ಉದ್ಘಾಟನೆ ಭಾಗ್ಯ ಕಾಣದ ಕಾಳಗಿ ರೈತ ಸಂಪರ್ಕ ಕೇಂದ್ರ
Team Udayavani, Jan 2, 2019, 9:35 AM IST
ಕಾಳಗಿ: ಭೂಸೇನಾ ನಿಗಮ ವತಿಯಿಂದ ನೂತನ ತಾಲೂಕು ಕೇಂದ್ರ ಕಾಳಗಿ ಪಟ್ಟಣದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೆ ಅಕ್ರಮ ಚಟುವಟಿಗಳ ತಾಣವಾಗಿದೆ.
ಪಟ್ಟಣದ ರೈತ ಸಂಪರ್ಕ ಕೇಂದ್ರವು ಟೆಂಗಳಿ, ಕೊಡದೂರ, ರಾಜಾಪುರ, ಕಾಳಗಿ, ಗೋಟೂರ, ಚಿಂಚೋಳಿ (ಎಚ್), ಕಂದಗೂಳ, ಅರಣಕಲ್, ಬೆಡಸೂರ, ಹೇರೂರ, ಶೆಳ್ಳಗಿಯ 11 ಗ್ರಾಪಂ ವ್ಯಾಪ್ತಿಯ ಒಟ್ಟು 50ಕ್ಕೂ ಹೆಚ್ಚಿನ ಗ್ರಾಮ ಮತ್ತು ತಾಂಡಾಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬರುವ ಕೃಷಿ ಸಾಮಗ್ರಿಗಳಾದ ಲಘು ಪೋಷಾಕಾಂಶಗಳು, ಬೀಜ, ರಸಗೊಬ್ಬರ, ಕೀಟನಾಶಕ, ಇತರೆ ಕೃಷಿ ಪರಿಕರಗಳನ್ನು ಖರೀಸಲು ಸ್ಥಳದ ಅಭಾವವಿದ್ದು, ಕೃಷಿ ಸಲಕರಣೆಗಳ ಶೇಖರಣೆಗೆ ಕೋಣೆಗಳ ಕೊರತೆಯಿಂದ ಬೇರೆ ಕಟ್ಟಡದಲ್ಲಿ ಸಂಗ್ರಹಿಸುವ ಅನಿವಾರ್ಯತೆ ಬಂದೊದಗಿದೆ.
ಹಳೆ ಕಟ್ಟಡ ಚಿಕ್ಕದಿರುವುದರಿಂದ ಸಮಸ್ಯೆ ಅರಿತ ಜನಪ್ರತಿನಿಧಿಗಳು ಕಳೆದ ಎರಡು ವರ್ಷಗಳ ಹಿಂದೆ ಭೂ ಸೇನಾ ನಿಗಮ ಅಡಿಯಲ್ಲಿ 38ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಭರತನೂರ ರಸ್ತೆ ಮಾರ್ಗದಲ್ಲಿ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಸುಸಜ್ಜಿತವಾಗಿ ನಿರ್ಮಾಣವಾದ ಈ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ಕುಡಿಯುವ ನೀರು, ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಲ್ಲ. ರಐತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಈ ಕಟ್ಟಡವನ್ನು ಇನ್ನುವರೆಗೂ ಹಸ್ತಾಂತರಿಸಿಲ್ಲ. ನಿರ್ಮಾಣವಾದ ಕಟ್ಟಡ ಹಾಳು ಬಿದ್ದಿದ್ದು, ಕುಡುಕರ, ಪೋಲಿ ಹುಡುಗರ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಗುತ್ತೇದಾರರಿಗೆ ತಿಳಿಸಲಾಗಿದೆ. ಇನ್ನುಳಿದ ಕೆಲಸ ಪೂರ್ಣಗೊಳಿಸಿ 15ದಿನಗಳ ಒಳಗಾಗಿ ಕೃಷಿ ಅಧಿಕಾರಿಗಳಿಗೆ ಕಟ್ಟಡ ಹಸ್ತಾಂತರಿಸಲಾಗುವುದು.
ಲಿಂಗನಗೌಡ ಪಾಟೀಲ,
ಲ್ಯಾಂಡ್ ಆರ್ಮಿ ಎಇಇ
ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡದಲ್ಲಿ ಇನ್ನು ಕೆಲಸಗಳು ಬಾಕಿ ಇವೆ. ಕೆಲಸ ಪೂರ್ಣಗೊಳಿಸಿ ಹಸ್ತಾಂತರಿಸಿದರೆ ಶೀಘ್ರವೇ ಕಟ್ಟಡ ಉದ್ಘಾಟಿಸಲಾಗುವುದು.
ಎಸ್.ಎಚ್. ಗಡಗಿಮನಿ,
ಸಹಾಯಕ ಕೃಷಿ ನಿರ್ದೇಶಕ ಚಿತ್ತಾಪೂರ
ಭೀಮರಾಯ ಕುಡ್ಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.