ಜೆಡಿಎಸ್ ಅಧಿಕಾರದಿಂದ ಆಳಂದಕ್ಕೆ ಮಂತ್ರಿ ಸ್ಥಾನ
Team Udayavani, Dec 2, 2017, 9:47 AM IST
ಆಳಂದ: ಆಳಂದ ವಿಧಾನಸಭೆ ಕ್ಷೇತ್ರದಲ್ಲಿ ಹಿಂದಿನ ಇತಿಹಾಸ ನೋಡಿದರೆ ಪ್ರಾದೇಶಿಕ ಪಕ್ಷದಿಂದಲೇ ಅಧಿಕಾರಕ್ಕೆ
ಬಂದ ಶಾಸಕ ಬಿ.ಆರ್. ಪಾಟೀಲ ಮತ್ತು ಮಾಜಿ ಶಾಸಕ ಸುಭಾಷ ಗುತ್ತೇದಾರ ಭವಿಷ್ಯಕ್ಕೆ ಮಾರಕವಾಗಿರುವ ರಾಷ್ಟ್ರೀಯ ಪಕ್ಷಗಳಿಗೆ ಜೋತುಬಿದ್ದಿದ್ದು, ಬರುವ ಚುನಾವಣೆಯಲ್ಲಿ ಅವರ ಸೋಲು ಖಚಿತವಾಗಿದೆ ಎಂದು ಮಾಜಿ ಕೃಷಿ ಸಚಿವ ಬಂಡೆಪ್ಪ ಕಾಶೆಂಪುರ ಭವಿಷ್ಯ ನುಡಿದರು.
ತಾಲೂಕಿನ ಕಾಂಗ್ರೆಸ್ ಸಮಿತಿ ಬ್ಲಾಕ್ ಮಾಜಿ ಅಧ್ಯಕ್ಷ ಚಂದ್ರಕಾಂತ ಗದ್ದೆ, ಬಿಜೆಪಿ ಬಸವರಾಜ ಫುಲಾರ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅದಮ್ಮಸಾಬ ನಿಂಬಾಳ ಅವರನ್ನು ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಸಮ್ಮುಖದಲ್ಲಿ ಪಕ್ಷಕ್ಕೆ ಸ್ವಾಗತಿಸಿಕೊಂಡು ಅವರು ಮಾತನಾಡಿದರು.
ಆಳಂದ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹಿಂದಿನಿಂದಲೂ ಮತದಾರು ಬಹುಮತ ನೀಡಿದ್ದಾರೆ. ಈಗಲೂ ಜೆಡಿಎಸ್
ಪಕ್ಷಕ್ಕೆ ಬೆಂಬಲಿಸಲು ಮತದಾರರು ಉತ್ಸುಕರಾಗಿದ್ದಾರೆ. ಎದುರಾಳಿಗಳು ಧೂಳಿಪಟವಾಗಲಿದ್ದಾರೆ. ಅಭ್ಯರ್ಥಿ
ಸೂರ್ಯಕಾಂತ ಕೊರಳ್ಳಿ ಅವರ ಗೆಲುವಿಗೆ ಶ್ರಮಿಸಿ ಕುಮಾರ ಸ್ವಾಮಿ ಅವರ ಕೈ ಬಲಬಡಿಸಿದರೆ, ಆಳಂದ ಕ್ಷೇತ್ರಕ್ಕೆ ಮಂತ್ರಿಸ್ಥಾನ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ಕ್ಷೇತ್ರದ ಜೆಡಿಎಸ್ ಸಂಭಾವ್ಯ
ಅಭ್ಯರ್ಥಿ ಸೂರ್ಯಕಾಂತ ಕೊರಳ್ಳಿ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿನಾಥ ಪಾಟೀಲ ಮದಗುಣಕಿ, ರಾಜ್ಯ
ಪ್ರಧಾನ ಕಾರ್ಯದರ್ಶಿ ಶ್ಯಾಮರಾವ್ ಸೂರನ್, ದಲಿತಪರ ಚಳವಳಿಯ ಮುಖಂಡ ಬಿ.ವಿ.ಚಕ್ರವರ್ತಿ, ಸಿದ್ದರಾಮ
ಪಾಟೀಲ ದಣ್ಣೂರ, ಚಂದ್ರಕಾಂತ ಘೋಡಕೆ ಹಾಗೂ ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.