ಸ್ಥಗಿತವಾದ ಆಹಾರ ತಯಾರಿಕಾ ಘಟಕ ಪರಿಶೀಲನೆ
Team Udayavani, Jul 20, 2022, 11:33 AM IST
ಚಿಂಚೋಳಿ: ಪಟ್ಟಣದ ವಿಶ್ವಬ್ಯಾಂಕ್ ಹಾಗೂ ಇಂಟರ್ ನ್ಯಾಶನಲ್ ಗ್ಲೋಬಲ್ ಅಲೈನ್ಸ್ ಇಂಪ್ರೂವ್ ನ್ಯೂಟ್ರಿಸಿಯನ್ ನೆರವಿನ ಸ್ಥಗಿತವಾಗಿರುವ ಕರ್ನಾಟಕ ಮಲ್ಟಿ ಸೆಕ್ಟೋರಲ್ ನ್ಯೂಟ್ರಿಷನ್ ಪೈಲಟ್ ಪ್ರಾಜೆಕ್ಟ್ ಶಕ್ತಿವೀಟಾ ಸಾರಯುಕ್ತ ಪೌಷ್ಟಿಕ ಆಹಾರ ತಯಾರಿಕಾ ಘಟಕಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಗಿರೀಶ ಬಡೊಲೆ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಕೆಎಚ್‌ಪಿಟಿ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನವು ಮಾತೃಶಕ್ತಿ ಮಹಿಳಾ ಸ್ವ-ಸಹಾಯ ಸಂಘ ನಡೆಸುತ್ತಿರುವ ಪೌಷ್ಟಿಕ ಆಹಾರ ಘಟಕ 2018ರಲ್ಲೇ ಸ್ಥಗಿತವಾಗಿದೆ. ಈ ಘಟಕ 2015ರಲ್ಲಿ ಪ್ರಾರಂಭವಾಗಿದ್ದು 17ಸಾವಿರ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಪೂರೈಸಿದೆ. ಆದರೆ ಇದೀಗ ಸರ್ಕಾರದ ನೆರವು ಇಲ್ಲದ ಕಾರಣ ಸ್ಥಗಿತವಾಗಿದೆ. ಈ ಘಟಕಕಕಎ ಜುಲೈ 21ರಂದು ಜಪಾನ್ ಸೋಷಿಯಲ್ ಡೆವಲಪ್‌ಮೆಂಟ್ ಫಂಡ್ ನಿಯೋಗ ಭೇಟಿ ನೀಡಿ ಪರಿಶೀಲಿಸಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ ಗಫಾರ ಅಹೆಮದ್ ಮಾತನಾಡಿ, ತಾಲೂಕಿನಲ್ಲಿ 150 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಇದರಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳಿದ್ದಾರೆ, ಗರ್ಭಿಣಿಯರಲ್ಲಿ ರಕ್ತ ಹೀನತೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಇದೆ ಎಂದು ವಿವರಿಸಿದರು.
ತಾಲೂಕು ನೋಡಲ್ ಅಧಿಕಾರಿ ಡಾ| ರಾಜಕುಮಾರ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಜೇವರ್ಗಿ ಮತ್ತು ಅಫಜಲಪುರ ತಾಲೂಕಿನಲ್ಲಿ ಅಪೌಷ್ಟಿಕತೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ವೈ.ಎಲ್.ಹಂಪಣ್ಣ, ಸಿಡಿಪಿಒ ಶರಣಬಸಪ್ಪ, ಡಾ| ಮಹಮ್ಮದ ಗಫಾರ, ಡಾ| ರಾಜಕುಮಾರ ಕುಲಕರ್ಣಿ, ಜಗದೇವ ಬೈಗೊಂಡ, ಉದ್ಯೋಗ ಖಾತ್ರಿ ಅಧಿಕಾರಿ ನಾಗೇಂದ್ರಪ್ಪ ಬೆಡಕಪಳ್ಳಿ, ಶಿವಯೋಗಿ ಮಠಪತಿ ಈ ಸಂದರ್ಭದಲ್ಲಿದ್ದರು. ಆನಂತರ ಸಿಇಒ ಕುಂಚಾವರಂ, ಜಿಲವರ್ಷ, ಚಂದ್ರಂಪಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.