ಗೂಳಿ ರೂಪದ ಜಾಕನಪಲ್ಲಿ ಶಿವಯೋಗೀಶ್ವರರು ಲಿಂಗೈಕ್ಯ
Team Udayavani, May 25, 2018, 11:55 AM IST
ಸೇಡಂ: ತಾಲೂಕಿನ ಜಾಕನಪಲ್ಲಿ ಶ್ರೀ ಗವಿಸಿದ್ಧಲಿಂಗೇಶ್ವರ ದೇವಾಲಯದ ನಾಲ್ಕನೇ ಪೀಠಾಧಿಧೀಶ್ವರ ಎಂದೇ
ಕರೆಯಿಸಿಕೊಳ್ಳುತ್ತಿದ್ದ ಗೂಳಿ ರೂಪದ ಶಿವಯೋಗೀಶ್ವರರು ಲಿಂಗೈಕ್ಯರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ
ಸಾವಿರಾರು ಭಕ್ತರ ಮಧ್ಯೆ ನಡೆಯಿತು.
ನೂರಾರು ಭಕ್ತರು ಬುಧವಾರ ರಾತ್ರಿ ಲಿಂಗೈಕ್ಯರಾದ ಶಿವಯೋಗೀಶ್ವರರ ಅಂತಿಮ ದರ್ಶನ ಪಡೆದರು. ಇಷ್ಟಾರ್ಥ
ಸಿದ್ಧಿಸುವ ತಮ್ಮ ನಿಜ ದೈವನ ನೆನೆದು ಕಣ್ಣೀರು ಹಾಕಿದರು. ಜಾಕಪನಲ್ಲಿಯಲ್ಲಿರುವ ಶ್ರೀ ಗವಿಸಿದ್ಧಲಿಂಗೇಶ್ವರ
ದೇವಾಲಯ ಇತಿಹಾಸ ಹೊಂದಿದೆ. ದೇವಾಲಯದ ಮೊದಲ ಶಿವಯೋಗೀಶ್ವರರು ಲಿಂಗೈಕ್ಯರಾದ ನಂತರ ಪ್ರತಿ ಬಾರಿ ಗೂಳಿರೂಪದಲ್ಲಿ ಜನಿಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದರು ಎಂಬುದು ಭಕ್ತರ ನಂಬಿಕೆ.
ಕಲಕಂಭ ಗ್ರಾಮದ ವಿಶ್ವನಾಥರೆಡ್ಡಿ ಎಂಬುವರು ಶಿವಯೋಗೀಶ್ವರರು ಚಿಕ್ಕ ಕರುವಿದ್ದಾಗ ದೇವಾಲಯಕ್ಕೆ ಬಿಟ್ಟಿದ್ದರು. ಆವಾಗಿನಿಂದಲೂ ದೇವಾಲಯದ ಹಿಂದಿನ ಶಿವಯೋಗೀಶ್ವರರು ಮಾಡುವ ಪೂಜೆ ಪುನಸ್ಕಾರಗಳಂತೆಯೇ ಈ ಗೂಳಿಯೂ ಮಾಡ ತೊಡಗಿತ್ತು. ಭಜನೆ ನಡೆಯುವಾಗ ಶ್ರೀಗಳು ಪಾಲಿಸುತ್ತಿದ್ದ ಪ್ರತಿಯೊಂದು ಕ್ರಿಯಾಚಾರವನ್ನು
ಗೂಳಿ ಪಾಲಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಭಜನೆ ಪೂರ್ಣಗೊಂಡು ಪೂಜೆ ನೆರವೇರುವವರೆಗೂ ಪಕ್ಕದಲ್ಲಿನ
ನೆಲ ಹಾಸು ಮೇಲೆ ನಿಂತು ನಂತರ ಭಕ್ತರಿಂದ ಪೂಜೆ ಸ್ವೀಕರಿಸಿ ನಿರ್ಗಮಿಸುತ್ತಿತ್ತು.
ಶ್ರಾವಣ ಮಾಸದಲ್ಲಿ ನಡೆಯುವ ಪರ್ವ ಎಂಬ ಧಾರ್ಮಿಕ ಕಾರ್ಯದ ಮರುದಿನ ಭಕ್ತರು ಮುಂದಿಟ್ಟ ಬೇಡಿಕೆಗಳು
ಈಡೇರುವುದಾದರೆ ಯಾರ ಸಹಾಯವೂ ಇಲ್ಲದೆ ಅವರ ಮನೆಗೆ ತೆರಳಿ ದೇವರ ಮನೆ ಎದುರು ನಿಲ್ಲುತ್ತಿದ್ದ ಬಸವಣ್ಣ
(ಗೂಳಿ) ಪೂಜೆ ಸ್ವೀಕರಿಸಿಯೇ ಹೊರ ಬರುತ್ತಿತ್ತು. ದುಷ್ಟ ಶಕ್ತಿಗಳಿಂದ ದೂರವಿರಲು ತಮ್ಮ ಮಕ್ಕಳನ್ನು ರಸ್ತೆ ಮೇಲೆ
ಮಲಗಿಸಿದಾಗ ಯಾರನ್ನೂ ತುಳಿಯದೇ ಹೆಜ್ಜೆ ಇಡುವ ಬಸವಣ್ಣ ಭಕ್ತರು ಕಷ್ಟ ದೂರ ಮಾಡುವ ನಿಜ ದೈವವಾಗಿದ್ದರು
ಎಂಬ ನಂಬಿಕೆ ಜನರಲ್ಲಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.