20 ಸಾವಿರ ಪ್ರತಿನಿಧಿಗಳ ನೋಂದಣಿ
ಮಂಗಳೂರಿನಿಂದ ಒಬ್ಬರೂ ನೋಂದಣಿ ಮಾಡಿಸಿಲ್ಲಹಿಂದಿನ ಸಮ್ಮೇಳನ ದಾಖಲೆ ಮುರಿದ ಕಲಬುರಗಿ
Team Udayavani, Jan 23, 2020, 10:43 AM IST
ಕಲಬುರಗಿ: ಮುಂದಿನ ತಿಂಗಳು ಫೆಬ್ರುವರಿ 5ರಿಂದ ಇಲ್ಲಿ ನಡೆಯುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಸಾವಿರ ಪ್ರತಿನಿಧಿಗಳ ನೋಂದಣಿ ಅಂತಿಮವಾಗಿದೆ. ಸಮ್ಮೇಳನ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸಮ್ಮೇಳನ ನೋಂದಣಿ ಸಂಖ್ಯೆ 20284ಕ್ಕೆ ಅಂತಿಮಗೊಂಡಿರುವುದು ಹಿಂದಿನ ಸಮ್ಮೇಳನದ ಸಂಖ್ಯೆಯನ್ನು ಹಿಂದಿಕ್ಕಿದೆ. ಇದರಲ್ಲಿ 13561 ಪುರುಷರು ಹೆಸರು ನೋಂದಾಯಿಸಿದ್ದರೆ 5291 ಮಹಿಳೆಯರು ನೋಂದಣಿ ಮಾಡಿದ್ದಾರೆ.
ಸಮ್ಮೇಳನದ ಪ್ರತಿನಿಧಿ ನೋಂದಣಿ ಕೊನೆ ದಿನಾಂಕ ಕಳೆದ ಜ. 14 ಆಗಿತ್ತು. ಈಗ ರಾಜ್ಯದ ಎಲ್ಲ ಜಿಲ್ಲೆಗಳ ನೋಂದಣಿಯು ರಸೀದಿ ಪುಸ್ತಕಗೊಂದಿಗೆ ವಾಪಸ್ಸು ಬಂದ ನಿಖರ ನೋಂದಣಿ ಸಂಖ್ಯೆ ಹೊರ ಬಂದಿದೆ. 250 ರೂ. ನೀಡಿ ಜನರು ಸಮ್ಮೇಳನಕ್ಕೆ ತಮ್ಮ ಪ್ರತಿನಿಧಿಯಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ರಾಯಚೂರಲ್ಲಿ ನಡೆದ ಅಖೀಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 12400, ಮೈಸೂರಲ್ಲಿ ನಡೆದ 83ನೇ ಸಮ್ಮೇಳನದಲ್ಲಿ 13000 ಹಾಗೂ ಧಾರವಾಡದಲ್ಲಿ 13500 ಪ್ರತಿನಿಧಿಗಳ ನೋಂದಣಿಯಾಗಿತ್ತು. ಈಗ ಕಲಬುರಗಿಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದು 20 ಸಾವಿರ ಪ್ರತಿನಿಧಿಗಳ ನೋಂದಣಿಯಾಗಿದೆ.
ಅತಿ ಹೆಚ್ಚಿನ ಪ್ರತಿನಿಧಿಗಳ ನೋಂದಣಿ ಕಲಬುರಗಿ ಜಿಲ್ಲೆಯಲ್ಲಿ ಆಗಿದ್ದು, ಜಿಲ್ಲೆಯಲ್ಲಿ 2494 ಪ್ರತಿನಿಧಿಗಳ ನೋಂದಣಿಯಾಗಿದೆ. ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಿ 1432 ನೋಂದಣಿಯಾಗಿದ್ದರೆ ಕಲಬುರಗಿ ಕಸಾಪದಲ್ಲಿ ತೆರೆಯಲಾಗಿದ್ದ ನೋಂದಣಿ ಕಾರ್ಯಾಲಯದಲ್ಲಿ 1794 ಜನರು ಸಮ್ಮೇಳನದ ಪ್ರತಿನಿಧಿಗಳಾಗಿ ನೋಂದಾಯಿಸಿದ್ದಾರೆ.
