ಕಲಬುರಗಿ ಜಿಲ್ಲೆಗಿದೆ 2500 ವರ್ಷದ ಇತಿಹಾಸ
ಸಿಂಧು ನಾಗರಿಕತೆಯೊಂದಿಗೂ ಹೋಲಿಕೆ | ಸನ್ನತಿಯಲ್ಲಿ ಸಿಕ್ಕಿವೆ ಹಲವು ಪುರಾವೆ: ಡಾ| ಶಂಭುಲಿಂಗ ವಾಣಿ
Team Udayavani, Feb 7, 2020, 10:41 AM IST
ಕಲಬುರಗಿ : ಕಲಬುರಗಿ ಅಥವಾ ಗುಲಬರ್ಗಾ ಜಿಲ್ಲೆ 2,500 ವರ್ಷಗಳ ಇತಿಹಾಸ ಹೊಂದಿದೆ. ಭಾರತದ ಪರಂಪರೆಯಷ್ಟೇ ಪುರಾತನವಾದ ಹಿನ್ನೆಲೆ ಇದೆ ಎಂದು ಇತಿಹಾಸ ಉಪನ್ಯಾಸಕ ಡಾ| ಶಂಭುಲಿಂಗ ವಾಣಿ ಹೇಳಿದರು.
ಕಲಬುರಗಿ ಅತ್ಯಂತ ಪ್ರಾಚೀನ ಜಿಲ್ಲೆ. ಸಿಂಧು ನಾಗರಿಕತೆಗೂ ಕಲಬುರಗಿ ನಾಗರಿಕತೆಗೂ ಹೋಲಿಕೆ ಇದೆ. ಆದಿಪೂರ್ವ ಕಾಲದ ಇತಿಹಾಸ ಕುರುಹುಗಳು ಜಿಲ್ಲೆಯಲ್ಲಿ ಲಭ್ಯ ಇದೆ. ಚಿತ್ತಾಪುರದ ಸನ್ನತಿಯಲ್ಲಿ ಇಂತಹ ಪುರಾವೆಗಳು ದೊರೆಯುತ್ತವೆ. ಭಾರತದ ನಾಗರಿಕತೆ 1921ರಲ್ಲಿ ಹೊರಬಂದರೆ, ಕಲಬುರಗಿ ನಾಗರಿಕತೆ 1985ರಲ್ಲಿ ಬೆಳಕಿಗೆ ಬಂತು ಎಂದರು.
ದೇಶದ ಮೊದಲ ಸಾಮ್ರಾಜ್ಯ ಮೌರ್ಯರಿಂದ ಹಿಡಿದು ಕೊನೆಯ ನಿಜಾಮರ ಆಳ್ವಿಕೆಯನ್ನು ಕಲಬುರಗಿ ಕಂಡಿದೆ. ಕೃಷ್ಣ-ಭೀಮ ನದಿಗಳ ನಡುವೆ ಸಗರನಾಡು ಸಾಮ್ರಾಜ್ಯ ಇತ್ತು. ಅಶೋಕ ಚರ್ಕವರ್ತಿ ನಾಲ್ಕು ರಾಜಧಾನಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದ. ಅದರಲ್ಲಿ ಸನ್ನತಿ ಕೂಡ ಒಂದಾಗಿತ್ತು ಎಂದರು.
ಈ ಭಾಗ ಸಹಿಷ್ಣುತೆ ಮತ್ತು ಸಹಬಾಳ್ವೆಗೆ ಹೆಸರುವಾಸಿ. ಉರ್ದು ಹುಟ್ಟಿದ ಸ್ಥಳ ಕಲಬುರಗಿ. ಸೂಫಿ ಸಂತ ಖ್ವಾಜಾ ಬಂದೇ ನವಾಜ್ ಮೊದಲ ಉರ್ದು ಕೃತಿಯ ಕರ್ತೃ ಎಂದು ವಿವರಿಸಿದರು. ಪ್ರವಾಸೋದ್ಯಮ ತಾಣಗಳು-ಅಭಿವೃದ್ಧಿ ಕುರಿತು ಡಾ| ಶಶಿಶೇಖರ ರೆಡ್ಡಿ, ಸಾಹಿತ್ಯ-ಸಂಸ್ಕೃತಿ ಬಗ್ಗೆ ಡಾ| ಅಮೃತ ಕಟಕೆ ವಿಷಯ ಮಂಡಿಸಿದರು .
ಕಲಬುರಗಿಯ ಬಿಸಿಲಿಗೆ ಅಸ್ತಮಾ ಖತಂ!
ಬಿಸಿಲಿನ ಮಜಾ ಅನುಭವಿಸಲೆಂದೇ ವಿದೇಶಗಳಿಂದ ಅದೆಷ್ಟೋ ಜನ ಗೋವಾಕ್ಕೆ ಬರುತ್ತಾರೆ. ಕಲಬುರಗಿ ಬಿಸಿಲು ಗೋವಾ ಬಿಸಿಲಿಗಿಂತ ಉತ್ಕೃಷ್ಟ. ಇಲ್ಲಿನ ಬಿಸಿಲಿಗೆ ಅಸ್ತಮಾ ಹೇಳ ಹೆಸರಿಲ್ಲದಂತೆ ಹೋಗುತ್ತದೆ. ಚಿಂಚೋಳಿ ವನ್ಯಜೀವಿ ಧಾಮ ಮತ್ತು ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ, ರಾಜ್ಯದಲ್ಲೇ ಉತ್ತಮ ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳುತ್ತದೆ.
ಡಾ| ಶಶಿಶೇಖರ ರೆಡ್ಡಿ,
ಸಾರಿಗೆ ಇಲಾಖೆ ಅಧಿಕಾರಿ
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.