ಇಂದು ಜೇವರ್ಗಿ ಬಂದ್‌ಗೆ ಕರೆ
Team Udayavani, Feb 22, 2017, 2:54 PM IST
ಜೇವರ್ಗಿ: ಶ್ರೀರಾಮಸೇನಾ ತಾಲೂಕು ಅಧ್ಯಕ್ಷ ಶರಣು ಕೋಳಕೂರ ಕುಟುಂಬದವರ ಮೇಲೆ ಕಿಡಿಗೇಡಿಗಳು ನಡೆಸಿದ ಹಲ್ಲೆ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಶ್ರೀರಾಮಸೇನಾ ರಾಜ್ಯ ಗೌರವಾಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀರಾಮಸೇನೆ ರಾಸಣಗಿ ಎಂಬ ಫೇಸ್‌ಬುಕ್ ಖಾತೆಗೆ ಬೇರೆಯವರು ಅಶ್ಲೀಲ ಚಿತ್ರವೊಂದನ್ನು ಟ್ಯಾಗ್ ಮಾಡಿದ್ದರು. ಘಟನೆ ನಡೆದ ನಂತರ ಶುಕ್ರವಾರ ರಾತ್ರಿಯಿಂದ ಸಂಘಟನೆ ಅಧ್ಯಕ್ಷ ಶರಣು ಕೋಳಕೂರ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಶನಿವಾರ ಬೆಳಗ್ಗೆ ಪೊಲೀಸರು ಏಕಾಏಕಿ ಕಾರಣವಿಲ್ಲದೇ ಅಲ್ಲಿಂದ ನಿರ್ಗಮಿಸಿದ ಕೆಲವೇ ಕ್ಷಣಗಳಲ್ಲಿ ಕೋಳಕೂರ ಅವರ ಕುಟುಂಬದವರ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.
ಎರಡು ತಿಂಗಳ ಹಿಂದೆ ಜೋಪಡಪಟ್ಟಿಯ ಮದೀನಾ ಮಸೀದಿ ಬಳಿ ಒಂದು ಕೋಮಿನ ಜನ ಸರ್ಕಾರಿ ಸ್ಥಳ ಅತಿಕ್ರಮಿಸಿಕೊಂಡಿದ್ದರು. ಈ ಬಗ್ಗೆ ಶರಣು ಕೋಳಕೂರ ಹಾಗೂ ಕಾರ್ಯಕರ್ತರು ಹೋರಾಟ ಕೈಗೊಂಡು ಆ ಸ್ಥಳವನ್ನು ತೆರವುಗೊಳಿಸಿದ್ದರು. ಈ ಸೇಡಿನಿಂದಲೇ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಶರಣು ಕೋಳಕೂರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕಾಗಿ 48 ಗಂಟೆಗಳ ಗಡುವು ನೀಡಲಾಗಿತ್ತು.
ಆದರೆ 72 ಗಂಟೆಗಳು ಕಳೆದರೂ ಇನ್ನೂ ಎಲ್ಲಾ ಆರೋಪಿಗಳ ಬಂಧನವಾಗಿಲ್ಲ. ಆದ್ದರಿಂದ ಹಲ್ಲೆ ಘಟನೆ ಖಂಡಿಸಿ ಹಾಗೂ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಬುಧವಾರ ಜೇವರ್ಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಮರೆಪ್ಪ ಬಡಿಗೇರ, ಬಸವರಾಜ ಮಾಲಿಪಾಟೀಲ, ಶಿವು ಪಾಟೀಲ ಯಡ್ರಾಮಿ, ಷಣ್ಮುಖಪ್ಪ ಸಾಹು ಗೋಗಿ, ರವಿ ಕೋಳಕೂರ,
ಮರೆಪ್ಪ ಕೋಬಾಳಕರ್, ಸುರೇಶ ತಳವಾರ, ಪ್ರವೀಣ ಕುಂಟೋಜಿಮಠ, ಶಿವಾನಂದ ಮಾಕಾ, ಶರಣು ಕೋಳಕೂರ, ಸಿದ್ಧು ಗಜ, ಈಶ್ವರ ಹಿಪ್ಪರಗಿ, ಬಸವರಾಜ ಲಾಡಿ, ಪುರಸಭೆ ಸದಸ್ಯರಾದ ಮಾನಪ್ಪ ಗೋಗಿ, ಶರಣಗೌಡ ಸರಡಗಿ, ವಿಶ್ವನಾಥ ಇಮ್ಮಣ್ಣಿ, ಗುಂಡುಸಾಹು ಗೋಗಿ, ಮಲ್ಲಿಕಾರ್ಜುನ ಆದ್ವಾನಿ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಧರ್ಮು ಚಿನ್ನಿ ರಾಠೊಡ, ಅಶೋಕ ಗುಡೂರ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.