ಮಂಗಳೂರಿನಿಂದ ಒಬ್ಬರೂ ನೋಂದಣಿ ಇಲ್ಲ: ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಹೆಸರು ಮಾಡಿರುವ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ)ನಲ್ಲಿ ಒಬ್ಬರೂ ಕಲಬುರಗಿಯಲ್ಲಿನ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ತಮ್ಮ ಹೆಸರು ನೋಂದಣಿ ಮಾಡಿಸಿಲ್ಲ. ಅದೇ ರೀತಿ ಕರಾವಳಿ ಭಾಗದ ಇನ್ನೊಂದು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 1174 ಸಾಹಿತಿಗಳು-ಸಾಹಿತ್ಯಾಸಕ್ತರು ಸಮ್ಮೇಳನದ ತಿನಿಧಿಯಾಗಿ ನೋಂದಣಿ ಮಾಡಿದ್ದರೆ ಸಾಹಿತ್ಯದ ಸಮ್ಮೇಳನದ ಪಕ್ಕದ ಜಿಲ್ಲೆ ಬೀದರ್‌ದಲ್ಲಿ 400 ಮಾತ್ರ ನೋಂದಣಿ ಮಾಡಿಸಿದ್ದಾರೆ. ಉಳಿದಂತೆ ರಾಯಚೂರಲ್ಲಿ 1400, ಯಾದಗಿರಿ ಜಿಲ್ಲೆಯಲ್ಲಿ 980, ಬೆಂಗಳೂರು ಗ್ರಾಮಾಂತರದ ಜಿಲ್ಲೆಯಲ್ಲಿ
200, ರಾಮನಗರ ಜಿಲ್ಲೆಯಲ್ಲಿ 500, ಕೋಲಾರ 100, ಚಿತ್ರದುರ್ಗ 600, ಚಿಕ್ಕಬಳ್ಳಾಪುರ 371, ತುಮಕೂರು 1500, ದಾವಣಗೆರೆ 600, ಶಿವಮೊಗ್ಗ 540, ಗದಗ 688, ಕೊಪ್ಪಳ 834, ಬಳ್ಳಾರಿ 700, ಮೈಸೂರು 1174, ಚಾಮರಾಜ ನಗರ 460, ಮಂಡ್ಯ 800, ಹಾಸನ 800, ಕೊಡಗು 55, ಚಿಕ್ಕಮಗಳೂರು 500, ಉಡುಪಿ 55, ಬೆಳಗಾವಿ 200, ವಿಜಯಪುರ 700, ಬಾಗಲಕೋಟೆ 886, ಹುಬ್ಬಳ್ಳಿ 500, ಹಾವೇರಿ ಜಿಲ್ಲೆಯಲ್ಲಿ 800 ಜನರು ಸಮ್ಮೇಳನದ ಪ್ರತಿನಿಧಿಯಾಗಿ ಹೆಸರು ನೋಂದಣಿ ಮಾಡಿದ್ದಾರೆ.
ಏನೇನು ಸೌಲಭ್ಯ?
ಸಮ್ಮೇಳನದ ಪ್ರತಿನಿಧಿಯಾದವರಿಗೆ ಓಓಡಿ ಸೌಲಭ್ಯ, ವಸತಿ ಹಾಗೂ ಊಟದ ವ್ಯವಸ್ಥೆ. ಸಮ್ಮೇಳನ ಕಿಟ್ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿವೆ. ಸಮ್ಮೇಳನದಲ್ಲಿ ಪ್ರತಿನಿಧಿ ನೋಂದಣಿದಾರರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿದೆ. ಕಲಬುರಗಿ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿದ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಇಲ್ಲ.
ಸಮ್ಮೇಳನದ ಪ್ರತಿನಿಧಿ ನೋಂದಣಿ ಮತ್ತೆ ಇಲ್ಲ. ಸಮ್ಮೇಳನದ ಆರಂಭದ ದಿನ ಪ್ರತಿನಿಧಿ ನೋಂದಣಿ ಆರಂಭಿಸುವಂತೆ ಒತ್ತಾಯಗಳು ಬರುತ್ತಿವೆ. ಆದರೆ ಈಗಲೇ 20 ಸಾವಿರ ಜನರು ನೋಂದಣಿ ಮಾಡಿದ್ದರಿಂದ ಇವರಿಗೆಲ್ಲ ಸೌಲಭ್ಯದತ್ತ ನಿಗಾ ವಹಿಸಲಾಗುವುದು.
ತಿಪ್ಪಣ್ಣಪ್ಪ ಕಮಕನೂರ, ನೋಂದಣಿ
ಸಮಿತಿ ಅಧ್ಯಕ್ಷರು ಹಾಗೂ ಶಾಸಕರು
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.