ಬದ್ಧತೆಯಿಂದ ಕಾಯಕ ನಿಭಾಯಿಸಿದರೆ ಅದೇ ಸ್ವರ್ಗ
Team Udayavani, Feb 25, 2018, 10:38 AM IST
ಕಲಬುರಗಿ: ಕಾಯಕದ ಪರಿಕಲ್ಪನೆಯು ವಚನಕಾರರು ಜಗತ್ತಿಗೆ ಕೊಟ್ಟಿರುವ ಅತ್ಯಂತ ಅನ್ವಯಿಕ ಸಿದ್ಧಾಂತವಾಗಿದೆ. ಸ್ವಾವಲಂಬಿಯಾಗಿ ತಾನು ಮಾಡುವ ಕಾಯಕದಲ್ಲಿ ಸಂಪೂರ್ಣವಾಗಿ ತನು-ಮನ ಪ್ರಾಣವನ್ನು ತೊಡಗಿಸಿಕೊಂಡು ಬದ್ಧತೆಯಿಂದ ನಿಭಾಯಿಸಿದರೆ ಅದಕ್ಕಿಂತ ಬೇರೆಲ್ಲಿಯೂ ಸ್ವರ್ಗ-ಕೈಲಾಸವಾಗಲಿ ಇರುವುದಿಲ್ಲ ಎಂದು ಸಾಹಿತಿ ಕಲ್ಯಾಣರಾವ ಪಾಟೀಲ ಹೇಳಿದರು.
ನಗರದ ಅಪ್ಪನ ಕೆರೆಯ ಬಳಿ ಇರುವ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ನಡೆದ ಕಲಬುರಗಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಕಾಯಕಕ್ಕೆ ಹೆಸರುವಾಸಿಯಾಗಿದೆ. ಅಲ್ಲದೇ ಬಹುಧರ್ಮಧೇನು ನಿವಹಕ್ಕಾಡುಂಬೊಲಂ ಆಗಿದೆ ಎಂದ ಹೇಳಿದರು.
ನಮ್ಮ ಸಾಂಸ್ಕೃತಿಕ ಸಾಮರಸ್ಯ ಶಕ್ತಿ ಕೇಂದ್ರಗಳಲ್ಲಿನ ವಿವಿಧ ಆಯಾಮಗಳ ಕುರಿತು ಸಂಶೋಧನೆ ಮಾಡುವುದು ಅತ್ಯಂತ ಅಗತ್ಯವಿದೆ. ಮಹಾದಾಸೋಹಿ ಶರಣಬಸವೇಶ್ವರರು, ಮಹಾಸೂಫಿ ಸಂತ ಖಾಜಾ ಬಂದೇ ನವಾಜ್ ಗೇಸುದರಾಜ್ ಅವರು ಸಾಂಸ್ಕೃತಿಕ ಕಣ್ಣುಗಳು ಎಂದರೆ ತಪ್ಪಾಗದು. ವಿಶ್ವಕ್ಕೆ ಮಾದರಿಯಾಗಿರುವ ಬುದ್ಧ ವಿಹಾರ ಈ ನೆಲದ ಹೃದಯವಾಗಿದೆ. ಇಲ್ಲಿನ ಜೈನರ ಬಸದಿಗಳು, ಸಿಖರ್ ಗುರುದ್ವಾರ, ಕ್ರಿಸ್ತರ ಪ್ರಾರ್ಥನಾ ಮಂದಿರಗಳು ನಮ್ಮವರ ಬಾಳಿಗೆ ದಿಕ್ಸೂಚಿಯಾಗಿವೆ ಎಂದು ಅವರು ಬಣ್ಣಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ಬಿ. ನಾಯಕ ಸಮ್ಮೇಳನ ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ| ಎಂ.ಜಿ. ಬಿರಾದಾರ ಸ್ಮರಣ ಸಂಚಿಕೆ ಮತ್ತು ಕಾಯಕ ಮಾರ್ಗಕೃತಿಗಳನ್ನು, ಮಕ್ಕಳ ಕವಿ ಎ.ಕೆ. ರಾಮೇಶ್ವರ ಅವರು ಬಸವಣ್ಣನವರ ವಚನಗಳಿಗೆ ವ್ಯಾಖ್ಯಾನ, ರಾಜ್ಯ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ ಅವರು ಶರಣರ ಸ್ಮರಣೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಹೈದ್ರಾಬಾದ್ ಕರ್ನಾಟಕ ಹವ್ಯಾಸಿ ರಂಗ ಭೂಮಿ ನಾಟಕ, ಹಿರಿಯ ಸಾಹಿತಿ ಡಾ| ಸ್ವಾಮಿರಾವ ಕುಲಕರ್ಣಿ ಅವರು ಜ್ಞಾನ ಸಿಂಚನ ಕೃತಿ ಬಿಡುಗಡೆ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ಮೊದಲು ಭುವನೇಶ್ವರಿ ದೇವಿ ಪೂಜೆಯೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಶ್ರೀನಿವಾಸ ಸಿರನೂರಕರ್, ಪರಿಷತ್ ಪದಾ ಧಿಕಾರಿಗಳಾದ ಡಾ| ಎಸ್.ಎ. ವಡ್ಡನಕೇರಿ, ಡಾ| ಸಂಗಮೇಶ ಹಿರೇಮಠ, ವೆಂಕಟೇಸ ನೀರಡಗಿ, ಲಿಂಗರಾಜ ಸಿರಗಾಪುರ, ಡಾ| ಚಿ.ಸಿ. ನಿಂಗಣ್ಣ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.