ಬಸವನಹುಳು ಹಾನಿಗೆ ಪರಿಹಾರಕ್ಕೆ ಒತ್ತಾಯ
Team Udayavani, Jul 25, 2022, 3:16 PM IST
ಕಲಬುರಗಿ: ಬಸವನಹುಳು ಹಾವಳಿಗೆ ಜಿಲ್ಲೆಯ ಆಳಂದ, ಅಫಜಲಪುರ, ಚಿಂಚೋಳಿ ಸೇರಿದಂತೆ ಹಲವು ತಾಲೂಕುಗಳ ರೈತರು ನಲುಗಿದ್ದು, ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿದ್ದರಿಂದ ಎಕರೆಗೆ 15ಸಾವಿರ ರೂ. ಸೂಕ್ತ ಪರಿಹಾರ ನೀಡುವಂತೆ ಪ್ರಗತಿ ಪರ ರೈತ, ಕಾಂಗ್ರೆಸ್ ಮುಖಂಡ ಹಣಮಂತರಾವ ಭೂಸನೂರ ಆಗ್ರಹಿಸಿದ್ದಾರೆ.
ಆಳಂದ ತಾಲೂಕಿನ ಧುತ್ತರಗಾಂವ್, ಕಡಗಂಚಿ, ಕಿಣ್ಣಿ ಸುಲ್ತಾನ್, ಕೊಡಲ ಹಂಗರಗಾ ಸೇರಿದಂತೆ ಬಸವನಹುಳು ಬಾಧೆಯಿಂದ ಪೀಡಿತವಾಗಿರುವ ಗ್ರಾಮಗಳ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ, ಸೋಯಾಬೀನ್ ಸೇರಿದಂತೆ ಉದ್ದು, ಹೆಸರು ಪ್ರತಿ ಎಕರೆಗೆ ರೈತ ಕನಿಷ್ಟ 10 ರಿಂದ 12 ಸಾವಿರ ರೂ. ವೆಚ್ಚ ಮಾಡಿದ್ದಾನೆ. ಬಿತ್ತಿದ ಫಸಲು ಹೀಗೆ ಹಾಳಾದರೆ ರೈತರು ಸಾಲಸೋಲ ಮಾಡಿಕೊಂಡು ತೊಂದರೆಗೆ ಒಳಗಾಗೋದು ನಿಶ್ಚಿತ. ಹೀಗಾಗಿ ಈ ಹಂತದಲ್ಲಿ ಸರ್ಕಾರ ತಕ್ಷಣ ರೈತರಿಗೆ ನೆರವಿಗೆ ಬರಲಿ ಎಂದು ಒತ್ತಾಯಿಸಿದ್ದಾರೆ.
ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತಕ್ಷಣ ಕೃಷಿ ಸಚಿವರು ಬಿ.ಸಿ. ಪಾಟೀಲ, ಜಿಲ್ಲಾ ಸಚಿವ ಮುರುಗೇಶ ನಿರಾಣಿ ಹುಳು ಪೀಡಿತ ಹೊಲಗಳಿಗೆ ಭೇಟಿ ನೀಡಲಿ. ಜಿಲ್ಲಾಡಳಿತ, ಕೃಷಿ ಇಲಾಖೆಯೂ ಭೇಟಿ ನೀಡಿ ಸಮೀಕ್ಷೆ ಮಾಡಲಿ. ಒಟ್ಟಾರೆ ರೈತರಿಗೆ ಹಾನಿಯಾದ ಫಸಲಿಗೆ ಪರಿಹಾರ ದೊರಕಬೇಕೆಂದರು. ಪರಿಸ್ಥಿತಿ ಗಂಭೀರವಾಗಿದ್ದು ಯಾರೊಬ್ಬರೂ ರೈತರ ನೋವಿಗೆ ಸ್ಪಂದಿಸುತ್ತಿಲ್ಲವೆಂದು ಭೂಸನೂರ್ ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.