Kalaburagi: ಕಲಗುರ್ತಿ ಕೊರಬಾ ಸಾವು ಪ್ರಕರಣ;ಮೂವರು ಪೊಲೀಸರ ಅಮಾನತು
ಅರವತ್ತು ದಿನಗಳ ಹೋರಾಟದ ಫಲ : ಕೋಲಿ ಸಮಾಜದ ಹೋರಾಟ ಸಮಿತಿ
Team Udayavani, Nov 11, 2023, 7:04 PM IST
ಕಲಬುರಗಿ: ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೊರಬಾ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿದ್ದಾರೆ.
ಮುಖ್ಯಪೇದೆಯಾದ ಜಗನ್ನಾಥ, ಪೊಲೀಸ್ ಪೇದೆಗಳಾದ ಮಲಗೊಂಡ, ರಮೇಶ ಅವರನ್ನು ಅಮಾನತು ಮಾಡಿ ಎಸ್ಪಿ ಅಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.
ಕೋಲಿ ಸಮಾಜ ಸ್ವಾಗತ
ಪೊಲೀಸರ ಈ ಅಮಾನತು ಕೋಲಿ ಸಮಾಜ ನಡೆಸಿದ ಅರವತ್ತು ದಿನಗಳ ಹೋರಾಟದ ಮೊದಲ ಫಲವಾಗಿದೆ. ಇನ್ನೂ ಅಧಿಕಾರಿಗಳು ಅಮಾನತು ಆಗಬೇಕು ಮತ್ತು ಸಾವಿಗೆ ಒತ್ತಾಸೆಯಾಗಿರುವ ಆರೋಪಿಗಳ ಬಂಧನವಾಗಬೇಕು. ಆಗ ಕಲಗುರ್ತಿ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರಲಿದೆ. ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಮಾತು ಕೊಟ್ಟಂತೆ ನಡೆದುಕೊಂಡಿರುವುದು ಕೂಡ ಸ್ವಾಗತಾರ್ಹ ಎಂದು ಕೋಲಿ ಸಮಾಜದ ಹೋರಾಟ ಸಮಿತಿ ಸಂಚಾಲಕ ಅವ್ವಣ್ಣ ಮ್ಯಾಕೇರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.