ಕಲಬುರಗಿ: 72 ವರ್ಷದ ವೃದ್ಧೆ ಸೇರಿ ಮೂವರು ಕೋವಿಡ್-19 ಸೋಂಕು ಮುಕ್ತ
Team Udayavani, Apr 24, 2020, 10:16 AM IST
ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿನ ಆತಂಕ ಹೆಚ್ಚುತ್ತಿರುವ ನಡುವೆಯೂ ಜನತೆಗೆ ಸಂತಸದ ಸುದ್ದಿಯೊಂದು ಬಂದಿದೆ. ಮಹಾಮಾರಿ ಸೋಂಕಿನಿಂದ ಬಳಲುತ್ತಿದ್ದ 72 ವರ್ಷದ ವೃದ್ಧೆ ಸೇರಿ ಮೂವರು ಮಹಿಳೆಯರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 36 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಲ್ಲಿ ಈಗಾಗಲೇ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿಂದೆಯೇ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಮತ್ತೆ ಮೂವರು ಸೋಂಕಿನಿಂದ ಗುಣಮುಖರಾಗಿದ್ದು, ಜನತೆ ನಿಟ್ಟುಸಿರು ಬಿಡುವಂತೆ ಆಗಿದೆ.
ತನ್ನ ಮಗನಿಂದ ಕೋವಿಡ್-19 ಸೋಂಕು ಪೀಡಿರಾಗಿದ್ದ ಕಲಬುರಗಿ ನಗರದ 72 ವರ್ಷದ ಅಜ್ಜಿ (ಪಿ-178) ಹೆಮ್ಮಾರಿ ರೋಗ ವಿರುದ್ಧದ ಹೋರಾಡಿ ಜಯಿಸಿದ್ದಾರೆ. ಅದೇ ರೀತಿ ಶಹಾಬಾದ್ ಪಟ್ಟಣದ 60 ವರ್ಷದ ವೃದ್ಧೆ (ಪಿ-124) ಹಾಗೂ ಈಕೆಯ 28 ವರ್ಷದ ಸೊಸೆ (ಪಿ-174) ಕೂಡ ಕೋವಿಡ್-19 ಸೋಂಕು ಮುಕ್ತರಾಗಿದ್ದಾರೆ.
ಶಹಾಬಾದ್ ನ ವ್ಯಕ್ತಿ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮರಳಿ ಬಂದಿದ್ದ. ಈತನಿಂದ ಪತ್ನಿ (ಪಿ-124)ಗೆ ಪತ್ತೆಯಾಗಿತ್ತು. ನಂತರ ಈಕೆ ಸಂಪರ್ಕಕ್ಕೆ ಬಂದಿದ್ದ ಸೊಸೆಗೂ ಸೋಂಕು ಹರಡಿತ್ತು. ಆದರೆ, ದೆಹಲಿಗೆ ಹೋಗಿದ್ದ ವ್ಯಕ್ತಿಗೆ ಸೋಂಕು ಖಚಿತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.