18 ಸಾವಿರ ಜನರಿಗೆ ವಸತಿ ಸೌಕರ್ಯ

ಸ್ಥಳೀಯರಿಗಿಲ್ಲ ವಸತಿ ವ್ಯವಸ್ಥೆಪ್ರತಿನಿಧಿಗಳ ಮೊಬೈಲ್‌ಗೆ ಎಸ್‌ಎಂಎಸ್

Team Udayavani, Jan 31, 2020, 10:41 AM IST

31-Janauary-1

ಕಲಬುರಗಿ: ದಾಖಲೆ ಪ್ರಮಾಣದಲ್ಲಿ ಕಲಬುರಗಿಯ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡಿರುವ ನಾಡಿನ ಸಾಹಿತ್ಯಾಸಕ್ತರಿಗೆ ಸೂಕ್ತ ರೀತಿಯಲ್ಲಿ ವಸತಿ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಂದಣಿ ಸಮಯದಲ್ಲಿ ಮೊಬೈಲ್‌ ಸಂಖ್ಯೆ ಕೊಟ್ಟವರಿಗೆ ಮೂರು ದಿನ ಮೊದಲೇ ತಮ್ಮ ಕೋಣೆ ಮಾಹಿತಿ ಸಿಗಲಿದೆ.

ಕಡಿಮೆ ಸಮಯ, ಹಲವು ಅಡೆ-ತಡೆಗಳ ನಡುವೆಯೂ ಫೆ.5ರಿಂದ ನಡೆಯುವ ಮೂರು ದಿನಗಳ ಅಕ್ಷರ ಜಾತ್ರೆಯನ್ನು ಅಚ್ಚುಕಟ್ಟಾಗಿ ಸಂಘಟಿಸಲು ಶ್ರಮಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ನುಡಿ ತೇರು ಎಳೆಯಲು ಆಗಮಿಸುವ ಕನ್ನಡಾಭಿಮಾನಿಗಳಿಗೆ ವಸತಿ ಹಾಗೂ ಸಮ್ಮೇಳನ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ತೊಡಕು ಉಂಟಾಗದಂತೆ ನೋಡಿಕೊಳ್ಳಲು ಕ್ರಮ  ಹಿಸಲಾಗುತ್ತಿದೆ.

22252 ಜನ ನೋಂದಣಿ: ಈ ಹಿಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ಸಮ್ಮೇಳನಕ್ಕೆ ದಾಖಲೆ ಪ್ರಮಾಣದಲ್ಲಿ ನೋಂದಣಿಯಾದ ಪ್ರತಿನಿಧಿಗಳು ಸಾಕ್ಷಿಯಾಗಲಿದ್ದಾರೆ. 21130 ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಯಚೂರು ಸಮ್ಮೇಳನಕ್ಕೆ 12400, ಮೈಸೂರು ಸಮ್ಮೇಳನಕ್ಕೆ 13000 ಹಾಗೂ ಧಾರವಾಡದ ಸಮ್ಮೇಳನಕ್ಕೆ 13500 ಜನ ನೋಂದಣಿ ಮಾಡಿಸಿಕೊಂಡಿದ್ದರು.

21130 ಜನ ನೋಂದಣಿ ಪ್ರತಿನಿಧಿಗಳೊಂದಿಗೆ 550 ಜನ
ರಾಜ್ಯದ ವಿವಿಧ ಜಿಲ್ಲಾ ಕಸಾಪ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಪ್ರತಿನಿಧಿಗಳು, 72 ಜನ ಕಲಬುರಗಿ ಜಿಲ್ಲಾ ಕಸಾಪ ಘಟಕ ಮತ್ತು ತಾಲೂಕುಗಳ ಪ್ರತಿನಿಧಿಗಳು, 500 ಪತ್ರಕರ್ತರು ಸೇರಿ 22252 ಜನ ನೋಂದಣಿ ಪ್ರತಿನಿಧಿಗಳೆಂದು ಪರಿಣಿಸಲಾಗಿದೆ. ಎಲ್ಲರಿಗೂ ಸಮ್ಮೇಳನದ ನೆನಪಿನಲ್ಲಿ ಪೆನ್‌, ಬ್ಯಾಡ್ಜ್ ಮತ್ತು ನೋಟ್‌ಬುಕ್‌ ಒಳಗೊಂಡ ಗುಣಮಟ್ಟದ ಬ್ಯಾಗ್‌ ವಿತರಿಸಲಾಗುವುದು ಎಂದು ಎಂದು ನೋಂದಣಿ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ತಿಳಿಸಿದ್ದಾರೆ.

