ಸಂಚಾರ ಸುಧಾರಣೆಗೆ ಕೆ-ಟ್ರ್ಯಾಕ್‌ ಯೋಜನೆ


Team Udayavani, Apr 7, 2017, 3:46 PM IST

gul2.jpg

ಕಲಬುರಗಿ: ದಿನೇ-ದಿನೇ ಹೆಚ್ಚಳವಾಗುತ್ತಿರುವ ಮಹಾನಗರದ ವಾಹನ ದಟ್ಟಣೆ ನಿಯಂತ್ರಣಕ್ಕೆ ಟ್ರಾಫಿಕ್‌ ನಿರ್ವಹಣಾ ಕೇಂದ್ರ ಅಸ್ತಿತ್ವ ಬರಲಿದೆ. ಈಗಾಗಲೇ ಬೆಂಗಳೂರು- ಬೆಳಗಾವಿದಲ್ಲಿ ಬಿ ಟ್ರ್ಯಾಕ್‌, ತುಮಕೂರಿನಲ್ಲಿ ಟಿ ಟ್ರ್ಯಾಕ್‌ ಮಾದರಿಯಂತೆ ಕಲಬುರಗಿಯಲ್ಲೂ ಕೆ ಟ್ರ್ಯಾಕ್‌ ಟ್ರಾಫಿಕ್‌ ಸುಧಾರಣೆಗೆ ಕಲಬುರಗಿ ಟ್ರ್ಯಾಕ್‌ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಪ್ರಸಕ್ತ 2017-18ನೇ ಸಾಲಿನ ಬಜೆಟ್‌ನಲ್ಲಿ 2 ಕೋಟಿ ರೂ. ತೆಗೆದಿರಿಸಿದೆ. 

ಅತ್ಯಾಧುನಿಕ ಸಿಗ್ನಲ್‌, ಸಿಸಿ ಕ್ಯಾಮರಾ ಅಳವಡಿಕೆ, ಹೊಸ ಒನ್‌ವೇ, ಲೈನ್‌ಗಳನ್ನು ಗುರುತಿಸುವ ಹಾಗೂ ಆಟೋಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದು ಸೇರಿದಂತೆ ಇತರ ಸುಧಾರಣೆ ಕ್ರಮಗಳಾಗಲಿವೆ. ಪೊಲೀಸ್‌ ಆಯುಕ್ತಾಲಯ ಬರಲಿರುವ ಕಲಬುರಗಿ ಮಹಾನಗರದಲ್ಲಿ ದಿನೇ-ದಿನೇ ಹೆಚ್ಚಳವಾಗುತ್ತಿರುವ ಟ್ರಾಫಿಕ್‌ ಸಮಸ್ಯೆ ನಿವಾರಣೆ ಸಂಬಂಧ ಆಧುನಿಕ ನಿಟ್ಟಿನ ಸುಧಾರಣೆಗೆ ಕೆ-ಟ್ರ್ಯಾಕ್‌ ಯೋಜನೆ ರೂಪಿಸಲಾಗಿದೆ.

ಕೆ-ಟ್ರ್ಯಾಕ್‌ ಟ್ರಾಫಿಕ್‌ ಸುಧಾರಣೆಗೆ 5 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದ್ದು, ಉಳಿದ ಮೊತ್ತವನ್ನು ಎಚ್‌ಕೆಆರ್‌ಡಿಬಿ ಹಾಗೂ ಪಾಲಿಕೆಯಿಂದ ಪಡೆಯಲು ಉದ್ದೇಶಿಸಲಾಗಿದೆ. ಈಗ ಕಲಬುರಗಿಯಲ್ಲಿ ವರ್ಷಕ್ಕೆ 2 ಕೋಟಿ ರೂ. ಅಧಿಕ ಮೊತ್ತದ ಸಂಚಾರಿ ನಿಯಮ ಉಲ್ಲಂಘನೆಯಿಂದ ದಂಡ ಸಂಗ್ರಹವಾಗುತ್ತಿದೆ. ದಂಡದಲ್ಲಿ ಶೇ. ಅರ್ಧದಷ್ಟು ಹಣವನ್ನು ಮಹಾನಗರದ ಟ್ರಾಫಿಕ್‌ ಸುಧಾರಣೆಗೆ ಬಳಸುವ ನಿಟ್ಟಿನಲ್ಲಿ ನಿಯಮ ಸಹ ರೂಪಿಸಲಾಗುತ್ತಿದೆ.

