಿದೆ.
ತಾಲೂಕಿನಲ್ಲಿ ಕೆಲ ಗ್ರಾಮಗಳಲ್ಲಿ ಹೆಸರು, ಉದ್ದು, ಸೋಯಾ ಬೆಳೆಗಳಲ್ಲಿ ಹೇನು ಮತ್ತು ಕೀಟಗಳ ಭಾದೆ ಕಂಡು ಬಂದಿದೆ. ರೈತರು ಒಂದು ಲೀಟರ್ ನೀರಿಗೆ 1.5 ಲೀಟರ್ ಟ್ರೈ ಜೋಫಾಸ್ ಸಿಂಪರಣೆ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ರೈತರಿಗೆ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.