ಜೇವರ್ಗಿ: ಗ್ರಾಪಂ ಚುನಾವಣೆ ಫಲಿತಾಂಶ
Team Udayavani, Jun 18, 2018, 10:02 AM IST
ಜೇವರ್ಗಿ: ತಾಲೂಕಿನ ಮದರಿ, ಕರಕಿಹಳ್ಳಿ ಹಾಗೂ ರಂಜಣಗಿ ಗ್ರಾಪಂ ಚುನಾವಣೆ ಮತ ಎಣಿಕೆ ರವಿವಾರ ನಡೆದು, ಫಲಿತಾಂಶ ಪ್ರಕಟವಾಯಿತು.
ಕರಕಿಹಳ್ಳಿ ಗ್ರಾಪಂ ಚುನಾವಣೆಯ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೆಣ್ಣೂರ ಗ್ರಾಮದಿಂದ ಬಿಜೆಪಿ ಬೆಂಬಲಿತ ದೇವಕ್ಕಿ ಶಿವಾನಂದ, ಭಾಗಮ್ಮ ಮುತ್ತಪ್ಪ, ವಸ್ತಾರಿ ಗ್ರಾಮದಿಂದ ಬಿಜೆಪಿ ಬೆಂಬಲಿತ ದೊಡ್ಡಪ್ಪಗೌಡ ಮಾಲಿಪಾಟೀಲ, ದ್ರೌಪತಿ ಸಂಜೀವಕುಮಾರ, ವರವಿ ಗ್ರಾಮದಿಂದ ಬಿಜೆಪಿ ಬೆಂಬಲಿತ ಶಿವಾನಂದಗೌಡ ಮಾಲಿಪಾಟೀಲ, ಶಮಸುದ್ದೀನ್ ಮುಲ್ಲಾ ಜಯಶಾಲಿಯಾಗಿದ್ದಾರೆ.
ಹರನಾಳ ಗ್ರಾಮದಿಂದ ಕಾಂಗ್ರೆಸ್ ಬೆಂಬಲಿತ ಅನುಸೂಯಾ ಮಹಾಲಿಂಗಪ್ಪ ಜಯಗಳಿಸಿದ್ದಾರೆ.ಮದರಿ ಗ್ರಾಪಂನ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಟ್ಟಿಸಂಗಾವಿ ಗ್ರಾಮದ ಕಾಂಗ್ರೆಸ್ ಬೆಂಬಲಿತ ರೇಖಾ ಸಂಗಣ್ಣ, ಸಯ್ಯದಸಾಬ ಸುಲ್ತಾನಸಾಬ, ಮರೆಮ್ಮ ಭೀಮರಾಯ, ಪದ್ಮಣ್ಣ ಪೂಜಾರಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಮಲಕಣ್ಣ ಸಿದ್ದಣ್ಣ ಗೆಲುವು ಸಾಧಿಸಿದ್ದಾರೆ. ಯನಗುಂಟಿ ಗ್ರಾಮದಿಂದ ಬಿಜೆಪಿ ಬೆಂಬಲಿತ ಈರಮ್ಮ ಚಂದ್ರಶ್ಯಾ, ಈಶಮ್ಮ ಸುಭಾಷ, ಸಂತೋಷಗೌಡ ಮಲ್ಲನಗೌಡ ಜಯಸಾಧಿಸಿದ್ದಾರೆ.
