ಕಲಬುರಗಿ: ಕುಲಸಚಿವರ ವಜಾಕ್ಕೆ ಒತ್ತಾಯ
Team Udayavani, Sep 7, 2022, 1:21 PM IST
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಲ್ಲಿರುವ ಕೇಂದ್ರೀಯ ವಿವಿಯಲ್ಲಿ ನಡೆದಿರುವ ಇಂಗ್ಲಿಷ್ ಸೇರಿದಂತೆ ಇತರೆ ವಿಷಯಗಳ ಪ್ರಾಧ್ಯಾಪಕರು, ಕುಲಸಚಿವರ ನೇಮಕಗಳು ಅಕ್ರಮವಾಗಿದ್ದು, ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯಗಳ ಹಿತರಕ್ಷಣಾ ಸಮಿತಿ ಹಾಗೂ ರಿಪಬ್ಲಿಕನ್ ಯೂತ್ ಫೆಡರೇಷನ್ ಸದಸ್ಯರು ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆಯಿಂದಲೇ ಪ್ರತಿಭಟನಕಾರಾರರು ಮುಖ್ಯದ್ವಾರಕ್ಕೆ ಕೀಲಿ ಜಡಿದು ಮುಂಭಾಗದಲ್ಲಿ ಧರಣಿ ಕುಳಿತರು. ಬಳಿಕ ಕುಲಪತಿಗಳ ಮೂಲಕ ಕುಲಾಧಿಪತಿಗಳಾದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ನೇಮಕಾತಿಯ ಅರ್ಹತಾ ಮಾನದಂಡಗಳನ್ನು ಸಮರ್ಪಕವಾಗಿ ಪೂರೈಸಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಂಗ್ರಹಿಸಿಲಾದ ವಿವಿ ದಾಖಲೆಗಳಲ್ಲೇ, ಇಂಗ್ಲಿಷ್ ವಿಷಯದಲ್ಲಿ ಪಿಎಚ್‌ಡಿ ಹೊಂದದೇ ಇದ್ದರೂ, 2011ರಲ್ಲಿ ಸಹ ಪ್ರಾಧ್ಯಾಪಕರೆಂದು ನೇಮಕಗೊಂಡಿದ್ದಾರೆ. ಅಚ್ಚರಿ ಎಂದರೆ 2013ರಲ್ಲಿ ಅವರು ಪಿಎಚ್‌ಡಿ ಪಡೆದಿದ್ದಾರೆ. ಆದರೂ ಸಹ ಇವರನ್ನು ಸಹಪ್ರಾಧ್ಯಾಪಕ ಹುದ್ದೆಗೆ ಪರಿಗಣಿಸಿರುವುದು ನೇರವಾಗಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ಬಳಿಕ ಇವರನ್ನು ಕುಲಸಚಿವರನ್ನಾಗಿ ನೇಮಿಸಲಾಗಿದೆ. ಆಗಿನಿಂದಲೂ ಇವರು, ಹಲವಾರು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳ ನೇಮಕವೂ ಅವ್ಯವಹಾರದಿಂದ ಕೂಡಿದೆ. ಆದ್ದರಿಂದ ಕೂಡಲೇ ಈ ಎಲ್ಲ ನೇಮಕಾತಿಗಳು ಮತ್ತು ಕುಲಸಚಿವರ ನೇಮಕಾತಿ ಕುರಿತು ಸಮಗ್ರ ತನಿಖೆಗೆ ಒಳಪಡಿಸಬೇಕು. ಕೂಡಲೇ ಕುಲಸಚಿವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸುನೀಲ ಮಾರುತಿ ಮಾನ್ಪಡೆ, ಅಶ್ವಿನಿ ಮದನಕರ್, ಅನಿಲ ಟೆಂಗಳಿ, ಗೌತಮ್ ಕರಿಕಲ್, ಬಾಬುರಾವ್ ಬೀಳಗಿ, ಸುರೇಶ ಕಟ್ಟಿಮನಿ, ಧರ್ಮಣ್ಣ ಕೋಣಿಕರ್, ಸಂತೋಷ ಮೇಲ್ಮನಿ, ಮುತ್ತಣ್ಣ ನಡಿಗೇರ್, ರಾಜೇಂದ್ರ ರಾಜವಾಳ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.