ಶೋಷಿತರು ಹಕ್ಕು ಕೇಳುವುದು ತಪ್ಪಲ್ಲ
Team Udayavani, May 12, 2017, 4:23 PM IST
ಕಲಬುರಗಿ: ಒಂದು ಸೌಲಭ್ಯ ಪಡೆದ ಬಳಿಕ ಇನ್ನೊಂದು ಸೌಲಭ್ಯಕ್ಕಾಗಿ ಶೋಷಿತರು, ಕೆಳವರ್ಗದವರು ಹಾಗೂ ಬಡವರು ಕೇಳುವುದನ್ನು ಕಲಿಯಬೇಕು. ಅದು ತಪ್ಪಲ್ಲ. ಆಗಲೇ ನೀವಂದುಕೊಂಡ ಸೌಕರ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗುರುವಾರ ಕೆಸರಗಟಿ ಗ್ರಾಮದ ಬಳಿ ನಿರ್ಮಿಸಿರುವ ವಾಜಪೇಯಿ ವಸತಿ ಯೋಜನೆ, ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ 820 ಮನೆಗಳನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು. ಜಾತಿ ಧರ್ಮ ಅಂತ ಹೇಳಿ ಜೋತು ಬೀಳದೆ, ನೀವಿರುವ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಂಡು ಉತ್ತಮ ಪರಿಸರ ಕಾಪಾಡಿ.
ಖುಷಿಯಾಗಿ ಜೀವನ ನಡೆಸಿ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿಯವರೆಗೆ ಒಟ್ಟು 61 ಸಾವಿರ ಮನೆಗಳನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಒಟ್ಟು 1324 ಮನೆಗಳಲ್ಲಿ ಮೊದಲ ಹಂತದಲ್ಲಿ 568 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 594 ಮತ್ತು 2ನೇ ಹಂತದ 780 ಮನೆಗಳಲ್ಲಿ 235 ಮನೆಗಳು ಸೇರಿದಂತೆ ಒಟ್ಟು 829 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ಇನ್ನುಳಿದ 500ಕ್ಕೂ ಹೆಚ್ಚು ಮನೆಗಳಲ್ಲಿ ಒಂದೆರಡು ತಿಂಗಳಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು. ಯೋಜನೆಗೆ 2002ರಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. ಕಾಂಗ್ರೆಸ್ ಸರಕಾರ ಅಧಿಕಾರದಿಂದ ಕೆಳಗಿಳಿದ ಬಳಿಕ ಈ ಕೆಲಸ ನನೆಗುದಿಗೆ ಬಿದ್ದಿತ್ತು. ಅಲ್ಲದೆ, ಜನರ ಸಹಭಾಗಿತ್ವದಲ್ಲಿ ಈ ಮನೆಗಳನ್ನು ನಿರ್ಮಾಣ ಮಾಡಬೇಕಾದ್ದರಿಂದ ಮನೆ ಮಾಲೀಕನ ವಂತಿಗೆ ಕಟ್ಟಲು ಕೆಲವರು ಮುಂದೆ ಬರಲಿಲ್ಲ.
ಈ ವೇಳೆ ಶರಣಪ್ರಕಾಶ ಪಾಟೀಲ ಹಾಗೂ ಇತರರು ಬ್ಯಾಂಕುಗಳಿಗೆ ನಿರ್ದೇಶನ ನೀಡಿ ಒಟ್ಟು 235 ಜನ ಆಟೋ ಚಾಲಕರಿಗೆ ಸಾಲ ಸಿಗುವಂತೆ ಮಾಡಿ ಮನೆ ನಿರ್ಮಾಣ ಮಾಡಲಾಯಿತು ಎಂದರು. ಇಂತಹ ಎಲ್ಲ ಪರಿಸ್ಥಿತಿಗಳನ್ನು ದಾಟಿ ನೀವುಗಳು ಮನೆ ಹೊಂದಿದ ಮೇಲೆ ಇಲ್ಲಿಯೇ ಬಂದು ವಾಸ ಮಾಡಬೇಕು. ಇಲ್ಲಿ ಅಗತ್ಯ ಇರುವ ಎಲ್ಲ ವ್ಯವಸ್ಥೆ ಮತ್ತು ನೀರು, ಶೌಚಾಲಯ, ರಸ್ತೆ ಮಾಡಿಕೊಡಲಾಗಿದೆ.
ಶಾಲೆ ಮತ್ತು ಆಸ್ಪತ್ರೆಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಆದ್ದರಿಂದ ಜನರು ಇಲ್ಲಿ ವಾಸ ಮಾಡಿ ಸರಕಾರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಇದೊಂದು ತುಂಬಾ ದೊಡ್ಡ ಯೋಜನೆ. ಒಂದೇ ಹಾಸಿಗೆಯಲ್ಲಿ 1324 ಮನೆಗಳು ನಿರ್ಮಾಣವಾಗಿವೆ. ರಾಜ್ಯದಲ್ಲಿ ಇಷ್ಟು ಮನೆಗಳು ಒಂದೆ ಕಡೆಯಲ್ಲಿ ಇಲ್ಲ.
ಆದ್ದರಿಂದ ಜನರು ಅದರಲ್ಲೂ ಬಡವರು ಯೋಜನೆ ಪ್ರಯೋಜನ ಪಡೆಯಬೇಕು ಎಂದರು. ಇಲ್ಲಿ ಆಸ್ಪತ್ರೆ, ಶಾಲೆ ಹಾಗೂ ವ್ಯಾಪಾರಿ ಮಳಿಗೆ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು. ಅಂಗನವಾಡಿ ನಿರ್ಮಾಣ ಮಾಡುವುದಲ್ಲದೆ, ನೀವುಗಳು ಇಲ್ಲಿ ಬಂದು ನಾಳೆಯಿಂದ ನೆಲೆಸುವುದೇ ಆದಲ್ಲಿ, ಬಸ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ರಾಜೀವಗಾಂಧಿ ಆವಾಸ್ ಯೋಜನೆ ಅಡಿ 1000 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಖಮರುಲ್ ಇಸ್ಲಾಂ ಮಾತನಾಡಿ, ಇವತ್ತು ಮನೆಗಳನ್ನು ವಿತರಿಸಬೇಕಾದರೆ ಇದರ ಹಿಂದೆ ನನ್ನ ಹಾಗೂ ಸಚಿವ ಪಾಟೀಲರ, ಖರ್ಗೆ ಅವರ ಶ್ರಮವಿದೆ ಎಂದರು. ಮೇಯರ್ ಶರಣ ಕುಮಾರ ಮೋದಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರು, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಡಿಎ ಅಧ್ಯಕ್ಷ ಅಸಗರ್ ಚುಲ್‌ಬುಲ್, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ, ಪಾಲಿಕೆ ಮುಖ್ಯ ಇಂಜಿನಿಯರ್ ಆರ್.ಪಿ. ಜಾಧವ, ವಿಜಯಲಕ್ಷ್ಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.