ರಂಜಣಗಿ ಗ್ರಾಪಂನ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಂಜಣಗಿ ಗ್ರಾಮದ ಬಿಜೆಪಿ ಬೆಂಬಲಿತ ನೀಲಮ್ಮ ಭಾಗಪ್ಪ, ಲಾಲಪಟೇಲ ಹಸನಸಾಬ, ಸಾವಿತ್ರಿ ನಿಂಗಣ್ಣಗೌಡ, ಕಾಂಗ್ರೆಸ್ ಬೆಂಬಲಿತ ಕವಿತಾ ಪಂಡಿತ್ ಪವಾರ, ಜಗದೇವಿ ಸಿದ್ದಪ್ಪ ಜಯಸಾಧಿ ಸಿದ್ದಾರೆ. ದೇಸಣಗಿಯ ಕಾಂಗ್ರೆಸ್ ಬೆಂಬಲಿತ ಜಿಲಾನಿಪಾಶಾ ಗುಲಾಮ ಮಕಾಶಿ, ಆಸ್ಮಾಬೇಗಂ ಉಸ್ಮಾನಭಾಷಾ ಯಾತನೂರ, ಜೆಡಿಎಸ್ ಬೆಂಬಲಿತ ಮುತ್ತುರಾಜ ಸಿದ್ದಣ್ಣ, ಶಿವಬಸಯ್ಯ ಬಸಯ್ಯ ಮಠಪತಿ, ರೇಷ್ಮಾ ಪ್ರದೀಪ, ರೇಣುಕಾ ಶರಣಗೌಡ ಭೋಮ್ಮನಜೋಗಿ, ಚುನಾಯಿತರಾಗಿದ್ದಾರೆ.
ಮುರಗಾನೂರ ಗ್ರಾಮದ ಸಿದ್ದಮ್ಮ ಶಿವಪುತ್ರಪ್ಪ, ಸಿದ್ದಣ್ಣ ಬಾಲಪ್ಪಗೋಳ, ದ್ಯಾವಪ್ಪ ಬೂಗದಡಿ, ಪಾರ್ವತಿ
ಮಡಿವಾಳಪ್ಪ, ಕಾಶಿಬಾಯಿ ಸುಭಾಶ್ಚಂದ್ರ, ಕಾಂತಪ್ಪ ಮಹಾದೇವಪ್ಪ ಚುನಾಯಿತರಾಗಿದ್ದಾರೆ. ಮದರಿ ಗ್ರಾಪಂನಲ್ಲಿ ಒಟ್ಟು 14 ಸ್ಥಾನಗಳ ಪೈಕಿ 6 ಅವಿರೋಧ, 8 ಸ್ಥಾನಗಳಿಗೆ ಚುನಾವಣೆ, ರಂಜಣಗಿ ಗ್ರಾಪಂನಲ್ಲಿ ಒಟ್ಟು 21 ಸ್ಥಾನಗಳ ಪೈಕಿ 4 ಅವಿರೋಧ, 17 ಸ್ಥಾನಗಳಿಗೆ ಚುನಾವಣೆ ಹಾಗೂ ಕರಕಿಹಳ್ಳಿ ಗ್ರಾಪಂನಲ್ಲಿ ಒಟ್ಟು 17 ಸ್ಥಾನಗಳ ಪೈಕಿ 10 ಅವಿರೋಧ, 7 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ವಿಜಯೋತ್ಸವ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸಿದ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ
ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮುಖಂಡರಾದ ರಮೇಶಬಾಬು ವಕೀಲ, ಷಣ್ಮುಖಪ್ಪ
ಸಾಹು ಗೋಗಿ, ಭಗವಚಿತ್ರಾಯ ಬೆಣ್ಣೂರ, ಬಾಪುಗೌಡ ಬಿರಾಳ, ಮಹಾಂತಪ್ಪ ಸಾಹು ಹರವಾಳ, ಸುನೀಲ ಸಜ್ಜನ,
ಅಕ್ಬರ್ ಸಾಬ ಮುಲ್ಲಾ, ಅಂಬರೀಶ ರಾಠೊಡ ಹಾಗೂ ಮತ್ತಿತರರು ಇದ್ದರು.
ಕಾಂಗ್ರೆಸ್: ಕಾಂಗ್ರೆಸ್ ಮುಖಂಡ ರಾಜಶೇಖರ ಸೀರಿ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿ ಎದುರು ಪಟಾಕಿ ಸಿಡಿಸಿ ಸಿಹಿ
ವಿತರಿಸಿ ವಿಜಯೋತ್ಸವ ಆಚರಿಸಲಾಯಿತು. ನೀಲಕಂಠ ಅವುಂಟಿ, ರವಿ ಕೋಳಕೂರ, ಶರಣು ಗುತ್ತೇದಾರ, ಪ್ರಕಾಶ
ಫುಲಾರೆ, ಮಹಿಮೂದ್ ನೂರಿ, ರಹೇಮಾನ ಪಟೇಲ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.