ಇತಿಹಾಸದ ಪುಟ ಸೇರಿದ ಕಲಬುರಗಿ ಅಕ್ಷರೋತ್ಸವ
Team Udayavani, Feb 9, 2020, 1:36 PM IST
ಕಲಬುರಗಿ: ಅರಿಸಿಣ-ಕುಂಕುಮ ಹರಡಿದ ಸೂರ್ಯ ನಗರಿ ರಥ ಬೀದಿಗಳಲ್ಲಿ ಸಾವಿರಾರು ಜನರ ಗಿಜಿಗುಡುವ ಸದ್ದು. ಮುಗಿಲು ಮಟ್ಟುವ ಚಪ್ಪಾಳೆ, ಕೇಕೆಯ ಹರ್ಷೋದ್ಘಾರ. ಎಲ್ಲೆಲ್ಲೂ ಜಗಮಗಿಸುವ ವಿದ್ಯುತ್ ದೀಪಾಲಂಕಾರ. ಕನ್ನಡಮ್ಮನ ಝೇಂಕಾರದಿಂದ ನಾಡಿನ ತುಂಬೆಲ್ಲ ಕನ್ನಡ ಕಂಪು ಪಸರಿಸಿದ್ದ ಬಿಸಿಲೂರಿನ ಗುಲಬರ್ಗಾ ವಿವಿಯ ಆವರಣ ಬಿಕೋ ಎನ್ನುತಿತ್ತು.
ಮೂರು ದಶಕಗಳ ಬಳಿಕ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಯಶಸ್ವಿಯಾಗಿ ಕೊನೆಗೊಂಡಿತು. ನಿರೀಕ್ಷೆಗೂ ಮೀರಿ ಜನರು ಅಕ್ಷರ ಜಾತ್ರೆಗೆ ಸಾಕ್ಷಿಯಾಗಿ ಕನ್ನಡ ಪ್ರೇಮ ಮೆರೆದರು. ನುಡಿ ಜಾತ್ರೆಯನ್ನು ಮನೆಯ ಹಬ್ಬ ಎನ್ನುವ ರೀತಿಯಲ್ಲಿ ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿ ಕನ್ನಡದ ಹಿರಿಮೆ-ಗರಿಮೆ ಸಾರಿದರು. ಊಹೆಗೂ ನಿಲುಕದ ಸಂಭ್ರಮ ಕಂಡು ಸಾಗರಕ್ಕೆ ನದಿಗಳು ಸೇರುವಂತೆ ಜನಸಾಗರವೇ ಸಮ್ಮೇಳನಕ್ಕೆ ಹರಿದು ಬಂದಿತ್ತು.
“1987ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಮಸುಕಿನ ಕ್ಷಣಗಳು ನೆನಪಿನಲ್ಲಿವೆ. ಅಂದಿನ ಕೆಲ ಘಟನೆಗಳು ಇಂದಿಗೂ ಕಣ್ಣಿಗೆ ಕಟ್ಟಿಕೊಂಡಿವೆ. ನಮ್ಮೂರಿನ ಅಕ್ಷರ ಜಾತ್ರೆಯನ್ನು ಮತ್ತೂಮ್ಮೆ ಸವಿಯೋಣ ಎಂದುಕೊಂಡಿದ್ದೆ. ಮಗಳ ಪರೀಕ್ಷೆ ಮತ್ತು ಕೆಲಸದ ಕಾರಣ ಬರಲು ಆಗಿರಲಿಲ್ಲ. ಇಂದಾದರೂ ಹೋಗಿ ಬರೋಣ ಎಂದು ಕೈಗಾದಿಂದ ಬಂದಿದ್ದೆ’ ಎನ್ನುತ್ತಿದ್ದಾಗಲೇ ಎಸ್.ಎ. ಕಾಂತಿ ಅವರ ಧ್ವನಿ ಮೆತ್ತಗಾಗಿತ್ತು.
ಕಾಯಕಕ್ಕೆ ಕೊನೆ ಇಲ್ಲ: ಸಮ್ಮೇಳನ ಮುಗಿದರೂ ಶ್ರಮ ಜೀವಿಗಳ ಕಾಯಕಕ್ಕೆ ಕೊನೆ ಇರಲಿಲ್ಲ. ಸಮ್ಮೇಳನಕ್ಕಾಗಿ ನಿರ್ಮಿಸಿರುವ ವೇದಿಕೆಗಳನ್ನು ತೆಗೆಯುತ್ತಿರುವ ದೃಶ್ಯಗಳು, ಸಮ್ಮೇಳನಕ್ಕಾಗಿ ಅಡುಗೆ ಮಾಡಿದ ಪಾತ್ರೆಗಳನ್ನು ಸಿಬ್ಬಂದಿ ಸ್ವಚ್ಛ ಮಾಡುತ್ತಿರುವ ದೃಶ್ಯಗಳು, ವಿಶ್ವವಿದ್ಯಾಲಯ ಆವರಣದಲ್ಲಿನ ಕಸವನ್ನು ತೆಗೆಯುತ್ತಿದ್ದ ದೃಶ್ಯಗಳು ಕಂಡು ಬಂದವು. ಮೂರು ದಿನಗಳ ಕಾಲ ಜನರನ್ನು ಆಕರ್ಷಿಸುತ್ತಿದ್ದ ಕಲಾಕೃತಿಗಳು, ಪುಸ್ತಕ-ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸುವುದು ಹಾಗೂ ಮುಖ್ಯ ವೇದಿಕೆಯಲ್ಲಿ ಹಾಕಲಾಗಿದ್ದ ಕುರ್ಚಿಗಳನ್ನು ಕೂಲಿಗಾರರು ತೆಗೆಯುತ್ತಿದ್ದ .
