ಕಲಬುರಗಿ ಡಿಸಿಸಿ ಬ್ಯಾಂಕ್ ಗೆ ಬಿರುಸಿನ ಮತದಾನ: ಅಧಿಕಾರಕ್ಕೆ ಕಾಂಗ್ರೆಸ್- ಬಿಜೆಪಿ ಫೈಟ್
Team Udayavani, Nov 29, 2020, 1:15 PM IST
ಕಲಬುರಗಿ: ಬಿಜೆಪಿ- ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಗೆ ರವಿವಾರ ಇಂದು ಚುನಾವಣೆ ನಡೆಯುತ್ತಿದ್ದು, ಬಿರುಸಿನ ಮತದಾನ ನಡೆಯುತ್ತಿದೆ.
ಚುನಾವಣೆಗೆ ಅಧಿಸೂಚನೆ ಹೊರ ಬಿದ್ದ ನಂತರ ದಿನಾಲು ಒಂದಿಲ್ಲ ಒಂದು ತಂತ್ರ- ಪ್ರತಿತಂತ್ರ ನಡೆಯುತ್ತಿರುವ ಪರಿಣಾಮ ಚುನಾವಣೆಗೆ ಇನ್ನಿಲ್ಲದ ರಂಗು ಬಂದಿದೆ. ಒಂದು ಸಲವಾದರೂ ಹೇಗಾದರೂ ಮಾಡಿ ಬ್ಯಾಂಕ್ ನ ಆಡಳಿತದ ಗದ್ದುಗೆ ಹಿಡಿಯಲೇಬೇಕೆಂದು ಬಿಜೆಪಿ ಪಣ ತೊಟ್ಟಿದ್ದರಿಂದ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ತನ್ನ ಕೈಯಿಂದ ಅಧಿಕಾರ ತಪ್ಪಬಾರದು ಎಂದು ರಣತಂತ್ರ ರೂಪಿಸಿದೆ. ಸಹಕಾರಿ ಕ್ಷೇತ್ರದ ಚುನಾವಣೆ ಸಾರ್ವತ್ರಿಕ ಚುನಾವಣೆ ಮೀರಿಸುವ ಮಟ್ಟಿಗೆ ಕಾವೇರಿದೆ.
ಬ್ಯಾಂಕ್ ನ ಒಟ್ಟಾರೆ 13 ಸ್ಥಾನಗಳಲ್ಲಿ 7 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 6 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಸಂಜೆ 4ರ ವರೆಗೆ ಚುನಾವಣೆ ನಡೆದು ತದನಂತರ ಮತ ಏಣಿಕೆ ನಡೆದು ಒಂದು ಗಂಟೆ ನಂತರ ಫಲಿತಾಂಶ ಹೊರ ಬೀಳಲಿದೆ.
ಇದನ್ನೂ ಓದಿ:ಲವ್ ಜಿಹಾದ್ ಕಾಯ್ದೆ ತರುವಮೊದಲು ಯಾವ ನಾಯಕರ ಮಕ್ಕಳುಯಾರನ್ನು ಲವ್ ಮಾಡಿದ್ದಾರೆ ನೋಡಲಿ:ಡಿಕೆಶಿ
ಬ್ಯಾಂಕ್ ನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸೋಮಶೇಖರ್ ಗೋನಾಯಕ ಪಟ್ಟಣ ಸಹಕಾರಿ ಕ್ಷೇತ್ರದಿಂದ ಹಾಗೂ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕ ಕೇದಾರಲಿಂಗಯ್ಯ, ಹಿರೇಮಠ ಜೇವರ್ಗಿ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕ್ಷೇತ್ರದಿಂದ ಮತ್ತು ಹಾಲಿ ನಿರ್ದೇಶಕ ಗೌತಮ ಪಾಟೀಲ್ ಚಿಂಚೋಳಿ ತಾಲೂಕಿನಿಂದ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೆಂಟರಾದ (ಬೀಗರು) ಶಿವಾನಂದ ಮಾನಕರ ಗೊಬ್ಬುರ, ಟಿಎಪಿಸಿಎಂ ಕ್ಷೇತ್ರದಿಂದ ಸ್ಪರ್ಧಾ ಕಣದಲ್ಲಿದ್ದು, ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗುತ್ತಿದ್ದು, ಸಂಜೆ ಬಹಿರಂಗಗೊಳ್ಳಲಿದೆ.
ಬೆಳಿಗ್ಗೆ 9ಕ್ಕೆ ಮತದಾನ ಶುರುವಾಗಿದ್ದು, ಮಧ್ಯಾಹ್ನ 12ರ ಹೊತ್ತಿಗೆ ಶೇ 88 ರಷ್ಟು ಮತದಾನವಾಗಿದೆ.
ಅವಿರೋಧವಾಗಿ ಆಯ್ಕೆಯಾಗಿರುವ ಏಳು ನಿರ್ದೆಶಕರಲ್ಲಿ ಐವರು ಕಾಂಗ್ರೆಸ್ ಬೆಂಬಲಿತರಿದ್ದರೆ ಇಬ್ಬರು ಬಿಜೆಪಿಯವರಿದ್ದಾರೆ. 13 ಸ್ಥಾನಗಳ ಜತೆಗೇ ಸರ್ಕಾರದಿಂದ ಒಬ್ಬರು ನಾಮನಿರ್ದೇಶನ ಇಬ್ಬರು ಸಹಕಾರಿ ಅಧಿಕಾರಿಗಳು ಸೇರಿ ಒಟ್ಟಾರೆ 16 ಸದಸ್ಯ ಬಲಾಬಲ ಹೊಂದಲಿದ್ದು, ಬ್ಯಾಂಕ್ ನಲ್ಲಿ ಆಡಳಿತದ ಅಧಿಕಾರ ಹೊಂದಲು 9 ಸದಸ್ಯ ನಿರ್ದೇಶಕರ ಬೆಂಬಲದ ಅಗತ್ಯವಿದೆ. ಬ್ಯಾಂಕ್ ನ ಆಡಳಿತ ಪಡೆಯಲು ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.