ನೀರಿನ ಸಮಸ್ಯೆ ನಿವಾರಣೆಗೆ ಒತ್ತಾಯ
Team Udayavani, Mar 3, 2019, 6:34 AM IST
ಆಳಂದ: ಬೇಸಿಗೆಯಲ್ಲಿ ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸತೊಡಗಿದ್ದು, ಸಂಬಂಧಿಸಿದ ಅಧಿಕಾರಿಗಳು ತ್ವರಿಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಪಕ್ಷಭೇದ ಮರೆತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಸಾಬೂಬು ಹೇಳದೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಸಂಗಮೇಶ ಬಿರಾದಾರ ಅವರು, ನೀರಿನ ಸಮಸ್ಯೆ ನಿವಾರಣೆ ಪ್ರಗತಿ ಕಾರ್ಯದ ಮಾಹಿತಿ ನೀಡುವಾಗ ಆಕ್ಷೇಪಿಸಿದ ನಿಂಬಾಳ ತಾಪಂ ಸದಸ್ಯ ಬಸವರಾಜ ಸಾಣಕ, ಶಿವಪ್ಪ ವಾರಿಕ, ಸಂಗೀತಾ ರಾಠೊಡ, ಸುಜಾತಾ
ಖೋಬ್ರೆ, ದತ್ತಾತ್ತೇಯ ದುರ್ಗದ, ದೀಪಕ ಖೇಡ್ಲ್ ಅವರು, ಕಾಗದ ಮಾಹಿತಿ ನಮಗೆ ಬೇಡ ಸಮಸ್ಯೆ ಉದ್ಭವಿಸಿದ ಹಳ್ಳಿಗೆ ನೀರು ಕೊಡಿ ಎಂದು ಒತ್ತಾಯಿಸಿದರು. ತಾಪಂ ಇಒ ಅನಿತಾ ಕೋಂಡಾಪುರ ಮಧ್ಯೆ ಪ್ರವೇಶಿಸಿ, ಶಾಸಕರ ಅಧ್ಯಕ್ಷತೆಯಲ್ಲಿ ನೀರಿನ ಬೇಡಿಕೆ ಕುರಿತು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಜಂಟಿ ಸಮೀಕ್ಷೆ ನಡೆಸಿ ಸರಬರಾಜು ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಕೊಳವೆ ಬಾವಿ ತೋಡಿಸಲಾಗಿದೆ. ಇನ್ನೂ ತೋಡುವ ಹಂತದಲ್ಲಿದೆ. ಸದಸ್ಯರು ತಮ್ಮ ಕ್ಷೇತ್ರದ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇದ್ದರೆ ಲಿಖೀತವಾಗಿ ಅರ್ಜಿ ಕೊಟ್ಟರೆ ಸರಿಪಡಿಸಲಾಗುವುದು ಎಂದು ಹೇಳಿದರು. ಕೊಳವೆಬಾವಿ ತೆರೆದ ಬಾವಿಗೆ ನೀರು ಸಿಗದೆ ಇದ್ದಾಗ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅಕ್ಷರ ದಾಸೋಹ, ವಸತಿ ನಿಲಯಗಳು, ಕೃಷಿ ರಿಯಾಯಿತಿ ಸಾಮಗ್ರಿಗಳು ಅರ್ಹರಿಗೆ ದೊರೆಯುತ್ತಿಲ್ಲ ಎಂದು ಸದಸ್ಯರು ಸಭೆಯಲ್ಲಿ ದೂರಿದಾಗ ಸರಿಪಡಿಸಿಕೊಳ್ಳಿ ಎಂದು ಸಂಬಂಧಿಸಿದ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಇಒ ಸೂಚಿಸಿದರು.
ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಸಾರಿಗೆ ಬಸ್ ಘಟಕದ ಭದ್ರಪ್ಪ ಹುಡಗಿ, ಜಾಫರ್ ಅನ್ಸಾರಿ, ಜಿಪಂ ಎಇಇ ಮಲ್ಲಿನಾಥ ಕಾರಬಾರಿ, ಬಿಸಿಎಂ ಸಿಬ್ಬಂದಿ, ಮತ್ತಿತರ ಇಲಾಖೆ ಅಧಿಕಾರಿಗಳ ವರದಿ ಮಂಡಿಸಿದರು. ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ, ಉಪಾಧ್ಯಕ್ಷ ಗುರುನಾಥ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ, ಸದಸ್ಯೆ ಕಮಲಾಬಾಯಿ ನ್ಯಾಮನ, ಮಹಾದೇವಿ ಘಂಟೆ, ಪಾವರ್ತಿ ಮಹಾಗಾಂವಕರ್, ಬಾಬುರಾವ್ ಅಲ್ದಿ, ಚಾಂದಸಾಬ್ ಮುಲ್ಲಾ, ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.