ಸಮ್ಮೇಳನಕ್ಕೆ ದುಡಿದ ಸಂತೃಪ್ತಿ
ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಾಗರೋಪಾದಿಯಲ್ಲಿ ಹರಿದು ಬಂದ ಕನ್ನಡಾಭಿಮಾನಿಗಳು ಎಷ್ಟು ಕಾರಣವೋ, ಅವರ ಹೊಟ್ಟೆಯನ್ನು ತಣಿಸಿದ ಪಾಕಶಾಲೆಯವರೂ ಅಷ್ಟೇ ಕಾರಣ. ಸಮ್ಮೇಳನದ ಸಿದ್ಧತಾ ಕಾರ್ಯದ ದಿನಗಳಿಂದ ಹಿಡಿದು ಶನಿವಾರದವರೆಗೂ ಸತತ 11 ದಿನಗಳ ಕಾಲ ಒಲೆಗಳ ಮುಂದೆ ಬೆಂದು ಅಡುಗೆ ಮಾಡಿದ ಹುಬ್ಬಳ್ಳಿಯ ಬೈರು ಕೆಟರ್ಸ್‌ನವರಲ್ಲಿ ಸಮ್ಮೇಳನಕ್ಕೆ ದುಡಿದ ಸಂತೃಪ್ತಿ ಕಾಣುತ್ತಿತ್ತು. ಮೊದಲ ದಿನ ಸೇರಿದ ಜನ ಸಂದಣಿ ಕಂಡು ಅಂದೇ ರಾತ್ರಿಯೇ ಹೆಚ್ಚಿನ ಬಾಣಸಿಗರು, ಕೆಲಸಗಾರರನ್ನು ಕರೆಸಿ ಅಡುಗೆ ಮಾಡಿಸಿದವರು ಕೆಟರ್ಸ್ ಮಾಲೀಕ ಬಾಬುಲಾಲ್ ಪ್ರಜಾಪತಿ. ಮೊದಲ ದಿನ 1500 ಜನರು ಅಡುಗೆಯವರು ಇದ್ದರು. ಎರಡು ಮತ್ತು ಮೂರನೇ
ದಿನ ಒಟ್ಟಾರೆ 600 ಬಾಣಸಿಗರು, ಕಲಬುರಗಿಯ 400 ಹಾಗೂ ಹುಬ್ಬಳ್ಳಿಯ 200 ಜನ ಮಹಿಳೆಯರು ಸೇರಿದಂತೆ ಒಟ್ಟಾರೆ 2000 ಜನರು ಅಡುಗೆ ಮಾಡಿದರು. ಅಕ್ಷರ ಜಾತ್ರೆಯಲ್ಲಿ ದುಡಿಯಲು ಸಹಕಾರ ನೀಡಿದ ಕಲಬುರಗಿ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಬಾಬುಲಾಲ್ ಪ್ರಜಾಪತಿ ತಿಳಿಸಿದ್ದಾರೆ.
ನುಡಿ ಜಾತ್ರೆಗಾಗಿ 11 ದಿನಗಳ ಕಾಲ ಶ್ರಮಿಸಲಾಗಿದೆ. ಆರು ದಿನಗಳ ಶೇಂಗಾ ಹೋಳಿಗೆ, ಸಮ್ಮೇಳನದ ಮೂರು ದಿನ ಹಗಲು-ರಾತ್ರಿ ಚಪಾತಿ ಲಟ್ಟಿಸಿದ್ದೇವೆ. ಉಳಿದ ದಿನಗಳಲ್ಲಿ ತರಕಾರಿ ಹೆಚ್ಚಿದ್ದೇವೆ. ಯಾರೊಬ್ಬರಿಗೂ ಊಟ ಕಡಿಮೆ ಆಗಬಾರದು ಎಂಬುವುದೇ ನಮ್ಮ ಉದ್ದೇಶವಾಗಿತ್ತು. ನಮ್ಮೂರಿಗೆ ಬಂದು ಜನರು ಚಪ್ಪರಿಸಿ ತಿಂದಿದ್ದು, ಖುಷಿ ಕೊಟ್ಟಿದೆ.
ಅಂಬುಬಾಯಿ, ಕಲ್ಲಹಂಗರಗಾ ನಿವಾಸಿ
ಕಲಬುರಗಿಯಲ್ಲಿ 32 ವರ್ಷಗಳ ಹಿಂದೆ ಸಾಹಿತ್ಯ ಸಮ್ಮೇಳನ ನಡೆದಿತ್ತಂತೆ. ನನಗೀಗ 25 ವರ್ಷ. ಅಂದರೆ ಆಗ ನಾನು ಆಗ ಹುಟ್ಟೇ ಇರಲಿಲ್ಲ. ಇಷ್ಟು ಸುದೀರ್ಘ ಕಾಲದ ನಂತರ ಸಮ್ಮೇಳನ ನಡೆದಿದೆ ಎಂಬುದನ್ನು ಕೇಳಿಯೇ ರೋಮಾಂಚನಗೊಂಡಿದ್ದೆ. ಮೂರು ದಿನ ತಪ್ಪದೇ ಸಮ್ಮೇಳನದಲ್ಲಿ ಭಾಗಿಯಾದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ.
ಅಂಬಿಕಾ ಬಿ., ಹಳ್ಳಿ, ವಿದ್ಯಾರ್ಥಿ
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.