ಟ್ರಾಫಿಕ್‌ ನಿರ್ವಹಣಾ ಘಟಕವೇ ಎಲ್ಲವನ್ನು ನಿರ್ವಹಿಸಲಿದ್ದು, ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ಚಿತ್ರದ ಆಧಾರದ ಮೇಲೆ ಮನೆಗೆ ದಂಡದ ನೋಟಿಸ್‌ ಬರಲಿದೆ. ಒಟ್ಟಾರೆ ಈ ಎಲ್ಲವನ್ನು ಅವಲೋಕಿಸಿದರೆ ಮಹಾನಗರ ಟ್ರಾಫಿಕ್‌ ಸುಧಾರಣೆಗೆ ಅಮೂಲಾಗ್ರ ಬದಲಾವಣೆ ಬರುವುದು ನಿಶ್ಚಿತ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ. 

20 ಕಡೆ ಟ್ರಾಫಿಕ್‌ ಅಂಬ್ರೆಲ್ಲಾ ಸ್ಥಾಪನೆ: ಸಂಚಾರಿ ಪೊಲೀಸರು ಸಂಚಾರಿ ಸೇವೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಂಬಂಧ ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಗೆಯಲ್ಲಿ ಬಿಸಿಲು ಹಾಗೂ ಮಳೆಯಿಂದ ಸಂರಕ್ಷಿಸುವಂತಾಗಲು ಮಹಾನಗರದ 20 ಕಡೆ ಟ್ರಾಫಿಕ್‌ ಅಂಬ್ರೆಲ್ಲಾಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗುತ್ತಿದೆ. 

ಬೇಸಿಗೆಯಲ್ಲಿ ಸಂಚಾರಿ ಪೊಲೀಸ್‌ ಪೇದೆಗಳಿಗೆ ಬೆಳಗ್ಗೆ 11:00ರಿಂದ 4:00ರ ವರೆಗೆ ಮರ ಇಲ್ಲದೇ ಹತ್ತಿರದ ನೆರಳಿನಡಿ ನಿಂತು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ. ಅಲ್ಲದೇ ಬೇಸಿಗೆ ಮುಗಿಯುವವರೆಗೂ ಪೊಲೀಸ್‌ ಇಲಾಖೆಯಿಂದಲೇ ಮಜ್ಜಿಗೆ ನೀಡಲು ಕ್ರಮ ಸಹ ಕೈಗೊಳ್ಳಲಾಗುತ್ತಿದೆ. ಪೊಲೀಸ್‌ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ಈ ವೆಚ್ಚ ಭರಿಸಲು ನಿರ್ಧರಿಸಲಾಗಿದೆ.

ಜೂನ್‌-ಜುಲೈದಿಂದ ಹೆಲ್ಮೆಟ್‌ ಕಡ್ಡಾಯ: ಸದ್ಯ ಬೇಸಿಗೆ ಇರುವುದರಿಂದ ಬೈಕ್‌ ಸವಾರುದಾರರಿಗೆ ಸ್ವಲ್ಪ ರಿಯಾಯಿತಿ ನೀಡಲು ಇಲಾಖೆ ಉದ್ದೇಶಿಸಿದೆ. ಆದರೆ ಜೂನ್‌ ಕೊನೆ ವಾರದಿಂದ ಇಲ್ಲವೇ ಜುಲೈ ಮೊದಲ ವಾರದಿಂದ ಹೆಲ್ಮೆಟ್‌ ಕಡ್ಡಾಯ ನಿಯಮ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ.

ಒಟ್ಟಾರೆ ಮುಂದಿನ ದಿನಗಳಲ್ಲಿ ಕೆ ಟ್ರ್ಯಾಕ್‌ ಟ್ರಾಫಿಕ್‌ ಸುಧಾರಣೆ ಯೋಜನೆ ಮಹಾನಗರದ ಸಂಚಾರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಲಕ್ಷಣಗಳಿವೆ. ಇದಕ್ಕಾಗಿ ಸ್ವಲ್ಪ ದಿನ ಕಾದು ನೋಡಬೇಕಷ್ಟೇ. 

* ಹಣಮಂತರಾವ ಭೈರಾಮಡಗಿ 

ಟಾಪ್ ನ್ಯೂಸ್

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.