18 ಸಾವಿರ ಜನರಿಗೆ ವಸತಿ: ಅಕ್ಷರ ಜಾತ್ರೆಗಾಗಿ ನೃಪತುಂಗನ ನಾಡಿನ ರಾಜ್ಯದ ಭಾಗಗಳಿಂದ ಆಗಮಿಸುವ ಒಟ್ಟು 18000 ಜನ ಸಾಹಿತ್ಯಾಸಕ್ತರಿಗೆ ವಾಸ್ತವ್ಯ ಹಾಗೂ ಸಾರಿಗೆ ಸೌಕರ್ಯ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಸರ್ಕಾರಿ ಅತಿಥಿ ಗೃಹಗಳು ಮತ್ತು ಖಾಸಗಿ ಲಾಡ್ಜ್ಗಳ 600 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರಿ, ಖಾಸಗಿಯ 17 ಶಾಲಾ-ಕಾಲೇಜುಗಳ ಕೊಠಡಿಗಳು, ಲೋಕೋಪಯೋಗಿ ಮತ್ತು ಐಎಸ್‌ಐ ಆಸ್ಪತ್ರೆ ಸಿಬ್ಬಂದಿಯ ವಸತಿ ಗೃಹಗಳು ಸೇರಿಂದಂತೆ ಸರ್ಕಾರಿ-ಅರೆ ಸರ್ಕಾರಿ ಸಂಸ್ಥೆಗಳ ಖಾಲಿ ವಸತಿ ಗೃಹಗಳು ಹಾಗೂ 8 ಕಲ್ಯಾಣ ಮಂಟಪಗಳು ಕಲಬುರಗಿ ಅತಿಥಿಗಳಿಗಾಗಿ ಸಿದ್ಧ ಮಾಡಿಕೊಳ್ಳಲಾಗಿದೆ.

ಅತಿಥಿಗಳು ಉಳಿದುಕೊಳ್ಳುವ ಎಲ್ಲ ಕಡೆಗಳಲ್ಲಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲೆ-ಕಾಲೇಜುಗಳ ಕೊಠಡಿಗಳಲ್ಲಿ 6000 ಜನ, ಕಲ್ಯಾಣ ಮಂಪಟಗಳಲ್ಲಿ 5000 ಮಂದಿ ಹಾಗೂ ವಸತಿ ಗೃಹಗಳಲ್ಲಿ 2000 ಜನರು ಉಳಿದುಕೊಳ್ಳಲು ಅವಕಾಶ ಇದೆ. ಎಲ್ಲ ವಾಸ್ತವ್ಯ ಸ್ಥಳಗಳಲ್ಲಿ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಸಮ್ಮೇಳನದ ವಸತಿ ಹಾಗೂ ಸಾರಿಗೆ ಸಮಿತಿಯ ಕಾರ್ಯಾಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರಾಜಾ ಪಿ. ಮಾಹಿತಿ ನೀಡಿದ್ದಾರೆ.

270 ವಾಹನಗಳು: ಸಮ್ಮೇಳನಕ್ಕೆ ಬರುವ ಅತಿಥಿಗಳಿಗಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒಟ್ಟಾರೆ 270 ವಿವಿಧ ವಾಹನಗಳನ್ನು ನಿಗದಿ ಮಾಡಲಾಗಿದೆ. 200 ಶಾಲಾ ಬಸ್‌ಗಳು, 150 ಟ್ಯಾಕ್ಸಿ ಕಾರುಗಳು ಹಾಗೂ 20 ಸಾರಿಗೆ ಬಸ್‌ಗಳು ಸೇವೆ ಕಲ್ಪಿಸಲಿವೆ. ಸಮ್ಮೇಳನಕ್ಕಾಗಿ ಟ್ಯಾಕ್ಸಿಯವರು ಕಡಿಮೆ ದರದಲ್ಲಿ ಕಾರುಗಳ ಒದಗಿಸಲು ಒಪ್ಪಿಕೊಂಡಿದ್ದರೆ, ಶಾಲಾ ಬಸ್‌ಗಳನ್ನು ಉಚಿತವಾಗಿ ಶಾಲಾ ಮಂಡಳಿಯವರು ನೀಡಿದ್ದು, ಸಮಿತಿ ವತಿಯಿಂದ ಡೀಸೆಲ್‌ ಹಾಕಲಾಗುವುದು ಎಂದು ಸಿಇಒ ಡಾ| ರಾಜಾ ಪಿ. ತಿಳಿಸಿದರು.

„ರಂಗಪ್ಪ ಗಧಾರ

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.